ಮಧ್ಯರಾತ್ರಿ DKS ನಿವಾಸಕ್ಕೆ ನೋಟಿಸ್ ಅಂಟಿಸಿದ ಪೊಲೀಸರು..!


ರಾಮನಗರ: ಸರ್ಕಾರದ ಆದೇಶದಂತೆ ಪಾದಯಾತ್ರೆಯನ್ನ ನಿಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ರಾಮನಗರ ಎಸಿ, ಡಿವೈಎಸ್​ಪಿ ನೋಟಿಸ್​ ಜಾರಿ ಮಾಡಿದ್ದಾರೆ.

ಮಧ್ಯರಾತ್ರಿ ರಾಮನಗರ ಜಿಲ್ಲೆಯ ಕನಕಪುರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿ ಗೇಟ್​ ಮುಂದೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ನೋಟಿಸ್​ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆ ಗೇಟ್​ಗೆ ನೋಟಿಸ್ ಅಂಟಿಸಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಕಡೆ ಇಂದು ಬೆಳಗ್ಗೆಯಿಂದ ಕನಕಪುರದಲ್ಲಿರುವ ಡಿಕೆಎಸ್ ನಿವಾಸದಲ್ಲಿ ಇರುತ್ತಿದ್ದ ಜನಸಂಖ್ಯೆ ಕಡಿಮೆ ಆಗಿದೆ. ಪಾದಯಾತ್ರೆ ಆರಂಭದ ದಿನದಿಂದಲೂ ಜನರ ದಂಡೇ ಸೇರುತ್ತಿತ್ತು. ಕೋರ್ಟ್ ಆದೇಶದ ಬೆನ್ನಲ್ಲೆ ಪಾದಯಾತ್ರೆ ಬಗ್ಗೆ ಅನಿಶ್ಚಿತತೆ ಮೂಡಿದೆ. ಈ ಹಿನ್ನೆಲೆಯಲ್ಲಿ ಡಿಕೆಎಸ್ ನಿವಾಸದ ಬಳಿ ನಾಯಕರು, ಕಾರ್ಯಕರ್ತರು ಕಾಣಿಸಿಕೊಳ್ತಿಲ್ಲ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *