ಮದುವೆಯ ಖುಷಿಯಲ್ಲಿದ್ದ ಪೇದೆ ಶವವಾಗಿ ಪತ್ತೆ; ಹಲವು ಅನುಮಾನ


ಕಲಬುರಗಿ: ಮುಂದಿನ ವಾರ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆಯೊಬ್ಬರು ರೈಲು ಹಳಿ ಮೇಲೆ ರುಂಡ -ಮುಂಡ ಬೇರೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ನಿವಾಸಿಯಾದ ಶ್ರೀನಾಥ್ (25) ಶವವಾಗಿ ಪತ್ತೆಯಾಗಿದ ಪೊಲೀಸ್​ ಪೇದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್​ಗೆ ಡಿಸೆಂಬರ್ 1ರಂದು ಮದುವೆ ನಿಶ್ಚಯವಾಗಿತ್ತು.

ಮದುವೆಗೆ ನಾಲ್ಕೈದು ದಿನ ಬಾಕಿ ಇರುವಾಗ ಸಾವಳಗಿ ಬಳಿ ಹಾದು ಹೋಗಿರುವ ರೈಲು ಹಳಿಯ ಮೇಲೆ ಶವವಾಗಿ ಬಿದ್ದಿದ್ದಾರೆ. ಪೇದೆಯ ಸಾವಿನ ಕುರಿತು ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News First Live Kannada


Leave a Reply

Your email address will not be published. Required fields are marked *