ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು? | Robert movie actress Asha Bhat reaction on KGF Chapter 2 watch


ಕೆಜಿಎಫ್ 2 (KGF Chapter 2) ಚಿತ್ರದ ತಾರೆಯರಾದ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಗರುಡ, ಆಂಡ್ರು ಅವಿನಾಶ್, ಅಯ್ಯಪ್ಪ, ನಟಿ ಅರ್ಚನಾ ಸೇರಿದಂತೆ ಸ್ಯಾಂಡಲ್​ವುಡ್ ತಾರೆಯರಾದ ನಟಿ ಆಶಾ ಭಟ್, ವಿನಯ್ ರಾಜ್ ಕುಮಾರ್, ಗುರು ರಾಜ್ ಕುಮಾರ್ ಮೊದಲಾದವರು ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯ ರಾತ್ರಿ ಸಿನಿಮಾ ವೀಕ್ಷಿಸಿದ್ದಾರೆ.

ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ನಟಿ ಆಶಾ ಭಟ್, ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಬ್ಬ ಕಲಾವಿದೆಯಾಗಿ, ವೀಕ್ಷಕರಾಗಿ ಹೇಗೆ ನೋಡಿದರೂ ಕೆಜಿಎಫ್ 2 ಅದ್ಭುತವಾಗಿದೆ. ಇದು ನನ್ನ ಸ್ನೇಹಿತೆ ಶ್ರೀನಿಧಿ ಶೆಟ್ಟಿ ಚಿತ್ರ. ಹಾಗಾಗಿ ಮೊದಲ ದಿನವನ್ನು ಮಿಸ್ ಮಾಡಲು ಚಾನ್ಸೇ ಇಲ್ಲ. ಹೀಗಾಗಿ ಎಲ್ಲರೊಂದಿಗೆ ಮಧ್ಯರಾತ್ರಿ ಚಿತ್ರ ವೀಕ್ಷಿಸಿದ್ದೇನೆ. ಚಿತ್ರದಲ್ಲಿರುವ ತಾಯಿಯ ಸೆಂಟಿಮೆಂಟ್​ಅನ್ನು ಅದ್ಭುತವಾಗಿ ತೋರಿಸಿದ್ದಾರೆ. ಅದು ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದಿದ್ದಾರೆ ಆಶಾ ಭಟ್.

ಹೆಚ್ಚಿನ ಜನರು ಕನ್ನಡ ಸಿನಿಮಾವಾಗಿ ಗುರುತಿಸುತ್ತಿದ್ದಾರೆ. ಇದು ಕಲಾವಿದರಾಗಿ ನಮ್ಮ ಚಿತ್ರರಂಗದ ಮೇಲೆ ಹೆಮ್ಮೆ ಹಾಗೂ ಖುಷಿ ತರುವ ವಿಚಾಋ. ಜತೆಗೆ ದೊಡ್ಡ ಭರವಸೆ, ಅವಕಾಶಗಳನ್ನೂ ಇದು ಸೃಷ್ಟಿಸುತ್ತದೆ ಎಂದು ನುಡಿದಿದ್ದಾರೆ ಆಶಾ ಭಟ್.

TV9 Kannada


Leave a Reply

Your email address will not be published.