ನಟಿ, ರಾಜಕಾರಣಿ ನುಸ್ರತ್ ಜಹಾನ್ ಮದುವೆ ಬಗ್ಗೆ ಇತ್ತೀಚೆಗೆ ಹಲವಾರು ಗಾಸಿಪ್ಗಳು ಹರಿದಾಡಿದ್ವು. ಈ ಬಗ್ಗೆ ನುಸ್ರತ್ ಕೊನೆಗೂ ಮೌನ ಮುರಿದಿದ್ದು, ತನ್ನ ಪತಿಯ ಹೆಸರನ್ನೂ ಉಲ್ಲೇಖ ಮಾಡದೇ ಹಲವು ವಿಚಾರಗಳನ್ನ ಜನರಿಗೆ ತಿಳಿಸಿದ್ದಾರೆ.
ನುಸ್ರತ್ ಮತ್ತು ಆಕೆಯ ಪತಿ ನಿಖಿಲ್ ಜೈನ್ ಕೆಲವು ತಿಂಗಳ ಹಿಂದಷ್ಟೇ ಬೇರೆ ಬೇರೆಯಾಗಿದ್ದು, ಅವರು ನನ್ನ ಮದುವೆಗೆ ಖರ್ಚು ಮಾಡಿಲ್ಲ. ಅವರು ಹೋಟೆಲ್ ಬಿಲ್‌ಗಳನ್ನು ಪಾವತಿಸಲಿಲ್ಲ. ಅವರಿಗೆ ನಾನು ಏನನ್ನೂ ಹೇಳಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ ಎಂದಿದ್ದಾರೆ.
ಕೆಲವರು ನನ್ನನ್ನು ತಪ್ಪಾಗಿ ಚಿತ್ರಿಸಿದ್ದಾರೆ ಮತ್ತು ಈಗ ನಾನು ಅದನ್ನು ಸ್ಪಷ್ಟಪಡಿಸಿದ್ದೇನೆ ಅಂತ ನುಸ್ರತ್ ತಿಳಿಸಿದ್ದಾರೆ. ಮತ್ತು ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ತೋರಿಸೋದು ಸುಲಭ. ಆದ್ರೆ ನನ್ನ ವಿಷಯದಲ್ಲಿ ಕೇಳಿಬಂದ ವಿವಾದದಲ್ಲಿ ನಾನು ಯಾರನ್ನೂ ದೂಷಿಸಿಲ್ಲ ಅಂತಾ ಹೇಳಿದ್ದಾರೆ. ನುಸ್ರತ್ ಮತ್ತು ಆಕೆಯ ಪತಿ ನಿಖಿಲ್ ಜೈನ್ ಕೆಲವು ತಿಂಗಳ ಹಿಂದೆ ಬೇರೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ನುಸ್ರತ್ ಜಹಾನ್, ನಿಖಿಲ್ ಅವರೊಂದಿಗಿನ ವಿವಾಹವು ಭಾರತೀಯ ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ಹೇಳಿ ಸುದ್ದಿಯಲ್ಲಿದ್ದರು. ಜೊತೆಗೆ ಅವರ ಪತಿ, ಜಹಾನ್ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ ಎಂದು ಹೇಳಿದ್ದರು.