ವಿಜಯಪುರ: ಮದುವೆಯಾದ ಸಂಭ್ರಮದಲ್ಲಿದ್ದ ದಂಪತಿ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಕ್ರೂಸರ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿ ಮದುಮಗಳು ಸಾವನ್ನಪ್ಪಿರೋ ದಾರುಣ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.

ಸಿಂದಗಿ ತಾಲ್ಲೂಕಿನ ಬಿ.ಕೆ. ಯರಗಲ್ ಬಳಿ ಈ ಅಪಘಾತ ನಡೆದಿದೆ. ರಾಣಿ ಮೃತ ಮದುಮಗಳು. ದುರ್ಘಟನೆಯಲ್ಲಿ ಮದುಮಗ, ಗಣೇಶ್ ಸೇರಿ ಏಳು ಜನರಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಗೊಂಡಿರುವವರನ್ನ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇವರ ಮದುವೆ ನಡೆದಿತ್ತು. ಇದೇ ಖುಷಿಯಲ್ಲಿದ್ದ ನೂತನ ದಂಪತಿ ಕುಟುಂಬ ಸಮೇತ ಕೊಕಟನೂರ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿ ಅನಾಹುತ ನಡೆದಿದೆ. ಘಟನೆ ಬಳಿಕ ಸಿಂದಗಿ ಪೊಲೀಸರು ಭೇಟಿ ನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ಮದ್ವೆಯಾದ ಖುಷಿಯಲ್ಲಿ ದೇವರ ದರ್ಶನಕ್ಕೆ ಹೋರಟಾಗ ಭೀಕರ ಅಪಘಾತ; ಮದುಮಗಳು ಸಾವು appeared first on News First Kannada.

Source: newsfirstlive.com

Source link