ಬಾಲಿವುಡ್ ನಟ ವಿಕ್ಕಿ ಕೌಶಲ್ ನಟಿ ಕತ್ರಿನಾ ಮನೆಗೆ ಭೇಟಿ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ವಿಕ್ಕಿ ಹಾಗೂ ಕತ್ರಿನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದ್ರೆ ತೆರೆಮರೆಯಲ್ಲಿ ಮದುವೆ ತಯಾರಿ ಜೊರಾಗಿ ನಡೆಯುತ್ತಿದ್ದರೂ ಕೂಡ ಈ ಜೋಡಿ ಮಾತ್ರ ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇದೇ ಡಿಸೆಂಬರ್ 9 ಕ್ಕೆ ಇಬ್ಬರು ಹಸೆಮಣೆ ಏರಲಿದ್ದು ವಿಕ್ಕಿ ಕೌಶಲ್ ನಿನ್ನೆ ರಾತ್ರಿ ಕತ್ರಿನಾ ಮನೆ ಮುಂದೆ ಕಾಣಿಸಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ರಾಜಸ್ಥಾನದ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ನಲ್ಲಿ ಕತ್ರಿನಾ ಹಾಗೂ ವಿಕ್ಕಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಡಿಸೆಂಬರ್ 7 ರಿಂದ 10 ವರೆಗೂ ಮದುವೆ ಕಾರ್ಯಗಳು ನಡೆಯಲ್ಲಿದ್ದು ಬಾಲಿವುಡ್ನ 120 ಸೆಲೆಬ್ರಿಟಿಗಳು ಮದುವೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ಅಲ್ಲಿನ ಜಿಲ್ಲಾಧಿಕಾರಿ ರಾಜೇಂದ್ರ ಕೃಷ್ಣ ಮಾಹಿತಿ ನೀಡಿದ್ದಾರೆ.
ಮದುವೆಗೆ ಹಾಜರಾಗುವ ಎಲ್ಲಾ ಆಥಿತಿಗಳು ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸ ಬೇಕು. ಕೋವಿಡ್ ಲಸಿಕೆ ಪಡೆದ ಸೆಲೆಬ್ರಿಟಿಗಳಿಗೆ ಮಾತ್ರ ಮದುವೆ ನಡೆಯುವ ಸ್ಥಳಕ್ಕೆ ಅವಕಾಶವಿದ್ದು, ಲಸಿಕೆ ಪಡೆಯದವರು ಆರ್ಟಿ-ಪಿಸಿಆರ್ ವರದಿ ತರಬೇಕು ಎಂದು ರಾಜೇಂದ್ರ ಕೃಷ್ಣ ಹೇಳಿದ್ದಾರೆ.