ಮದ್ವೆ ಸಂಭ್ರಮದಲ್ಲಿರೋ ಕತ್ರಿನಾ-ವಿಕ್ಕಿಗೆ ಸಂಕಷ್ಟ; ಇಬ್ಬರ ವಿರುದ್ಧವೂ ಬಿತ್ತು ಕೇಸ್​


ಬಾಲಿವುಡ್​ ಸೆಲೆಬ್ರಿಟಿ ಜೋಡಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಇದೇ ಡಿಸೆಂಬರ್​ 9 ರಂದು ಹಸೆಮಣೆ ಏರುವ ಸಂಭ್ರಮದಲ್ಲಿದ್ದಾರೆ. ಸದ್ಯ ಜೋಡಿ ವಿರುದ್ಧ ರಾಜಸ್ಥಾನ ಮೂಲದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಯಾಕೆ ದೂರು..?
ರಾಜಸ್ಥಾನದಲ್ಲಿರುವ ಮಾಧೋಪುರದ ಸಿಕ್ಸ್​ ಸೇನ್ಸ್​ ಹೋಟಲ್​ನಲ್ಲಿ ಕತ್ರಿನಾ-ವಿಕ್ಕಿ ಮದುವೆ ತಯಾರಿ ಭಾರದಿಂದ ಸಾಗುತ್ತಿದೆ. ವಕೀಲ ನೇತ್ರಬಿಂದ್ ಸಿಂಗ್ ಜಾದೂನ್ ವಿಕ್ಕಿ ಕತ್ರಿನಾ ಮತ್ತು ಸಿಕ್ಸ್​ ಸೆನ್ಸ್​ ಹೋಟಲ್​ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಕ್ಸ್​ ಸೆನ್ಸ್​ ಹೋಟೆಲ್​ನ ಆಡಳಿತ ಮಂಡಳಿ ವಿರುದ್ಧ ಅಲ್ಲಿನ ಜನಪ್ರಿಯ ದೇಗುಲ ಚೌಥ್ ಮಾತಾ ದೇವಾಲಯಕ್ಕೆ ಹೋಗುವ ರಸ್ತೆಯನ್ನ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ.

News First Live Kannada


Leave a Reply

Your email address will not be published. Required fields are marked *