ಆಡಳಿತ ಸಂಸ್ಥೆಯ ಕಟ್ಟಡಗಳು ಹಾನಿಗೀಡಾಗಿವೆ ಬಹುಮಹಡಿ ಕಟ್ಟಡಗಳು, ಶಾಲೆ, ಸಾಂಸ್ಕೃತಿಕ ಅರಮನೆ, ನಗರ ಸಭೆ ಕಟ್ಟಡಕ್ಕೆ ಹಾನಿಯಾಗಿದೆ. ಪಟ್ಟಣದಲ್ಲಿ ವಿದ್ಯುತ್ ತಂತಿಗಳು ತುಂಡಾಗಿದ್ದು, ಸಾವಿರಾರು ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ

Image Credit source: AP
ಕೈವ್: ಮಧ್ಯ ಉಕ್ರೇನ್ನ (Ukraine) ಡ್ನಿಪ್ರೊಪೆಟ್ರೋವ್ಸ್ಕ್ (Dnipropetrovsk) ಪ್ರದೇಶದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ 13 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಗವರ್ನರ್ ಬುಧವಾರ ತಿಳಿಸಿದ್ದಾರೆ. ಇದು ಭಯಾನಕ ರಾತ್ರಿ ಆಗಿತ್ತು 11 ಜನರ ಹತ್ಯೆಯಾಗಿದೆ ಎಂದು ವ್ಯಾಲೆಂಟಿನ್ ರೆಜ್ನಿಚೆಂಕೊ ಟೆಲಿಗ್ರಾಮ್ ನಲ್ಲಿ ಬರೆದಿದ್ದಾರೆ. ಇನ್ನೊಂದು ಪೋಸ್ಟ್ನಲ್ಲಿ ಅವರು ಮತ್ತಿಬ್ಬರು ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಿಂದ ಡ್ನೀಪರ್ ನದಿಯ ಇನ್ನೊಂದು ಬದಿಯಲ್ಲಿ ಮಾರ್ಗನೆಟ್ಸ್ ಗ್ರಾಮದ ಮೇಲೆ ನಡೆದ ದಾಳಿಯಲ್ಲಿ ಹನ್ನೆರಡು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಕೌನ್ಸಿಲ್ ಮುಖ್ಯಸ್ಥ ಮೈಕೋಲಾ ಲುಕಾಶುಕ್ ಹೇಳಿದ್ದಾರೆ. ಆಡಳಿತ ಸಂಸ್ಥೆಯ ಕಟ್ಟಡಗಳು ಹಾನಿಗೀಡಾಗಿವೆ ಬಹುಮಹಡಿ ಕಟ್ಟಡಗಳು, ಶಾಲೆ, ಸಾಂಸ್ಕೃತಿಕ ಅರಮನೆ, ನಗರ ಸಭೆ ಕಟ್ಟಡಕ್ಕೆ ಹಾನಿಯಾಗಿದೆ. ಪಟ್ಟಣದಲ್ಲಿ ವಿದ್ಯುತ್ ತಂತಿಗಳು ತುಂಡಾಗಿದ್ದು, ಸಾವಿರಾರು ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.