ಕನ್ನಡತಿ ಸೀರಿಯಲ್ ವೀಕ್ಷಕರದ್ದು ಒಂದೇ ಕಂಪ್ಲೇಂಟ್‌. ಅದೇನಂದ್ರೆ, ಅದ್ಯಾವಾಗ ಮತ್ತೆ ಹಳೇ ಟ್ರ್ಯಾಕ್ ಶುರುವಾಗುತ್ತೇ. ಅಮ್ಮಮ್ಮ ಫ್ಯಾಮಿಲಿನಾ ಯಾವಾಗ ನೋಡೋದು? ಯಾವಾಗ ಮತ್ತೆ ಈ ಟೀಮ್‌ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತೆ? ಅನ್ನೋದು.

ಸುದ್ದಿ ಏನಂದ್ರೆ, ಈಗಾಗ್ಲೇ ಅಮ್ಮಮ್ಮ ಫ್ಯಾಮಿಲಿಯ ಶೂಟಿಂಗ್ ಅಂತೂ ಶುರುವಾಗಿದೆ. ಸದ್ಯದಲ್ಲಿಯೇ ಈ ಟ್ರ್ಯಾಕ್‌ ಶುರುವಾಗ್ಲಿದೆ. ಅಮ್ಮಮ್ಮ, ಆದಿ, ಸುಚಿ ಅಂಡ್ ಸಾನ್ಯ ಮತ್ತೆ ವಾಪಸ್ ಬರಲಿದ್ದಾರೆ. ಬಟ್ ಅದಕ್ಕೂ ಮುನ್ನ ಅಮ್ಮಮ್ಮ ಒಂದ್‌ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಅಮ್ಮಮ್ಮನ ಕನ್ನಡತಿ ಸೀರಿಯಲ್‌ನಲ್ಲಿ ಮಿಸ್ ಮಾಡಿಕೊಂಡವರು ಅವರನ್ನ ಇನ್ನೊಂದು ಸೀರಿಯಲ್‌ನಲ್ಲಿ ನೋಡ್ಬಹುದು. ಆ ಸೀರಿಯಲ್ ಯಾವ್ದು ಅಂದ್ರಾ?… ಅದೇ ಉದಯ ಟಿವಿಯಲ್ಲಿ ಪ್ರಸಾರವಾಗೋ ಮನಸಾರೆ.

ಅಮ್ಮಮ್ಮ ಎಂದೆ ಖ್ಯಾತರಾಗಿರೋ ನಟಿ ಚಿತ್ಕಲಾ ಬಿರಾದಾರ್ ಅವರು ಮನಸಾರೆ ಧಾರವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಮನಸಾರೆ ಧಾರವಾಹಿಗೆ ಟ್ವಿಸ್ಟ್ ಸಿಕ್ಕಿದ್ದು, ​ರಾಮ್​ ಅವರ ತಾಯಿಯಾಗಿ ಬ್ಯುಸಿನೆಸ್‌ ವುಮನ್‌ ದಮಯಂತಿ ಪಾತ್ರದಲ್ಲಿ ಅಮ್ಮಮ್ಮ ಕಾಣಿಸಿಕೊಂಡಿದ್ದಾರೆ.

ಮನಸಾರೆ ಧಾರವಾಹಿಯಲ್ಲಿ ದಮಯಂತಿ ಪಾತ್ರದ ಪ್ರವೇಶವಾಗಿದೆ. ಆದ್ರೆ, ಪ್ರಾರ್ಥನಾಳ ಪ್ರಾರ್ಥನೆ ನೆರವೇರೋಕೆ ಬಿಡ್ತಾಳಾ ದಮಯಂತಿ ಅನ್ನೋದೇ ಸದ್ಯದ ಪ್ರಶ್ನೆ.

The post ‘ಮನಸಾರೆ’ ಧಾರವಾಹಿಗೆ ಎಂಟ್ರಿ ಕೊಟ್ಟ ‘ಅಮ್ಮಮ್ಮ’ appeared first on News First Kannada.

Source: newsfirstlive.com

Source link