ಮಂಗಳೂರು: ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಆಗ್ರಹಿಸಿ ಪಾಗಲ್ ಪ್ರೇಮಿಯೊಬ್ಬ ತನ್ನ ಪುಡಿ ರೌಡಿಗಳ ಗ್ಯಾಂಗ್​ ಕಟ್ಟಿಕೊಂಡು ಬಂದು ದಾಂಧಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ಹೊರವಲಯದ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ. ಬಂಟ್ವಾಳ ನಿವಾಸಿಯಾದ ರೌಡಿ ಶೀಟರ್ ಹೇಮಂತ್, ಮೇ 30ರಂದು ರಾತ್ರಿ ಹುಡುಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ. ತಲವಾರು ಮತ್ತು ರಾಡಿನಿಂದ ಮನೆಯಲ್ಲಿದ್ದ ಟಿವಿ, ಸೋಫಾ ಸೇರಿದಂತೆ ಅನೇಕ ವಸ್ತುಗಳನ್ನ ಹಾಳು ಮಾಡಿದ್ದಾನೆ.

ಘಟನೆಯ ಕುರಿತು ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 7 ರೌಡಿಗಳನ್ನ ಬಂಧಿಸಿದ್ದಾರೆ.

The post ‘ಮದ್ವೆ ಮಾಡಿಕೊಡಿ’ ಎಂದು ಹುಡುಗಿ ಮನೆಗೆ ನುಗ್ಗಿ ದಾಂಧಲೆ; ಮುಂದೇನಾಯ್ತು? appeared first on News First Kannada.

Source: newsfirstlive.com

Source link