‘ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆದಿದೆ ಅಷ್ಟೇ’
ನಿನ್ನೆ ಬಿಜೆಪಿ ಕಚೇರಿಯಲ್ಲಿ ಸತತ ಮೂರು ಗಂಟೆಗಳ ಕಾಲ ಸಿಎಂ ಬೊಮ್ಮಾಯಿ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಮಾತನಾಡಿದ ಅವರು ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಆಗಿದೆ. ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಆಗಿದ್ದು ಈ ಬಗ್ಗೆ ಮೊನ್ನೆಯೂ ಚರ್ಚೆ ನಡೆದಿದೆ ಅಂತಾ ಹೇಳಿದ್ರು. ಇನ್ನು ಸಂಪುಟ ವಿಚಾರಣೆಗೆ ದೆಹಲಿಗೆ ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ ಯಾರು ಹೇಳಿದರು ನಾನು ದೆಹಲಿಗೆ ಹೋಗ್ತೇನೆ ಅಂತ. ದೆಹಲಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೆಳಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರ ಮಂಡ್ಯದಲ್ಲಿ ಪ್ರತಿಭಟನೆ ಮಾಡಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗೇಟ್ ಬಳಿ ಕೆಳಸೇತುವೆ ನಿರ್ಮಿಸಬೇಕೆಂದು ಒತ್ತಾಯ ಮಾಡಿದರು. ಈ ವೇಳೆ ಸ್ಥಳದಲ್ಲೇ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು. ಗೌಡಹಳ್ಳಿ ಗ್ರಾಮಕ್ಕೆ ಅಂಡರ್ ಪಾಸ್ ಇಲ್ಲದೆ ಜನರಿಗೆ ತೊಂದರೆಯಾಗುತ್ತಿದೆ. ತಕ್ಷಣವೇ ಅಂಡರ್ ಪಾಸ್ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ರು.
ಮುಗಿದ ಭತ್ತದ ಕೊಯ್ಲು, ಕಟಾವು ಯಂತ್ರಗಳು ವಾಪಸ್
ಭತ್ತದ ಕಣಜ ಎಂದು ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ವರ್ಷ ಎರಡು ಭಾರಿ ಭತ್ತದ ಬೆಳೆ ಬೆಳೆಯಲಾಗುತ್ತದೆ. ಹಾಗಾಗಿ ಭತ್ತ ಕಟಾವು ಯಂತ್ರಗಳನ್ನು ಬಾಡಿಗೆಗೆ ತರಿಸಲಾಗುತ್ತದೆ, ಇದೀಗ ಭತ್ತದ ಕೊಯ್ಲು ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ನೂರಾರು ಭತ್ತದ ಕೊಯ್ಲು ಯಂತ್ರಗಳು ಜಿಲ್ಲೆಯಿಂದ ರೈಲು ಮೂಲಕ ತಮಿಳುನಾಡಿಗೆ ವಲಸೆ ಶುರು ಮಾಡಿವೆ. ಗಂಗಾವತಿ ಭಾಗಕ್ಕೆ ರೈಲು ಸೇವೆ ಸಿಕ್ಕ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಯಂತ್ರಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲಾಗುತ್ತಿದ್ದು, ಕೊಯ್ಲು ಯಂತ್ರಗಳ ಸಾಗಾಣಿಕೆ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಅದ್ಭುತವಾಗಿದೆ ಸೆರೆಯಾಗಿದೆ
‘ಸಂಬಳಕ್ಕೆ ಹಣವಿಲ್ಲದಿದ್ರೆ ನಾನೇ ಕೊಡ್ತೇನೆ’
ನನ್ನ ಸ್ವಂತಕ್ಕೆ ಕೋರ್ಸ್ ಕೇಳಿಲ್ಲ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸೂಚನೆ ಕೊಟ್ಟಿದ್ದರು ಅದರಂತೆ ಕೋರ್ಸ್ಗೆ ಅನುಮತಿ ನೀಡಬೇಕಿತ್ತು ಅಂತಾ ಹಾಸನದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆದಾಗ 224 ಕ್ಷೇತ್ರದಲ್ಲಿ 40 ಕ್ಷೇತ್ರಗಳಲ್ಲಿ ಕಾಲೇಜು ಇರಲಿಲ್ಲ. ನಿಮ್ಮ ಬಳಿ ಸಂಬಳ ಕೊಡಲು ಹಣ ಇಲ್ಲದಿದ್ದರೆ ನಾನೇ ಕೊಡುತ್ತೇನೆ. ನೀವು ಕೋರ್ಸ್ ಕೊಡಿ ಸಾಕು ಅಂತಾ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ದೇಶ ವಿರೋಧಿ ಸುದ್ದಿ ವಿರುದ್ಧ ಸಚಿವರ ಕಿಡಿ
ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡಿಸುವುದಕ್ಕಾಗಿ 20 ಯೂಟ್ಯೂಬ್ ಚಾನೆಲ್ಮತ್ತು ಎರಡು ವೆಬ್ಸೈಟ್ಗಳನ್ನು ನಿರ್ಬಂಧಿಸಲಾಗಿದೆ. ಇದಾದ ಎರಡು ದಿನಗಳ ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ದೇಶ ವಿರೋಧಿ ಸುದ್ದಿ ಪ್ರಸಾರಕರ ವಿರುದ್ಧ ಕಿಡಿ ಕಾರಿದ್ದಾರೆ. ಯಾರಾದರೂ ದೇಶದ ವಿರುದ್ಧ ಪಿತೂರಿ ಮಾಡುವವರ ವಿರುದ್ಧ ಸರ್ಕಾರವು ಕಟ್ಟುನಿಟ್ಟಿನ ಕಾನೂನು ಕ್ರಮಜರುಗಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ಇದೇ 27 ರಂದು ಭಾರತ-ಮಧ್ಯ ಏಷ್ಯಾದ ಮೊದಲ ಶೃಂಗಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ ಆಗಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಸಂದರ್ಭದಲ್ಲಿ ವಿವಿಧ ದೇಶಗಳ ನಾಯಕರು ತಮ್ಮಲ್ಲಿನ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಕಾಪಾಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಎನ್ನಲಾಗಿದೆ. ಇನ್ನು ವರ್ಚುವಲ್ ಶೃಂಗಸಭೆಯಲ್ಲಿ ಕಜಕಿಸ್ತಾನದ ಅಧ್ಯಕ್ಷರಾದ ಕಾಸಿಮ್-ಜೋಮಾರ್ಟ್ ಟೊಕಾಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್, ತಜಿಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹ್ಮನ್, ತುರ್ಕಮೆನಿಸ್ತಾನದ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಜಿಸ್ ರಿಪಬ್ಲಿಕ್ನ ಅಧ್ಯಕ್ಷ ಸಾದಿರ್ ಜಾಪರೋವ್ ಭಾಗವಹಿಸಲಿದ್ದಾರೆ.
