ಯಾರು ಅನ್ಯಾಯಕ್ಕೆ ಒಳಗಾಗುತ್ತಾರೋ ಅವರ ಪರ ಧ್ವನಿ ಎತ್ತುವುದು. ನ್ಯಾಯ ಸಿಗುವವರೆಗೂ ಹೋರಾಡುವುದು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡುವುದು.. ಇಂತಹ ಕೆಲಸವನ್ನು ತೆರೆಯ ಮೇಲೆ ಹೀರೋ, ಹೀರೋಯಿನ್ಗಳು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಆದ್ರೆ, ಕೆಲವು ಸೆಲೆಬ್ರಿಟಿಗಳ ಜೀವನ ತೆರೆಯ ಹಿಂದೆ ತದ್ವಿರುದ್ಧ ಇರುತ್ತೆ. ಆ ಲಿಸ್ಟ್ಗೆ ತೆಲುಗು ಹೀರೋಯಿನ್ ಕಾವ್ಯಾ ಥಾಪರ್ ಹೊಸ ಸೇರ್ಪಡೆ. ಇದು ಗುಂಡಿನ ಗತ್ತೇ ಗಮ್ಮತ್ತು ಅನ್ನೋ ಕಥೆ.
ಇದೊಂದು ಹಾಲಿವುಡ್ ಸಿನಿಮಾದ ಆ್ಯಕ್ಸಿಡೆಂಟ್ ಸೀನ್ ಅಷ್ಟೇ, ಸಿನಿಮಾಗಳಲ್ಲಿ ಇಂತಹ ಸೀನ್ಗಳು ಕಾಮನ್. ಹಾಲಿವುಡ್, ಬಾಲಿವುಡ್ನಿಂದ ಹಿಡಿದು ಕನ್ನಡ, ತೆಲುಗು ಸಿನಿಮಾಗಳಲ್ಲಿಯೂ ಇಂತಹ ಭಯಾನಕ ಅಪಘಾತದ ಸೀನ್ಗಳನ್ನು ನೋಡಿರುತ್ತೀರಿ. ಹಾಗೇ ಯಾರು ತಪ್ಪು ಮಾಡಿದ್ದಾರೋ ಅಂತಹ ವಿಲನ್ ವಿರುದ್ಧ ಸಿನಿಮಾದ ಹೀರೋ, ಹೀರೋಯಿನ್ ನಿಲ್ಲುತ್ತಾರೆ. ಅವರ ಹೋರಾಟ ಹೇಗಿರುತ್ತೆ ಅಂದ್ರೆ, ನೊಂದವರಿಗೆ ನ್ಯಾಯ ಕೊಡಿಸುವವರೆಗೂ ಬಿಡುವುದಿಲ್ಲ. ಬಟ್, ಅದು ತೆರೆಯ ಮೇಲಿನ ಜೀವನ. ಆದ್ರೆ, ಸಿನಿಮಾ ಸೆಲೆಬ್ರಿಟಿಗಳ ಜೀವನ ತೆರೆಯ ಹಿಂದೆಯೂ ಹಾಗೇ ಇರುತ್ತಾ? ಅಂತ ಪ್ರಶ್ನಿಸಿದ್ರೆ ಖಂಡಿತ ಕೆಲವು ಸೆಲೆಬ್ರಿಟಿಗಳ ಜೀವನ ಹಾಗೇ ಇರುವುದೇ ಇಲ್ಲ. ಈಗಾಗಲೇ ಹಲವಾರು ಘಟನೆಗಳು ಸಾಬೀತು ಮಾಡಿವೆ. ಇದೀಗ ಮತ್ತೊಬ್ಬ ಹೀರೋಯಿನ್ ತನ್ನ ತೆರೆಯ ಹಿಂದಿನ ಜೀವನವನ್ನು ತೆರೆದಿಟ್ಟಿದ್ದಾಳೆ.
