ಭೋಪಾಲ್​​: ಕೊರೊನಾ ಎರಡನೇ ಅಲೆಯ ಸಂಕಷ್ಟದಲ್ಲಿ ಸೋಂಕಿನ ನಿಯಂತ್ರಣಕ್ಕೆ ಹಲವು ರಾಜ್ಯ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಮಧ್ಯ ಪ್ರದೇಶ ಸರ್ಕಾರ ಕೂಡ ಸಾರ್ವಜನಿಕರು ಒಂದು ಕಡೆ ಸೇರದಂತೆ ಸಾರ್ವಜನಿಕ ಹಾಗೂ ಸಮಾರಂಭಗಳಿಗೆ ಜನರ ಮೀತಿಯನ್ನು ವಿಧಿಸಿದೆ. ಆದರೂ ಸರ್ಕಾರದ ನಿಯಮಗಳನ್ನು ಮೀರಿ ಮದುವೆ ಸಮಾರಂಭಗಳನ್ನು ಆಯೋಜಿಸಲಾಗಿದ್ದು, ಇದನ್ನು ಕಡಿಮೆ ಮಾಡಲು ಮಧ್ಯ ಪ್ರದೇಶ ಪೊಲೀಸ್​​ ವರಿಷ್ಠಾಧಿಕಾರಿಯೊಬ್ಬರು ವಿಶೇಷ ಚಿಂತನೆಯೊಂದನ್ನು ನಡೆಸಿದ್ದಾರೆ.

ಮಧ್ಯ ಪ್ರದೇಶದ ಭಿಂದ್​ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಅವರು ವಿಶೇಷ ಚಿಂತನೆ ಮಾಡಿದ್ದು, ಮದುವೆ ಕಾರ್ಯಕ್ರಮಕ್ಕೆ 10 ಮಂದಿಗಿಂತ ಕಡಿಮೆ ಜನರನ್ನು ಆಹ್ವಾನಿಸಿದರೆ ಅಂತಹ ದಂಪತಿಗಳಿಗೆ ತಮ್ಮ ಮನೆಯಲ್ಲಿ ವಿಶೇಷ ಡಿನ್ನರ್​ ಪಾರ್ಟಿ ಆಯೋಜಿಸುವ ಆಫರ್ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮನೋಜ್​ ಕುಮಾರ್ ಅವರು, 10 ಮಂದಿಗಿಂತ ಕಡಿಮೆ ಜನರ ಸಮ್ಮುಖದಲ್ಲಿ ಮದುವೆಯಾದ ನವದಂಪತಿಗೆ ನಮ್ಮ ಮನೆಯಲ್ಲಿ ವಿಶೇಷ ಊಟದ ವ್ಯವಸ್ಥೆ ಮಾಡುತ್ತೇನೆ. ಅಲ್ಲದೇ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿದ ಹಿನ್ನೆಲೆಯಲ್ಲಿ ವಿಶೇಷ ಸ್ಮರಣಿಕೆ ಹಾಗೂ ಅವರನ್ನು ಕರೆದುಕೊಂಡು ಬಂದು ಬಳಿಕ ಡ್ರಾಪ್​ ಮಾಡಲು ವಾಹನ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

The post ಮದುವೆಯಲ್ಲಿ 10 ಮಂದಿ ಮಾತ್ರ ಭಾಗಿಯಾದ್ರೆ ನವಜೋಡಿಗೆ ಡಿನ್ನರ್ ಪಾರ್ಟಿ ಕೊಡ್ತಾರಂತೆ ಪೊಲೀಸ್ appeared first on News First Kannada.

Source: News First Kannada
Read More