ಬಿಪಿನ್ ರಾವತ್ ಸಹೋದರ ಬಿಜೆಪಿಗೆ ಸೇರ್ಪಡೆ
ಇತ್ತೀಚೆಗೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಫಿನ್ ರಾವತ್ ಅವರ ಸಹೋದರ ವಿಜಯ್ ರಾವತ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಉತ್ತರಾಖಂಡ್ನಲ್ಲಿ ವಿಜಯ್ ರಾವತ್ರನ್ನು ಬಿಜೆಪಿ ಕಣಕ್ಕಿಳಿಸಬಹುದು ಅಂತಾ ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಕರ್ನಲ್ ಆಗಿ ಸೇನೆಯಿಂದ ನಿವೃತ್ತರಾಗಿರುವ ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಸಭಾ ಸಂಸದ ಅನಿಲ್ ಬಲುನಿರವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಮಧ್ಯಪ್ರದೇಶದಲ್ಲಿ ಮದ್ಯದ ಬೆಲೆ ಇಳಿಕೆ
ಮಧ್ಯಪ್ರದೇಶ ಸರ್ಕಾರ ನೂತನ ಅಬಕಾರಿ ನೀತಿ 2022 -2023ಕ್ಕೆ ಅನುಮೋದನೆ ನೀಡಿದ್ದು, ಮದ್ಯದ ಬೆಲೆಯನ್ನು ಶೇಕಡ 20ರಷ್ಟು ಇಳಿಸಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮದ್ಯ ನೀತಿಗೆ ಅಂಗೀಕಾರ ನೀಡಲಾಗಿದೆ. ನೂತನ ಅಬಕಾರಿ ನೀತಿಯಡಿ ಮಧ್ಯ ಪ್ರದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ಬೃಹತ್ ನಗರಗಳಲ್ಲಿನ ಆಯ್ದ ಸೂಪರ್ ಮಾರ್ಕೆಟ್ಗಳಲ್ಲಿ ಹಾಗೂ ಮನೆಗಳಲ್ಲಿ ಮಿನಿ ಬಾರ್ ಹೊಂದಲು ಸರ್ಕಾರ ಅವಕಾಶ ಕಲ್ಪಿಸಿದೆ.
ಸಚಿವ ಕಪಿಲ್ ಪಾಟೀಲ್ಗೆ ಕೊರೊನಾ ದೃಢ
ಕೇಂದ್ರ ಪಂಚಾಯತ್ ರಾಜ್ ರಾಜ್ಯ ಖಾತೆ ಸಚಿವ ಕಪಿಲ್ ಪಾಟೀಲ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಕಪಿಲ್ ಪಾಟೀಲ್ಗೆ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ಲಕ್ಷಣಗಳನ್ನು ಕಂಡುಬಂದ ಪರಿಣಾಮ ಕೊರೊನಾ ಟೆಸ್ಟ್ಗ ಒಳಗಾಗಿದ್ದೆ. ಈ ವೇಳೆ ಸೋಂಕು ಇರೋದು ಪತ್ತೆ ಆಗಿದೆ. ಸದ್ಯ ನಾನು ಹೋಮ್ ಐಸೋಲೇಷನ್ನಲ್ಲಿದ್ದು, ಆರೋಗ್ಯ ಉತ್ತಮವಾಗಿದೆ. ಇನ್ನು ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಅಂತಾ ಮನವಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ಗಳ ಸೋಲು ಕಂಡಿದೆ. ಪಾರ್ಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಕಲೆ ಹಾಕಿತ್ತು. ಆಫ್ರಿಕಾ ನೀಡಿದ 297 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಹೊಡೆಯುವಷ್ಟಕ್ಕೆ ಮಾತ್ರ ಸೀಮಿತವಾಗಿ 31 ರನ್ಗಳಿಂದ ಸೋಲು ಕಂಡಿದೆ. ಭಾರತದ ಪರ ಬ್ಯಾಟಿಂಗ್ನಲ್ಲಿ ಕೆಎಲ್ ರಾಹುಲ್ 12, ಶಿಖರ್ ಧವನ್ 79, ಕೊಹ್ಲಿ 51, ಶಾರ್ದೂಲ್ ಠಾಕೂರ್ 50 ರನ್ ಹೊಡೆದ್ರು.