ಚಿಕ್ಕೋಡಿ: ಸಿಎಂ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಬಿಎಸ್‍ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಇರುವುದು ಟೀಕೆ ಮಾಡುವುದಕ್ಕೆ, ವಿರೋಧ ಮಾಡುವುದು ಅವರ ಗುಣ : ಕಟೀಲ್

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿಎಂ ಯಡಿಯೂರಪ್ಪ ನಿನ್ನೆ ಮನಸ್ಸಿಗೆ ಆದ ಬೇಸರದಿಂದ ಹಾಗೆ ಹೇಳಿದ್ದಾರೆ. ಅನೇಕರು ಬೇರೆಬೇರೆ ತರಹ ಮಾತನಾಡಿದ್ದರಿಂದ ಈ ರೀತಿ ಹೇಳಿರಬಹುದು. ಕೊರೊನಾ ಸಂದರ್ಭದಲ್ಲಿ ಇಂತಹ ಚಟುವಟಿಕೆ ಸರಿಯಲ್ಲ, ಅಂತಾ ಭಾವನೆ ಇಟ್ಟುಕೊಂಡು ಅವರು ಹೇಳಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ವಿಜಯೇಂದ್ರ, 7 ಮಂದಿ ಆಪ್ತರ ವಿರುದ್ಧ ದೂರು

ನಾಯಕತ್ವ ಬದಲಾವಣೆ ಪ್ರಶ್ನೆ ನಮ್ಮ ವರಿಷ್ಠರ ಮುಂದೆಯೂ ಇಲ್ಲ. ಸ್ಥಳೀಯ ಕೆಲ ವಿಚಾರಗಳಿಂದ ಅವರ ಮನಸ್ಸಿಗೆ ನೋವಾಗಿ ಹಾಗೇ ಹೇಳಿದ್ದಾರೆ. ನಾನು ರಾಯಚೂರು ಮತ್ತು ನನ್ನ ಕ್ಷೇತ್ರದ ಪ್ರವಾಸದಲ್ಲಿ ಇದ್ದೇನು. ನಾನು ಇವತ್ತು ಬೆಂಗಳೂರಿಗೆ ಹೋಗುತ್ತೇನೆ. ವಾಸ್ತವ ವಿಚಾರ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತನೆ. ಸ್ಥಳೀಯ ಮುಖಂಡರ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿ ಹೇಳಿದ್ದಾರೆ ಎಂಬುದು ನನ್ನ ಅನಿಸಿಕೆಯಾಗಿದೆ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಉತ್ತರ ಕರ್ನಾಟಕದವರು ಸಿಎಂ ಆಗಲಿ ಎಂದು ವಿಶ್ವನಾಥ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ವಿಶ್ವನಾಥ ಅವರ ವೈಯಕ್ತಿಕ ವಿಚಾರ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

The post ಮನಸ್ಸಿಗೆ ಆದ ಬೇಸರದಿಂದ ಬಿಎಸ್‍ವೈ ಹಾಗೆ ಹೇಳಿದ್ದಾರೆ: ಡಿಸಿಎಂ ಸವದಿ appeared first on Public TV.

Source: publictv.in

Source link