ಮದುವೆ ಸಂಭ್ರಮದಲ್ಲಿದ್ದೀರಾ..? ನಿಮಗಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಮದುವೆ ಸಂಭ್ರಮದಲ್ಲಿದ್ದೀರಾ..? ನಿಮಗಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಮದುವೆ ಸಮಾರಂಭಗಳಿಗೆ ಮತ್ತಷ್ಟು ನಿರ್ಬಂಧ ಹೇರಿರುವ ರಾಜ್ಯ ಸರ್ಕಾರ ಈ ಹಿಂದೆ 50 ಜನರಿಗೆ ನೀಡಿದ್ದ ಅವಕಾಶವನ್ನು 40 ಕ್ಕೆ ಇಳಿಸಿ ಆದೇಶಿಸಿದೆ.

ಅಲ್ಲದೇ ಮದುವೆ ಸಮಾರಂಭಗಳನ್ನು ಮನೆಯಲ್ಲೇ ಮಾಡುವಂತೆ ಹೇಳಿದ್ದು ಕಲ್ಯಾಣ ಮಂಟಪ, ಸಮುದಾಯ ಭವನಕ್ಕೆ ನಿರ್ಬಂಧ ವಿಧಿಸಿದೆ. ಜೊತೆಗೆ ಮದುವೆ ಸಮಾರಂಭಕ್ಕೆ ಹೋಗುವವರು ಕಡ್ಡಾಯ ಪಾಸ್ ಪಡೆಯಬೇಕು.. ಬಿಬಿಎಂಪಿ/ತಹಶೀಲ್ದಾರ್ ಅವರಿಂದ ಪಾಸ್ ಪಡೆಯಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ.

The post ಮದುವೆ ಸಂಭ್ರಮದಲ್ಲಿದ್ದೀರಾ..? ನಿಮಗಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ appeared first on News First Kannada.

Source: newsfirstlive.com

Source link