‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ | Jayashree Aradhya Had relationship with Married man For two years she revealed in Bigg Boss OTT


ನಾನು ಹಲವರ ಜತೆ ಫ್ಲರ್ಟ್​ ಮಾಡಿದ್ದೇನೆ ಎಂದರು ಬಿಗ್​ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್. ಈ ಘಟನೆ ಹೇಳಿಕೊಂಡ ಬಳಿಕ ಜಯಶ್ರೀ ಅವರು ತಮ್ಮ ಜೀವನದಲ್ಲಿ ಆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

‘ಬಿಗ್​ ಬಾಸ್ ಒಟಿಟಿ’ (Bigg Boss OTT) ಎರಡೇ ದಿನಕ್ಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಬೇರೆಬೇರೆ ರೀತಿಯ ಮನಸ್ಥಿತಿ ಇರುವ 16 ಸ್ಪರ್ಧಿಗಳು ಮನೆಯಲ್ಲಿ ಸೇರಿದ್ದಾರೆ. ಆ ಪೈಕಿ ಜಯಶ್ರೀ ಆರಾಧ್ಯ (Jayashree Aradhya) ಕೂಡ ಒಬ್ಬರು. ಜಯಶ್ರೀ ಅವರು ಮಾರಿಮುತ್ತು ಮೊಮ್ಮಗಳು. ಅವರು ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿಕೊಳ್ಳುವುದರ ಜತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸಿದ್ದಾರೆ. ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಅವರು ಮದುವೆಯಾದ ವ್ಯಕ್ತಿಯ ಜತೆ ರಿಲೇಶನ್​​ಶಿಪ್​ನಲ್ಲಿದ್ದರು. ಅವರಿಂದ ಜೂಜು ಕಲಿತರು. ಈ ವಿಚಾರದಲ್ಲಿ ಅವರ ಬಗ್ಗೆ ಅವರಿಗೆ ಅಸಹ್ಯ ಹುಟ್ಟಿತ್ತು.

ನಾನು ಹಲವರ ಜತೆ ಫ್ಲರ್ಟ್​ ಮಾಡಿದ್ದೇನೆ ಎಂದರು ಬಿಗ್​ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್. ಈ ಘಟನೆ ಹೇಳಿಕೊಂಡ ಬಳಿಕ ಜಯಶ್ರೀ ಅವರು ತಮ್ಮ ಜೀವನದಲ್ಲಿ ಆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಮದುವೆಯಾದ ವ್ಯಕ್ತಿಯ ಜತೆ ಎರಡು ವರ್ಷ ರಿಲೇಶನ್​ಶಿಪ್​ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್​ಶಿಪ್​ನಲ್ಲಿದ್ದೆ’ ಎದಿದ್ದಾರೆ ಜಯಶ್ರೀ.

‘ನಾನು ಅವರಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದೆ. ಆಮೇಲೆ ಜೂಜು ಬಿಟ್ಟೆ. ಅವರಿಗೂ ಜೂಜು ಬಿಟ್ಟುಬಿಡೋಣ ಎಂದೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ನಾನು ಅವರನ್ನು ಏಕೆ ಬಿಡಲಿಲ್ಲ ಎಂದರೆ ಅವರು ತುಂಬಾನೇ ಕಷ್ಟದಲ್ಲಿದ್ದರು’ ಎಂದಿದ್ದಾರೆ ಜಯಶ್ರೀ.

TV9 Kannada


Leave a Reply

Your email address will not be published. Required fields are marked *