ಮಂಡ್ಯ: ಕೊರೊನಾ ಮಾರಿಯ ಅಟ್ಟಹಾಸಕ್ಕೆ ರಾಜ್ಯ ಸರ್ಕಾರ ಲಾಕ್​ಡೌನ್​ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ನಡೆಯೋ ಮದುವೆ ಸಮಾರಂಭಗಳನ್ನ 20 ಜನರ ಸಮ್ಮುಖದಲ್ಲಿ ಮಾತ್ರ ಮಾಡಬೇಕು ಅಂತ ಸರ್ಕಾರ ಆದೇಶ ಹೊರಡಿಸಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಕೋವಿಡ್ ನಿಯಮ ಮೀರಿ ಅದ್ಧೂರಿಯಾಗಿ ಮದುವೆ ಆಯೋಜನೆ ಮಾಡಿದವರ ವಿರುದ್ಧ ಕೇಸ್​ ದಾಖಲಾಗಿದೆ.

ಮಂಡ್ಯ ತಾಲ್ಲೂಕು ಹೆಚ್.ಮಲ್ಲಿಗೆರೆ ಗ್ರಾಮದ ಅಂಬೆಗಾಲು ಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಸುಮಾರು 300 ಜನರು ಭಾಗಿಯಾಗಿದ್ರು. ವಿಚಾರ ತಿಳಿಯುತ್ತಿದ್ದಂತ್ತೆ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಪೊಲೀಸರು ಮದುವೆ ನಿಲ್ಲಿಸುವಂತೆ ಸೂಚನೆ ನೀಡಿದ್ರು. ಈ ವೇಳೆ ಅಧಿಕಾರಿಗಳು ಹಾಗೂ ಮದುವೆ ಆಯೋಜಕರು ವಾಗ್ವಾದಕ್ಕಿಳಿದರು.

ನಿಯಮ ಉಲ್ಲಂಘಟನೆಯಾಗಿದ್ರೂ ವಾಗ್ವಾದ ಮಾಡಿದ ಹಿನ್ನೆಲೆ ಮದುವೆ ಕಾರ್ಯಕ್ರಮ ಏರ್ಪಡಿಸಿದ್ದವರ ವಿರುದ್ಧ CRPC ಸೆಕ್ಷನ್ ಅಡಿ ಕೇಸ್​ ದಾಖಲಿಸಿಕೊಂಡು, ಮೂರು ಕಾರುಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದೂರು ನೀಡಿದ್ದಾರೆ. ಸದ್ಯ, ಕೆರಗೋಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

The post ಮದುವೆ ಸಮಾರಂಭದಲ್ಲಿ 300 ಜನ ಭಾಗಿ: ಕೇಸ್​ ದಾಖಲು, 3 ಕಾರ್ ಜಪ್ತಿ appeared first on News First Kannada.

Source: newsfirstlive.com

Source link