ಚಾಮರಾಜನಗರ: ಕಳೆದ ಮಧ್ಯರಾತ್ರಿ ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್​ಗಳ ಸರಬರಾಜು ಮಾಡಲಾಗಿದೆ.

ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ರೋಗಿಗಳ ಪರದಾಡಿದ್ದರು. ಬೆಳಗ್ಗೆ ಹೊತ್ತಿಗೆ 20ಕ್ಕೂ ಹೆಚ್ಚು ಸೋಂಕಿತರು ಸಾವನ್ನಪ್ಪಿದ್ದರು. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮೈಸೂರಿನ ಪದಕಿ, ಸದರನ್ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಮರ್ಪಕವಾಗಿ ಆಕ್ಸಿಜನ್ ಪೂರೈಸುವಂತೆ ಸಚಿವರು ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಕಳೆದ ರಾತ್ರಿ 100 ಜಂಬೋ ಸಿಲಿಂಡರ್​ಗಳನ್ನ ಚಾಮರಾಜನಗರಕ್ಕೆ ಪೂರೈಕೆ ಮಾಡಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಆತಂಕ ದೂರವಾಗಿದೆ.

The post ಮಧ್ಯರಾತ್ರಿ ಬಂತು ಪ್ರಾಣವಾಯು: ಚಾಮರಾಜನಗರಕ್ಕೆ 100 ಜಂಬೋ ಆಕ್ಸಿಜನ್ ಸಿಲಿಂಡರ್ ರವಾನೆ appeared first on News First Kannada.

Source: newsfirstlive.com

Source link