ನೋಡಲು ಬೆಳ್ಳಗೆ ತಳ್ಳಗೆ ಇರೋ ಈ ನಟಿಯ ಹೆಸರು ಕಾವ್ಯಾ ಥಾಪರ್. ಈಕೆ ಮುಗುಳು ನಗೆ ಬೀರುತ್ತಾ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ ಬಂದ್ರೆ ಹಾಲು ಬಿಳುಪಿನ ಬೆಳಕನ್ನೇ ಸೀಳಿ ಝಗಮಗಿಸುತ್ತಾಳೆ. ಅಷ್ಟೊಂದು ಅಂದ ಚೆಂದವಾಗಿರೋ ಈಕೆ ತೆಲುಗಿನಲ್ಲಿ ಅಭಿನಯಿಸಿದ್ದು ಮೂರು ಮತ್ತೊಂದು ಸಿನಿಮಾ. ಬಟ್, ನೇಮು ಫೇಮು ಕಮ್ಮಿಯಿಲ್ಲ. ಅನೇಕ ಹಿಂದಿ ಆಲ್ಬಂ ಸಾಂಗ್ಗಳಲ್ಲಿಯೂ ಹೆಜ್ಜೆ ಹಾಕಿ ಖ್ಯಾತಿ ಪಡೆದಿದ್ದಾಳೆ. ಆದ್ರೆ, ಈ ನಟಿಯ ಜೀವನ ತೆರೆಯ ಮೇಲಿರುವಂತೆ ತೆರೆಯ ಹಿಂದೆ ಇಲ್ಲ ಅನ್ನೋದು ಶುಕ್ರವಾರ ಮಧ್ಯ ರಾತ್ರಿ ಸಾಬೀತಾಗಿದೆ. ಅಷ್ಟಕ್ಕೂ ಈ ನಟಿ ಮಾಡಿದ್ದಾದ್ರೂ ಏನು ಗೊತ್ತಾ?
ಇದು ಗುಂಡಿನ ಮತ್ತೇ ಗಮ್ಮತ್ತು ಅನ್ನೋ ವಿಷಯ. ಶುಕ್ರವಾರ ರಾತ್ರಿ ಮುಂಬೈನಲ್ಲಿ ಸ್ನೇಹಿತರ ಜೊತೆ ಕಾವ್ಯಾ ಥಾಪರ್ ವೀಕೆಂಡ್ ಪಾರ್ಟಿಗೆ ಹೋಗಿದ್ದಾರೆ. ಗುಂಡಿನ ಮತ್ತಿನಲ್ಲಿಯೇ ಇದ್ದ ತೆಲುಗು ನಟಿ ಕಾರು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಕಾರಿಗೆ ಗುದ್ದಿದ್ದಾರೆ. ಒಬ್ಬ ವಕ್ತಿಗೆ ಗಾಯವಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಜೊತೆ ಕಾವ್ಯಾ ವಾಗ್ವಾದ ಮಾಡಿದ್ದಾರೆ. ಮಹಿಳಾ ಪೊಲೀಸ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದೆಲ್ಲವೂ ನಡೆದಿರೋದು ಜುಹು ಪೊಲೀಸ್ ಠಾಣೆ ವ್ಯಾಪ್ತಿಯ ನಡು ರಸ್ತೆಯಲ್ಲಿ. ತಕ್ಷಣ ಪೊಲೀಸರು ಈ ನಟಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಯೆಸ್, ಇದಕ್ಕೆ ಹೇಳಿದ್ದು, ಸಿನಿಮಾದ ಕೆಲವು ಸೆಲೆಬ್ರಿಟಿಗಳ ತೆರೆಯ ಮೇಲಿನ ಜೀವನಕ್ಕೂ ತೆರೆಯ ಹಿಂದಿನ ಜೀವನಕ್ಕೂ ಅಜಗಜಾಂತರವಿರುತ್ತೆ ಅಂತ. ಅದು, ಕಾವ್ಯಾ ಥಾಪರ್ ವಿಚಾರದಲ್ಲಿಯೂ ಸತ್ಯವಾಗಿದೆ. ತೆರೆಯ ಮೇಲೆ ಈ ನಟಿಯ ಅಭಿನಯ ಮುಗ್ಧವಾಗಿದೆ. ಒಮ್ಮೆ ಈಕೆಯನ್ನು ಸ್ಕ್ರೀನ್ನಲ್ಲಿ ನೋಡಿದವರು ಪಾಪ ಅದೆಷ್ಟು ಮುಗ್ಧ ಹುಡುಗಿ ಅಂದುಕೊಳ್ಳತ್ತಾರೆ. ಆದ್ರೆ, ತಾನು ಎಷ್ಟು ಮುಗ್ಧೆ ಅನ್ನೋದನ್ನು ಕಾವ್ಯಾ ಸಾಬೀತು ಮಾಡಿ ಬಿಟ್ಟಿದ್ದಾರೆ.
