ಬಾಲಿವುಡ್ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಈ ತಿಂಗಳ ನವೆಂಬರ್ 29 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಹೌದು ಬಾಲಿವುಡ್ಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಒಂದ್ಕಡೆ ಮುಂದಿನ ತಿಂಗಳು ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಜೋಡಿ ರಾಜಸ್ಥಾನದಲ್ಲಿ ಮದುವೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದ್ರೆ ,ಇನ್ನೊಂದು ಕಡೆ ಕತ್ರಿನಾ ಮದುವೆಗೂ ಮೊದಲು ರಣ್ಬೀರ್ ಆಲಿಯಾ ಎಂಗೆಜ್ ಆಗಲಿದ್ದಾಂತೆ.
ರಣ್ಬೀರ್ ಆಲಿಯಾ ಮದುವೆ ವಿಚಾರ ಆಗಾಗ ಬಾಲಿವುಡ್ನಲ್ಲಿ ಸದ್ದು ಮಾಡುತ್ತೆಲೆ ಇರುತ್ತದೆ. ಈ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಂಡರು ಮದುವೆ ಬಗ್ಗೆ ಏನಾದರು ಪ್ರಶ್ನೆ ಕೇಳಿದ್ರೆ ಮಾತ್ರ ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡೋದಿಲ್ಲ .
ಇನ್ನು ರಾಜಸ್ಥಾನದ ರೆಸಾರ್ಟ್ವೊಂದರಲ್ಲಿ ನವೆಂಬರ್ 29 ಕ್ಕೆ ರಣ್ಬೀರ್ ಅಲಿಯಾ ಎಂಗೆಜ್ಮೆಂಟ್ ನಡೆಯಲಿದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಣಬೀರ್ ಅಗಲಿ ಆಲಿಯಾ ಅಗಲಿ ಇನ್ನೂ ಬಾಯಿ ಬಿಟ್ಟಿಲ್ಲ . ನಟ ರಣ್ಬೀರ್ ಇಂದು ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಾಗ ಅವರ ಆಭಿಮಾನಿಗಳು ಎಂಗೆಜ್ಮೆಂಟ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ ಆಗ ರಣಬೀರ್ ಅವರು ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಲಿದ್ದಾರೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಐಶ್ ದಂಪತಿ ತಂಗಿರೋ ರೆಸಾರ್ಟ್ನ 1 ದಿನದ ಬಾಡಿಗೆ ಎಷ್ಟು ಗೊತ್ತಾ?