ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ 14 ದಿನಗಳ ಕಾಲ ಕಠಿಣ ನಿಯಮಗಳನ್ನು ಮುಂದುವರೆಸಿದೆ. ಆದರೆ ಮದ್ಯ ಪ್ರಿಯರಿಗೆ ರಿಲೀಫ್​ ನೀಡಿ ಪ್ರತಿ ದಿನ 4 ಗಂಟೆಗಳ ಕಾಲ ಮದ್ಯ ಪಾರ್ಸೆಲ್​ಗೆ ಅನುಮತಿ ನೀಡಲಾಗಿದೆ.

ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಈ ವೇಳೆ ಪಾರ್ಸೆಲ್​ ನೀಡಲು ಮಾತ್ರ ಅವಕಾಶವಿದೆ ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಮಾಹಿತಿ ನೀಡಿದರು.

ಇತ್ತ ಸರ್ಕಾರ ಲಾಕ್​​ಡೌನ್​ ಘೋಷಣೆ ಮಾಡುತ್ತಿದಂತೆ ಮದ್ಯ ಪ್ರಿಯರು ಮದ್ಯದಂಗಡಿಗಳ ಎದುರು ಕ್ಯೂ ನಿಂತಿದ್ದು, ಬೆಂಗಳೂರು ನಗರದ ರಾಜಾಜಿನಗರದಲ್ಲಿ ಈ ದೃಶ್ಯ ಕಂಡು ಬಂತು. ನಗರದ ಹಲವು ಪ್ರದೇಶಗಳಲ್ಲಿಯೂ ಮದ್ಯಪ್ರಿಯರು ಕ್ಯೂ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

The post ಮದ್ಯ ಪ್ರಿಯರಿಗೆ ರಿಲೀಫ್​- 4 ಗಂಟೆಗಳ ಕಾಲ ಪಾರ್ಸೆಲ್​ಗೆ ಅವಕಾಶ appeared first on News First Kannada.

Source: News First Kannada
Read More