ಮೋಟಾರು ವಾಹನ ಕಾಯ್ದೆ ಅಡಿ ದೂರು ದಾಖಲು
ನಟಿ ಕಾವ್ಯಾ ಥಾಪರ್ಗೆ ನ್ಯಾಯಾಂಗ ಬಂಧನ
ನಟಿಸಿದ್ದು ಮೂರು ಮತ್ತೊಂದು ಸಿನಿಮಾ ಆದ್ರೂ ಈ ನಟಿಗೆ ನೇಮು ಫೇಮು ಇತ್ತು. ಯಾಕಂದ್ರೆ ಈಕೆ ತೆಲುಗು ಸಿನಿಮಾಗಳಲ್ಲಿ ಮುಗ್ಧ ಅಭಿನಯ ತೋರಿಸಿದ್ಲು. ಅದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ರು. ನೋಡಲು ಬೆಳ್ಳಗೆ ತಳ್ಳಗೆ ಇರೋದ್ರಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಆದ್ರೆ, ಮುಂಬೈನಲ್ಲಿ ಕುಡಿದು ರಂಪಾಟ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಮೋಟಾರು ವಾಹನ ಕಾಯ್ದೆ, ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು ಮಾಡಲಾಗಿದೆ. ಹಾಗೇ ಸಾರ್ವಜನಿಕ ಸೇವೆಗೆ ಅಡ್ಡಿ ಪಡಿಸಿದ್ದು, ಪೊಲೀಸರ ಮೇಲೆ ಹಲ್ಲೆ ಮಾಡಿರೋ ಪ್ರಕರಣ ಕೂಡ ದಾಖಲಿಸಲಾಗಿದೆ. ಹಾಗೇ ಈಕೆಯನ್ನು ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾಮೀನು ಸಿಗುವವರೆಗೂ ಜೈಲೇ ಗತಿ
ಮುದ್ದು ಮುಖದ ನಟಿ ಈಗ ಪೊಲೀಸರ ಅಥಿತಿ. ಸಿನಿಮಾದಲ್ಲಿ ಡ್ಯಾನ್ಸ್ ಮಾಡ್ತಾ, ರೋಮ್ಯಾನ್ಸ್ ಮಾಡ್ತಾ ಇರಬೇಕಾದವಳು ಜೈಲಿನಲ್ಲಿ ಮುದ್ದು ಮುರಿಯುವ ಕಾಲ ಬಂದಿದೆ. ಡ್ರಿಂಕ್ ಅಂಡ್ ಡ್ರೈವ್ ಕಾನೂನಾತ್ಮಕವಾಗಿ ಅಪರಾಧ, ಇನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರೋದು, ಮಹಿಳೆ ಪೊಲೀಸ್ ಮೇಲೆ ಹಲ್ಲೆ ಮಾಡಿರೋದು ಮಹಾನ್ ಅಪರಾಧ. ಇಷ್ಟೆಲ್ಲ ಅಪರಾಧ ಹೊಂದಿರೋ ಕಾವ್ಯಾಗೆ ಜಾಮೀನು ಸಿಗುವವರೆಗೂ ಜೈಲೇ ಗತಿ. ಇನ್ನು ಇಂದು ಭಾನುವಾರ. ಹೀಗಾಗಿ ಒಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ರೂ ಅದರ ವಿಚಾರಣೆ ನಡೆಯುವುದು ಸೋಮವಾರವೇ ಆಗಿರುತ್ತೆ. ಕನಿಷ್ಠ ಪಕ್ಷ ಸೋಮವಾರದವರೆಗಾದ್ರೂ ಕಾವ್ಯಾ ಜೈಲಿನಲ್ಲಿಯೇ ವಾಸ ಮಾಡುಬೇಕು.
ತೆಲುಗು, ತಮಿಳು ಸಿನಿಮಾದಲ್ಲಿ ಅಭಿನಯ
ಮೂರೇ ಸಿನಿಮಾದಲ್ಲಿ ಅಭಿನಯಿಸಿದ್ರೂ ಇದೇ ಜನಪ್ರಿಯತೆ
