ಭೋಪಾಲ್: ದೇಶದಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಆಕ್ಸಿಜನ್ ಕೊರತೆ ಉಂಟಾದ ಬಗ್ಗೆ ವರದಿಯಾದ ಬೆನ್ನಲ್ಲೇ ಆಕ್ಸಿಜನ್ ಪೂರೈಕೆಗೆ ಹಲವು ಕ್ರಮಗಳನ್ನ ಕೈಗೊಳ್ಳಾಗ್ತಿದೆ. ಇದೇ ನಿಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಬೀಗ ಹಾಕಿ ಸಂಪೂರ್ಣವಾಗಿ ಬಂದ್​ ಆಗಿದ್ದ ಆಕ್ಸಿಜನ್ ಘಟಕವೊಂದನ್ನ ಪುನರಾರಂಭ ಮಾಡಲಾಗಿದೆ

ಮಧ್ಯಪ್ರದೇಶದ ಧಾರ್‌ನ ಪಿತಾಂಪುರ ಕೈಗಾರಿಕಾ ಪ್ರದೇಶದ ಆಮ್ಲಜನಕ ಸ್ಥಾವರವನ್ನ ರೀಓಪನ್ ಮಾಡಲಾಗಿದೆ. ಘಟಕ ಮರುಆರಂಭ ಮಾಡಲು ಸುಮಾರು 150 ಜನರು 24 ಗಂಟೆ ಕೆಲಸ ಮಾಡಿದ್ದು 4 ದಿನಗಳಲ್ಲಿ ಪುನರಾರಂಭಿಸಿದ್ದಾರೆ. ನಾಳೆ ಅಥವಾ ನಾಡಿದ್ದು ಬೆಳಗ್ಗೆಯಿಂದ ಇಲ್ಲಿ ಆಮ್ಲಜನಕ ಪೂರೈಕೆ ಪ್ರಾರಂಭವಾಗಲಿದೆ ಎಂದು ಕಂಪನಿಯ ಆಡಳಿತ ಮಂಡಳಿ ತಿಳಿಸಿದೆ.

 

The post ಮಧ್ಯಪ್ರದೇಶದಲ್ಲಿ 3 ವರ್ಷದಿಂದ ಬೀಗ ಹಾಕಿದ್ದ ಆಕ್ಸಿಜನ್ ಘಟಕ ರೀಓಪನ್ appeared first on News First Kannada.

Source: newsfirstlive.com

Source link