ಮಧ್ಯಪ್ರದೇಶದಲ್ಲಿ ನಾಳೆ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿಲಿದ್ದಾರೆ ಪ್ರಧಾನಿ ಮೋದಿ | PM Narendra Modi will inaugurate the revamped Rani Kamlapati Railway Station on Monday


ಮಧ್ಯಪ್ರದೇಶದಲ್ಲಿ ನಾಳೆ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿಲಿದ್ದಾರೆ ಪ್ರಧಾನಿ ಮೋದಿ

ನರೇಂದ್ರ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಮಧ್ಯಪ್ರದೇಶಕ್ಕೆ (Madhya Pradesh) ಭೇಟಿ ನೀಡಲಿದ್ದು, ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು(Rani Kamlapati Railway Station) ಉದ್ಘಾಟಿಸಲಿದ್ದಾರೆ. ಈ ಹಿಂದೆ ಈ ರೈಲು ನಿಲ್ದಾಣದ ಹೆಸರು ಹಬೀಬ್‌ಗಂಜ್ ರೈಲು ನಿಲ್ದಾಣ(Habibganj railway station) ಎಂದಾಗಿತ್ತು. ಮರುಅಭಿವೃದ್ಧಿಪಡಿಸಿದ ರೈಲು ನಿಲ್ದಾಣಕ್ಕೆ ಗೊಂಡ ರಾಣಿ ಕಮಾಲಪತಿ ಹೆಸರು ನೀಡಲಾಗಿದೆ. ಆಧುನಿಕ ವಿಮಾನ ನಿಲ್ದಾಣದಂತಹ ಸೌಕರ್ಯಗಳೊಂದಿಗೆ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಮೂರು ವರ್ಷಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ₹ 450 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾಯಿತು. ಇದನ್ನು ಭಾರತೀಯ ರೈಲ್ವೆ ಮಧ್ಯಪ್ರದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ ಎಂದು ಹೇಳಿದೆ. ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂಗವಿಕಲರಿಗೆ ಸುಲಭವಾಗಿ ಬಳಸುವಂತೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಉಜ್ಜಯಿನಿ ಮತ್ತು ಇಂದೋರ್ ನಡುವೆ ಎರಡು ಹೊಸ ಮೆಮು (MEMU) ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಗೇಜ್ ಪರಿವರ್ತನೆ ಮತ್ತು ವಿದ್ಯುದೀಕರಣಗೊಂಡ ಉಜ್ಜಯಿನಿ-ಫತೇಹಾಬಾದ್ ಚಂದ್ರಾವತಿಗಂಜ್ ಬ್ರಾಡ್ ಗೇಜ್ ವಿಭಾಗ ಸೇರಿದಂತೆ ಮಧ್ಯಪ್ರದೇಶದಲ್ಲಿ ರೈಲ್ವೆಯ ಬಹು ಉಪಕ್ರಮಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ರೈಲ್ವೆ ನಿಲ್ದಾಣವನ್ನು ಸಮಗ್ರ ಬಹು-ಮಾದರಿ ಸಾರಿಗೆಯ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗಿದೆ.
ಉದ್ಘಾಟನೆಗೆ ಕೆಲವು ದಿನಗಳ ಮೊದಲು ಮಧ್ಯಪ್ರದೇಶ ಸರ್ಕಾರವು ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಬುಡಕಟ್ಟು ರಾಣಿಯ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಿತು. ರೈಲ್ವೆ ನಿಲ್ದಾಣದ ಮರುನಾಮಕರಣವು ರಾಣಿ ಕಮಲಾಪತಿ ಅವರ ಪರಂಪರೆ ಮತ್ತು ಶೌರ್ಯವನ್ನು ಗೌರವಿಸುತ್ತದೆ ಎಂದು ಪತ್ರದಲ್ಲಿ ಸರ್ಕಾರ ವಾದಿಸಿದೆ.

ಅದರ ಮರುನಾಮಕರಣದ ಹೆಸರನ್ನು ಪ್ರಕಟಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಣಿ ಕಮಲಾಪತಿ ಗೊಂಡ ಸಮುದಾಯದ ಹೆಮ್ಮೆ ಮತ್ತು ಭೋಪಾಲ್‌ನ ಕೊನೆಯ ಹಿಂದೂ ರಾಣಿ ಎಂದು ಹೇಳಿದ್ದಾರೆ.

“ಆಕೆಯ ರಾಜ್ಯವನ್ನು ಆಫ್ಘನ್ ಕಮಾಂಡರ್ ದೋಸ್ತ್ ಮೊಹಮ್ಮದ್ ಪಿತೂರಿ ಮಾಡಿ ವಂಚನೆಯಿಂದ ಆಕ್ರಮಿಸಿಕೊಂಡನು. ಗೆಲುವು ಸಾಧ್ಯವಿಲ್ಲ ಎಂದು ಕಂಡ ಆಕೆ ತನ್ನ ಗೌರವವನ್ನು ಉಳಿಸಿಕೊಳ್ಳಲು ‘ಜಲ್ ಜೌಹರ್’ (ಆತ್ಮಹತ್ಯೆ) ಮಾಡಿದಳು,” ಎಂದು ಅವರು ಹೇಳಿದರು. ರಾಣಿ ಕಮಲಾಪತಿಯನ್ನು “ಹಿಂದೂ ರಾಣಿ” ಎಂದು ಉಲ್ಲೇಖಿಸಿದ್ದಕ್ಕಾಗಿ ಆದಿವಾಸಿಗಳು ಅಸಮಾಧಾನಗೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಹವಾಮಾನ ಬದಲಾವಣೆ ಬಗ್ಗೆ ಸಂದೇಶ ನೀಡಲು ಸಮುದ್ರದ ನೀರಿನಲ್ಲಿ ನಿಂತು ಭಾಷಣ ಮಾಡಿದ ತುವಾಲು ದೇಶದ ಸಚಿವ

TV9 Kannada


Leave a Reply

Your email address will not be published. Required fields are marked *