ಮನಸಾರೆ ಹಾಗೂ ಮನಸೆಲ್ಲಾ ನೀನೇ ಧಾರಾವಾಹಿಯ ಖ್ಯಾತ ನಟಿ ಪ್ರಿಯಾಂಕಾ ಚಿಂಚೊಳ್ಳಿ ಫೆಬ್ರುವರಿ 14 ಅಂದ್ರೆ ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ಉದ್ಯಮಿ ರಾಕೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ರು.. ಈ ಬಗ್ಗೆ ನಾವೂ ನಿಮಗೆ ಮಾಹಿತಿ ತಿಳಿಸಿದ್ವಿ..
ಆದಾದ ಬಳಿಕ ಅಗಸ್ಟ್ 11 ರಂದು ಕುಟುಂಬಸ್ತರ ಅಶೀರ್ವಾದೊಂದಿಗೆ ನಟಿ ಪ್ರಿಯಾಂಕಾ ರಿಜಿಸ್ಟರ್ ಮ್ಯಾರೆಜ್ ಮಾಡಿಕೊಂಡ್ರು.. ಕರೋನ ಕಾರಣದಿಂದ ಈ ಒಂದು ಡಿಸಿಶನ್ನ ಪ್ರಿಯಾಂಕಾ ಹಾಗೂ ರಾಕೇಶ್ ಫ್ಯಾಮಿಲಿಯವ್ರು ತಗೊಂಡಿದ್ರು.. ಆದ್ರೆ ಪ್ರಿಯಾಂಕಾ ಅವ್ರು ಈ ಬಗ್ಗೆ ಮಾತನಾಡುವಾಗ ನಾವು ಸದ್ಯಕ್ಕೆ ರಿಜಿಸ್ಟರ್ ಮ್ಯಾರೆಜ್ ಆಗಿದ್ದೀವಿ.. ಇನ್ನು ಕೆಲ ದಿನಗಳಲ್ಲಿ ಸಾಂಪ್ರದಾಯಕವಾಗಿ ವಿವಾಹವಾಗ್ತಿವಿ ಎಂಬ ಮಾಹಿತಿಯನ್ನ ನೀಡಿದ್ರು.. ಇದೀಗ ಅವ್ರ ಮದುವೆ ಡೇಟ್ ಫಿಕ್ಸ್ ಆಗಿದೆ..
ಹೌದು, ಮದುವೆ ಅಂದ್ರೆ ಒಂದು ಗಂಡು ಹಾಗೂ ಹೆಣ್ಣಿನ ಜೀವನದ ಪ್ರಮುಖ ಗಟ್ಟ.. ನನ್ನ ಮದುವೆ ಹೀಗೇ ನಡಿಬೇಕು ಅನ್ನುವ ಕನಸನ್ನು ಎಲ್ಲಾರು ಕಂಡಿರ್ತಾರೆ.. ಆದ್ರೆ ಕಲವರ ಜೀವನದಲ್ಲಿ ಕಂಡ ಕನಸು ಕನಸಾಗಿಯೇ ಉಳಿದಿದೆ.. ಅದಕ್ಕೆ ಕಾರಣ ಕೋವಿಡ್.. ಇದೇ ಕಾರಣದಿಂದ ಪ್ರಿಯಾಂಕಾ ಕೂಡ ಕೊಂಚ ಬೇಸರಗೊಂಡಿದ್ರು.. ಇದೀಗ ಅವ್ರ ಕನಸು ನನಸಾಗುವ ಸಮಯ ಬಂದಿದೆ..
ಮದುವೆ ಅಂದ್ರೆ ಸಂಭ್ರಮ ಮದುವೆ ಅಂದ್ರೆ ಎರಡು ಕುಟುಂಬಗಳ ಬೆಸುಗೆ.. ಮದುವೆ ಅಂದ್ರೆ ಎರಡು ಜೀವಗಳ ಪವಿತ್ರ ಬಂಧನ. ಈ ಬಂಧನಕ್ಕೆ ಇದೆ ಡಿಸೆಂಬರ್ 10 ರಂದು ಪ್ರಿಯಾಂಕಾ ರಾಕೇಶ್ ಸಾಕ್ಷಿಯಾಗಲಿದ್ದಾರೆ.. ಹೌದು, ಪ್ರಿಯಾಂಕಾ ಡಿಸೆಂಬರ್ 10ಕ್ಕೆ ಸಪ್ತಪದಿ ತುಳಿಯಲಿದ್ದಾರೆ..
