ಸದಾ ಅತ್ಯಂತ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ. ಇವರ ಕಾಲ್ಶೀಟ್ ಪಡೆಯೋಕೆ ಸಾಲು ಗಟ್ಟಿ ನಿಂತಿರುತ್ತಾರೆ ನಿರ್ಮಾಪಕರು. ಬಾಲಿವುಡ್ ಮತ್ತು ಟಾಲಿವುಡ್ನ ಮೂರು ನಾಲ್ಕು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಾರೆ. ಈಗ ಸಣ್ಣ ಬ್ರೇಕ್ ತೆಗೆದುಕೊಂಡು ರಶ್ಮಿಕಾ ವಿದೇಶಕ್ಕೆ ಹಾರಿದ್ದಾರೆ.
ಹೀಗೆ ಹತ್ತು ಹಲವು ಕಾರಣಗಳಿಗಾಗಿ ಸದ್ದು ಮಾಡುವ ರಶ್ಮಿಕಾ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮಧ್ಯರಾತ್ರಿ ಬೆವರು ಸುರಿಸಿ ಫೋಟೋವೊಂದು ಪೋಸ್ಟ್ ಮಾಡಿದ್ದಾರೆ ಕರ್ನಾಟಕ ಕ್ರಶ್. ಈ ಫೋಟೋವೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಯಾರಾದ್ರೂ ಮಧ್ಯರಾತ್ರಿ ವಾಕ್ ಮಾಡಿ ಬೆವರು ಇಳಿಸುತ್ತಾರಾ, ನಾನು ಮಾಡುತ್ತೇನೆ. ಐ ಲವ್ ಸ್ವೆಟ್ ಎಂದು ಬರೆದುಕೊಂಡಿದ್ದಾರೆ.
Please take some rest too Rash you are working hard we know but still you need rest Baba 🥺🥺🥺❤️ #RashmikaMandanna @iamRashmika pic.twitter.com/9jiiGAlJSX
— Rushieeeee ❤❤❤ (@rushie_mandanna) November 24, 2021
ಸದ್ಯ ರಶ್ಮಿಕಾ ಮಂದಣ್ಣ ಬಹುಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಇವರು ನಟಿಸಿರುವ ‘ಪುಷ್ಪ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ಗೆ ಜೋಡಿಯಾಗಿ ನಟಿಸಿದ್ದಾರೆ. ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.