ಕಾವ್ಯಾ ಥಾಪರ್ ಇಲ್ಲಿಯವರೆಗೆ ಅಭಿನಯಿಸಿರೋದು ಮೂರು ಸಿನಿಮಾ ಮಾತ್ರ. ‘ಈ ಮಾಯಾ ಪೆರೆಮಿಟೋ’ ಈಕೆ ಹೀರೋಯಿನ್ ಆಗಿ ಅಭಿನಯಿಸಿದ ಮೊದಲ ತೆಲುಗು ಸಿನಿಮಾ. ಈ ಸಿನಿಮಾದಲ್ಲಿ ಶ್ರೀಮಂತ ಉದ್ಯಮಿಯ ಮಗಳಾಗಿ ಕಾವ್ಯಾ ಕಾಣಿಸಿಕೊಳ್ಳುತ್ತಾಳೆ. ಹಾಗೇ ಉದ್ಯೋಗ ವಿಲ್ಲದೇ ಅಲೆಮಾರಿಯಾಗಿದ್ದ ಹೀರೋ ರಾಹುಲ್ ವಿಜಯ್ ಬಲೆಗೆ ಬೀಳುತ್ತಾಳೆ. ಈ ಸಿನಿಮಾ ಭಾರೀ ಯಶಸ್ಸು ಸಾಧಿಸಿಲ್ಲ. ಆದ್ರೆ, ಕಾವ್ಯಾಗೆ ಹೆಸರು ತಂದುಕೊಟ್ಟಿತ್ತು. ಅನಂತರ ತಮಿಳಿನ ‘ಮಾರ್ಕೆಟ್ ರಾಜಾ ಎಂಬಿಬಿಎಸ್’ ಸಿನಿಮಾದಲ್ಲಿಯೂ ಹೀರೋಯಿನ್ ಆಗಿ ಅಭಿನಯಿಸಿದ್ದಾಳೆ. ಆ ಸಿನಿಮಾದ ಸಕ್ಸಸ್ ಕಾವ್ಯಾಗೆ ಪ್ಲಸ್ ಪಾಂಯಿಟ್ ಆಗಿತ್ತು. ತೆಲುಗಿನ ‘ಏಕ್ ಮಿನಿ ಕಥಾ’ ಸಿನಿಮಾದಲ್ಲಿಯೂ ಅವಕಾಶ ಹುಡುಕಿಕೊಂಡು ಬಂತು. ಈ ಮೂರು ಸಿನಮಾ ಬಿಟ್ರೆ ಆಕೆ ಅಭಿನಯಿಸಿದ ಇತರೆ ಸಿನಿಮಾಗಳು ತೆರೆಗೆ ಬಂದಿಲ್ಲ. ಆದ್ರೆ, ಸಾಕಷ್ಟು ನೇಮು ಫೇಮು ಹೊಂದಿದ್ದಾಳೆ. ಇನ್ನು ಹಿಂದಿಯ ಅನೇಕ ಆಲ್ಬಂ ಸಾಂಗ್ಗಲ್ಲಿಯೂ ಅಭಿನಯಸಿದ್ದಾಳೆ.
ಸೆಲೆಬ್ರಿಟಿಗಳು ವಿವಾದಕ್ಕೆ ಸಿಲುಕುವುದು ಹೊಸ ವಿಚಾರವೇ ಅಲ್ಲ. ಆದ್ರೆ, ಯುವ ನಟಿಯಾಗಿರೋ ಕಾವ್ಯಾ ಥಾಪರ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿತ್ತು. ಆಕೆ ಅಭಿನಯಿಸಿದ್ದು ಮೂರು ಸಿನಿಮಾ ಮಾತ್ರ, ಮೂರಲ್ಲಿಯೂ ಚೆಂದದ ಅಭಿನಯ ನೀಡಿ ಸೈ ಎನಿಸಿಕೊಂಡಿದ್ರು. ಆದ್ರೆ, ಈಗ ಬೇಡದ ರಂಪಾಟ ಮಾಡಿ ಜೈಲು ಸೇರಿದ್ದಾರೆ. ಕೇವಲ ತೆರೆಯ ಮೇಲೆ ಮಾತ್ರ ಆದರ್ಶವಾಗಿ ಇರೋದಲ್ಲ, ತೆರೆಯ ಹಿಂದೆಯೂ ಆದರ್ಶವಾಗಿ ಇರಬೇಕು. ಹಾಗಾದ್ರೆ ಮಾತ್ರ ಅಂತಹ ಹೀರೋ ಹೀರೋಯಿನ್ಗಳು ಜನರಿಗೆ ಆದರ್ಶವಾಗಿ ಇರಲು ಸಾಧ್ಯ.
ಅದು ಸೆಲೆಬ್ರಿಟಿಯಾಗಿರಲಿ, ಸಾಮಾನ್ಯ ಜನರಾಗಿರಲಿ ತಪ್ಪು ಮಾಡಿದ್ರೆ ಶಿಕ್ಷೆಯಾಗಲೇಬೇಕು. ತಾವು ಸ್ಟಾರ್, ತಮಗೆ ನೇಮು ಫೇಮು ಇದೆ ಅಂತ ಏನಾದರೂ ಮಾಡಲು ಹೋದ್ರೆ ಹೀಗೆ ಆಗೋದು. ಅದೆಷ್ಟೇ ದೊಡ್ಡ ಸ್ಟಾರ್ ಆಗಿರಲಿ ಈ ನೆಲದ ಕಾನೂನಿಗೆ ತಲೆ ಬಾಗಿ ನಡೆಯುವುದನ್ನು ಮೊದಲು ಕಲಿಯತುಕೊಳ್ಳಬೇಕು. ಅದನ್ನು ಕಲಿತಿಲ್ಲ ಅಂದ್ರೆ, ಜೈಲು ಸ್ವಾಗತಿಸುತ್ತೆ.