ಮದುವೆ ಅಂದ್ರೆ ಬರಿ ಒಂದು ದಿನದ ಸಡಗರವಲ್ಲಾ.. ಆ ಶಾಸ್ತ್ರ ಈ ಶಾಸ್ತ್ರ ಅಂತಾ ಒಂದು ವಾರದ ಸಂಭ್ರಮ ಅಂತ ಹೇಳಿದ್ರೆ ತಪ್ಪಾಗಲ್ಲಾ.. ಪ್ರಿಯಾಂಕಾ ರಾಕೇಶ್ ಮದುವೆಗೂ ಕೂಡ ಎಲ್ಲಾ ಶಾಸ್ತ್ರಗಳ ತಯಾರಿ ನಡಿತಾಯಿದೆ..
ಡಿಸೆಂಬರ್ 7ಕ್ಕೆ ಪ್ರಿಯಾಂಕಾ ಅವ್ರ ಚಿಕ್ಕಮ್ಮನ ಮನೆಯಲ್ಲಿ ಅದ್ಧೂರಿಯಾಗಿ ಮೆಹಂದಿ ಶಾಸ್ತ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆಯಂತೆ.. ಇಲ್ಲಿಗೆ ತಮ್ಮ ಫ್ಯಾಮಿಲಿ ಹಾಗೂ ಕ್ಲೋಸ್ ಒನ್ಸ್ನ ಇನ್ವೈಟ್ ಮಾಡಿದ್ದೀವಿ ಅಂತಾ ಸ್ವತಃ ಪ್ರಿಯಾಂಕಾ ಮಾಹಿತಿ ನೀಡಿದ್ದಾರೆ..
ಇನ್ನು ಡಿಸೆಂಬರ್ 9 ರಂದು ಗಂಡಿನ ಕಡೆಯವ್ರು ಅಂದ್ರೆ ರಾಕೇಶ್ ಫ್ಯಾಮಿಲಿ ಹಾಗೂ ಪ್ರಿಯಾಂಕಾ ಫ್ಯಾಮಿಲಿಯವ್ರು ದೇವನಹಳ್ಳಿಯಲ್ಲಿರುವ ರೇಸೋರ್ಟ್ಗೆ ತೆರಳಲಿದ್ದು.. ಅಲ್ಲಿ ಮಧ್ಯಾಹ್ನದ ನಂತ್ರ ಹಳದಿ ನಡೆಯಲಿದೆ.. ಪ್ರತಿಯೊಬ್ಬರು ಕೂಡ ಒಂದೊಂದು ಥೀಮ್ನಲ್ಲಿ ಹಳದಿ ಶಾಸ್ತ್ರವನ್ನು ಆರೆಂಜ್ ಮಾಡಿರ್ತಾರೆ.. ಪ್ರಿಯಾಂಕಾ ಹಾಗೂ ರಾಕೇಶ್ ಹಳದಿ ಶಾಸ್ತ್ರ ಪೂಲ್ನಲ್ಲಿ ನೆಡೆಯಲಿದೆ.. ಹಾಗೂ ವಿಭಿನ್ನ ಡ್ರೆಸ್ ಕೋಡ್ ಕೂಡ ಪ್ಲಾನ್ ಮಾಡಿದ್ದಾರೆ.. ಇಲ್ಲಿ ವಧು-ವರ ಹಳದಿ ಬಣ್ಣದ ಕಾಸ್ಟ್ಯೂಮ್ ಧರಿಸಲಿದ್ದು.. ಇತರರು ಪಿಂಕ್ ಬಣ್ಣದ ಬಟ್ಟೆಗಳನ್ನು ಧರಿಸಲಿದ್ದಾರೆ..
