ಮಧ್ಯಪ್ರದೇಶದ ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ಬೆಂಕಿ; ನವಜಾತ ಶಿಶುಗಳು, ವೈದ್ಯರು ಅಪಾಯದಲ್ಲಿ | Children’s ward of Kamla Nehru Hospital in Bhopal of Madhya Pradesh caught fire


ಮಧ್ಯಪ್ರದೇಶದ ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ಬೆಂಕಿ; ನವಜಾತ ಶಿಶುಗಳು, ವೈದ್ಯರು ಅಪಾಯದಲ್ಲಿ

ಸಾಂಕೇತಿಕ ಚಿತ್ರ

ಮಧ್ಯಪ್ರದೇಶದ ಭೋಪಾಲ್​​ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಆಸ್ಪತ್ರೆಯ ಮೂರನೇ ಫ್ಲೋರ್​​ನಲ್ಲಿ ಮಕ್ಕಳ ವಾರ್ಡ್​ ಇದ್ದು, ಇಲ್ಲಿಯೇ ಬೆಂಕಿ ಹೊತ್ತಿಕೊಂಡಿತ್ತು. ಇಲ್ಲಿ ವೈದ್ಯರು, ನವಜಾತ ಶಿಶುಗಳು, ಮಕ್ಕಳು ಅವರ ಪಾಲಕರು ಸಿಕ್ಕಿಬಿದ್ದಿದ್ದು, ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.  

ಇನ್ನು ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ರೋಗಿಗಳನ್ನು ಇನ್ನೊಂದು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಬೆಂಕಿ ಬಿದ್ದ ವಿಷಯ ಕೇಳಿ ಅಲ್ಲಿ ಅಡ್ಮಿಟ್ ಆಗಿರುವ ಮಕ್ಕಳ ಕುಟುಂಬದವರು ಹಲವರು ಅಲ್ಲಿಗೆ ಧಾವಿಸಿದ್ದಾರೆ. ಆದರೆ ಯಾರಿಗೂ ಆಸ್ಪತ್ರೆಯ ಒಳಗೆ ಬರಲು ಅವಕಾಶ ಮಾಡಿಕೊಟ್ಟಿಲ್ಲ. ಘಟನೆ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.  ವೈದ್ಯಕೀಯ ಶಿಕ್ಷಣ ಸಚಿವ ಸಾರಂಗ್​ ವಿಶ್ವಾಸ್​ ಅವರು ಆಸ್ಪತ್ರೆಗ ಭೇಟಿ ನೀಡಿದ್ದಾರೆ.

ಆಸ್ಪತ್ರೆಯ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​, ಬೆಂಕಿ ಬಿದ್ದ ವಾರ್ಡ್​ಗಳಿಂದ ಮಕ್ಕಳನ್ನು ಸುರಕ್ಷಿತ ಮಾಡುವ ಕಾರ್ಯ ನಡೆಯುತ್ತಿದೆ. ನಾನು ಅಲ್ಲಿನ ಪರಿಸ್ಥಿತಿಯ ಸಂಪೂರ್ಣ ವರದಿ ತರಿಸಿಕೊಂಡಿದ್ದೇನೆ. ಎಲ್ಲರನ್ನೂ ರಕ್ಷಿಸಲು ಸಕಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸುರಕ್ಷಿತರಾಗಿರಲಿ  ಎಂದು ದೇವರ ಬಳಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕಡೂರು ಯೋಧ ಹುತಾತ್ಮ: ಪಟಾಕಿ ತೆಗೆದುಕೊಂಡು ದೀಪಾವಳಿಗೆ ಬರ್ತೀನಿ ಅಂದಿದ್ದ ಪ್ರೀತಿಯ ಅಪ್ಪ

TV9 Kannada


Leave a Reply

Your email address will not be published. Required fields are marked *