ಕೊಪ್ಪಳ: ಲಾಕ್​​ಡೌನ್ ಹಿನ್ನೆಲೆಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಕೊಪ್ಪಳದಲ್ಲಿ ಮದ್ಯಪ್ರಿಯರು ತಿರುಗಿಬಿದ್ದಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ 30 ರೂಪಾಯಿಗೆ ಮಾರಾಟವಾಗ್ತಿದ್ದ ಮದ್ಯ ಈಗ 100 ರೂಪಾಯಿಗೆ ಮಾರುತ್ತಿರುವುದನ್ನು ಖಂಡಿಸಿ ಮದ್ಯಪ್ರಿಯರು ಸಭೆ ನಡೆಸಲು ನಿರ್ಧರಿಸಿದ್ದಾರೆ. ದುಪ್ಪಟ್ಟು ದರದ ವಿರುದ್ಧ ದನಿ ಎತ್ತಲು ಎಣ್ಣೆ ಪ್ರಿಯರು ಸಭೆಗೆ ಬರುವಂತೆ ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. 100 ರೂಪಾಯಿಗೆ ಮಾರುತ್ತಿರುವುದನ್ನು ಗರಿಷ್ಠ 50 ರೂಪಾಯಿಗೆ ಮಾರಬೇಕು. ಇಲ್ಲವಾದಲ್ಲಿ ಬಡವರನ್ನು ಲೂಟಿ ಮಾಡುತ್ತಿರುವ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮದ್ಯಪ್ರಿಯರು ಒತ್ತಾಯಿಸಿದ್ದಾರೆ.

The post ಮದ್ಯದ ದುಪ್ಪಟ್ಟು ದರ ಮಾರಾಟ- ಮೀಟಿಂಗ್ ಕರೆದ ಎಣ್ಣೆ ಪ್ರೀಯರು! appeared first on News First Kannada.

Source: newsfirstlive.com

Source link