ಅದೇ ದಿನ ಅಂದ್ರೆ ಡಿಸೆಂಬರ್ 9 ರಂದು ಸಂಜೆ 7 ಗಂಟೆಗೆ ಬಹಳ ಗ್ರ್ಯಾಂಡ್ ಆಗಿ ಸಂಗೀತ ಕಾರ್ಯಕ್ರಮ ನೆಡೆಯಲಿದೆ.. ವಿಶೇಷ ಅಂದ್ರೆ ಸಂಗಿತ್ ಕಾರ್ಯಕ್ರಮಕ್ಕೋಸ್ಕರ ಈಗಿಂದಾನೆ ತಯಾರಿ ನಡಿತಾಯಿದೆ.. ಅಂದ್ರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಡ್ಯಾನ್ಸ್ ಕೊರಿಯೋಗ್ರಫಿ ನಡಿತಾಯಿದೆ ಅಂತೆ.. ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡ್ಬೇಕು ಅನ್ನೊದು ಪ್ರಿಯಾಂಕಾ ಹಾಗೂ ರಾಕೇಶ್ ಪ್ಲಾನ್ ಆಗಿದೆ.. ಹಾಗೂ ಸಖತ್ ಎಕ್ಸೈಟ್ ಆಗಿದ್ದೀನಿ ಅಂತಾ ಪ್ರಿಯಾಂಕ ತಿಳಿಸಿದ್ದಾರೆ..
ಡಿಸೆಂಬರ್ 10ಕ್ಕೆ ಸಂಜೆ 4 ಗಂಟೆಗೆ ಮುಹೂರ್ತ ಕಾರ್ಯಕ್ರಮ ನೆಡೆಯಿಲ್ಲಿದ್ದು ರಾಜ್ಪುತ್ ಹಾಗೂ ಸೌತ್ಇಂಡಿಯನ್ ಸ್ಟೈಲ್ನಲ್ಲಿ ಕಲ್ಯಾಣ ಶಾಸ್ತ್ರಗಳ ಮೊಳಗಲಿವೆಯಂತೆ.. ಅಂದು ಪ್ರಿಯಾಂಕ ಹಾಗೂ ರಾಕೇಶ್ ಮರೂನ್ ಹಾಗೂ ಗೋಲ್ಡ್ ಕಾಂಬಿನೇಷನ್ ಕಾಸ್ಟ್ಯೂಮ್ ಪ್ಲಾನ್ ಮಾಡಿದ್ದಾರೆ.. ಕಾರಣ ಇವ್ರು ಮದುವೆಯಾಗುವ ಮಂಟಪ ಗೋಲ್ಡ್ ಕಲರ್ ಆಗಿರುತ್ತಂತೆ.. ಹಾಗೂ ಫಿಲ್ಮಿ ಲುಕ್ನಲ್ಲಿ ಮಂಟಪದ ಪ್ಲಾನ್ ಮಾಡಿದ್ದಾರೆಂದು ಪ್ರಿಯಾಂಕಾ ತಿಳಿಸಿದ್ದಾರೆ..
ಸಂಜೆ 7 ಗಂಟೆಯ ನಂತ್ರ ರಿಸೆಪ್ಶನ್ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ಪ್ಲಾನ್ ಮಾಡಿದ್ದಾರಂತೆ.. ಇನ್ನೂ ಮದುವೆಗೆ ಫ್ಯಾಮಿಲಿ ಮೆಂಬರ್ಸ್ ಹಾಗೂ ಕ್ಲೋಸ್ ಒನ್ಸ್ನ ಮಾತ್ರ ಇನ್ವೈಟ್ ಮಾಡಿದ್ದಾರಂತೆ.. ಕರೋನ ಕಾರಣದಿಂದ ಹೆಚ್ಚು ಜನರನ್ನ ಇನ್ವೈಟ್ ಮಾಡಿಲ್ಲಾ.. ಒಟ್ಟು 150 ರಿಂದ 200 ಜನರು ಸೇರುವ ಸಾದ್ಯತೆಯಿದೆ..ಅಂತಾ ಪ್ರಿಯಾಂಕಾ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದಾರೆ..