‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ | Aravind Kp And Divya Uruduga Talks About Their Marriage Plan

‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ

ದಿವ್ಯಾ-ಅರವಿಂದ್​ ಕೆಪಿ

ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಎಲ್ಲರ ಗಮನ ಸೆಳೆದಿದ್ದ ಜೋಡಿ ಎಂದರೆ ಅದು ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ. ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಆಪ್ತವಾಗಿದ್ದರು. ಪ್ರೀತಿ ಇದೆ ಎನ್ನುವುದನ್ನು ಪರೋಕ್ಷವಾಗಿ ಇಬ್ಬರೂ ಒಪ್ಪಿಕೊಂಡಿದ್ದರು. ಈಗ ಬಿಗ್​ ಬಾಸ್​ ಮನೆಯಿಂದ ಹೊರ ಬಂದಿರುವ ಈ ಜೋಡಿಯ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಇವರು ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದಕ್ಕೆ ಅರವಿಂದ್​ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈಗ ಕಲರ್ಸ್​ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್​ನೊಂದಿಗೆ ವೀಕ್ಷಕರ ಎದುರು ಬರುತ್ತಿದೆ. ಕಲರ್ಸ್​ ಕನ್ನಡ ಪ್ರತಿಬಾರಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ನಡೆಸುತ್ತದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್​ ನೀಡಲಾಗುತ್ತದೆ. ಅಕ್ಟೋಬರ್​ 15,16,17ರಂದು ಸಂಜೆ 7ಗಂಟೆಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಇದರಲ್ಲಿ ಅರವಿಂದ್ ಹಾಗೂ ದಿವ್ಯಾ ಕೂಡ ಭಾಗಿಯಾಗಿದ್ದಾರೆ.

ಅರವಿಂದ್​ ಕೆಪಿ ಬೈಕ್​ ರೇಸರ್​. ಈ ಕಾರಣಕ್ಕೆ ಅವರು ವೇದಿಕೆ ಮೇಲೆ ಬೈಕ್​ ಓಡಿಸಲಿದ್ದಾರೆ. ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದ ಮೇಕಿಂಗ್​ ವಿಡಿಯೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅವರು ಮದುವೆ ವಿಚಾರ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಅರವಿಂದ್​ಗೆ ಸಾಕಷ್ಟು ಪ್ರಪೋಸ್​ಗಳು ಬಂದಿವೆ. ಇದನ್ನು ಅರವಿಂದ್ ಅವರೇ ಒಪ್ಪಿಕೊಂಡಿದ್ದಾರೆ. ಈ ವೇಳೆ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅರವಿಂದ್ ಕೊಂಚ ನಾಚುತ್ತಲೇ ಉತ್ತರಿಸಿದರು. ‘ಲೈಫ್​ನಲ್ಲಿ ಸಾಧಿಸೋಕೆ ಇನ್ನೂ ತುಂಬಾ ಇದೆ. ಎಲ್ಲವೂ ಪಾಸಿಟಿವ್​ ಆಗಿಯೇ ಇದೆ. ಆ ಸಿಹಿಸುದ್ದಿ ಶೀಘ್ರವೇ ಗೊತ್ತಾಗಲಿದೆ’ ಎಂದರು.

ಇದನ್ನೂ ಓದಿ: ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?

ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ

TV9 Kannada

Leave a comment

Your email address will not be published. Required fields are marked *