ನವದೆಹಲಿ: ಕಂಪ್ಯೂಟರ್​ನ ಕೀಬೋರ್ಡ್​ನ್ನು ವೇಗವಾಗಿ ಟೈಪ್ ಮಾಡುವುದೇ ಒಂದು ಕಲೆ ಎನ್ನಬಹುದು. ಸಾಮಾನ್ಯವಾಗಿ ಕೀಬೋರ್ಡ್​ನ್ನು ಕೈಬೆರಳುಗಳಿಂದಲೇ ಬಳಸಲಾಗುತ್ತದೆ. ಕೆಲವು ವಿಶೇಷ ಚೇತನರು ಕಾಲ್ಬೆರಳುಗಳಿಂದಲೂ ಕೀಬೋರ್ಡ್ ಟೈಪ್ ಮಾಡುವುದನ್ನು ಕಲಿತಿರ್ತಾರೆ. ಆದ್ರೆ ಇಲ್ಲೊಬ್ಬ ಸಾಧಕ ಮೂಗಿನಿಂದಲೂ ಕೀಬೋರ್ಡ್ ಟೈಪ್ ಮಾಡುತ್ತಾರೆ. ಕೇವಲ ಟೈಪ್ ಮಾಡೋದಷ್ಟೇ ಅಲ್ಲ ಅತೀ ವೇಗವಾಗಿ ಟೈಪ್ ಮಾಡೋ ಮೂಲಕ ಗಿನ್ನಿಸ್ ರೆಕಾರ್ಡ್​ಗಳನ್ನೇ ಮುರಿದಿದ್ದಾರೆ.

41 ವರ್ಷದ ಜೆಎನ್​ಯು ಕಂಪ್ಯೂಟರ್ ಆಪರೇಟರ್ ಮಿ. ಚೌಧರಿ ಹೀಗೆ ಮೂಗಿನಲ್ಲೇ ಕೀಬೋರ್ಡ್ ಕುಟ್ಟುವ ಕಲೆಯನ್ನ ಕರಗತ ಮಾಡಿಕೊಂಡ ಕಲಾವಿದ. ಈತ ಈವರೆಗೆ ಒಟ್ಟು 9 ಗಿನ್ನಿಸ್ ದಾಖಲೆಗಳನ್ನ ಮುರಿದಿದ್ದಾರೆ. 2014 ರಲ್ಲಿ ಮೂಗಿನಿಂದ ಟೈಪ್ ಮಾಡುವ ಮೂಲಕ ಸಾಧನೆ ಮಾಡಿದ್ದ ಇವರು ನಂತರ ಕಣ್ಣಿಗೆ ಬಟ್ಟೆಕಟ್ಟಿಕೊಂಡು, ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಅದರ ಮೂಲಕ ಟೈಪ್ ಮಾಡುವುದನ್ನೂ ಕಲಿತಿದ್ದಾರೆ.

ನನಗೆ ವೇಗವಾಗಿ ಟೈಪ್ ಮಾಡುವುದೆಂದರೆ ಇಷ್ಟ.. ನಾನು ಬಾಲಕನಾಗಿದ್ದ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದೆ.. ಬೆಳೆಯುತ್ತಾ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕ್ರೀಡೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಂಪ್ಯೂಟರ್​ನಲ್ಲಿ ಸ್ಪೀಡ್​ ಆಗಿ ಟೈಪ್ ಮಾಡುವುದನ್ನು ಕಲಿಯುತ್ತಾ ಹೋದೆ. 2014 ರಲ್ಲಿ 46.30 ಸೆಕೆಂಡ್​ಗಳಲ್ಲಿ 103 ಕ್ಯಾರೆಕ್ಟರ್​ಗಳನ್ನು ಮೂಗಿನಿಂದ ಟೈಪ್ ಮಾಡುವ ಮೂಲಕ ಮೊದಲ ದಾಖಲೆ ಮುರಿದೆ. ನನಗೆ ರೆಕಾರ್ಡ್​ ಮುರಿದ ಸರ್ಟಿಫಿಕೇಟ್ ಸಿಕ್ಕಾಗ ಬೇರೆ ಬೇರೆ ರೀತಿಯಲ್ಲಿ ಟೈಪ್ ಮಾಡುವುದನ್ನು ಅಭ್ಯಾಸ ಮಾಡುತ್ತಾ ಮತ್ತಷ್ಟು ದಾಖಲೆಗಳನ್ನು ಮುರಿಯಲು ಪ್ರೇರಣೆ ಸಿಕ್ಕಿತು. ಒಂದು ವರ್ಷಕಾಲ ನಿರಂತರ ಅಭ್ಯಾಸ ಮಾಡಿ 2016 ರಲ್ಲಿ ಎರಡನೇ ದಾಖಲೆ ಮುರಿದೆ.- ಚೌಧರಿ, ಜೆಎನ್​ಯೂ ಕಂಪ್ಯೂಟರ್ ಆಪರೇಟರ್

ಚೌಧರಿ ಅವರು 2016 ರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 6.71 ಸೆಕೆಂಡ್​ಗಳಲ್ಲಿ ಆಲ್ಫಬೆಟ್​ಗಳನ್ನು ಟೈಪ್ ಮಾಡುವ ಮೂಲಕ ಈ ಹಿಂದೆ ಇದ್ದ 6.09 ಸೆಕೆಂಡ್​ಗಳ ದಾಖಲೆಯನ್ನು ಮುರಿದಿದ್ದಾರೆ. ಸೋಷಿಯಾಲಜಿಯಲ್ಲಿ ಮಾಸ್ಟರ್ ಡಿಗ್ರಿಯನ್ನೂ ಪಡೆದಿರುವ ಚೌಧರಿ 2017 ರಲ್ಲಿ 18.65 ಸೆಕೆಂಡ್​ಗಳಲ್ಲಿ ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಎಲ್ಲಾ ಆಲ್ಫಬೆಟ್​ಗಳನ್ನೂ ಟೈಪ್ ಮಾಡುವ ಮೂಲಕ ಮತ್ತೊಂದು ದಾಖಲೆ ಮುರಿದಿದ್ದಾರೆ.

ಸಚಿನ ದಾಖಲೆ ಮುರಿಯುವುದೇ ಈತನ ಗುರಿ..

ಇನ್ನು 2018 ರಲ್ಲ 17.69 ಸೆಕೆಂಡ್​ಗಳಲ್ಲಿ ಎಲ್ಲಾ ಆಲ್ಫಬೆಟ್​ಗಳನ್ನೂ ಬಾಯಲ್ಲಿ ಕಡ್ಡಿ ಸಿಕ್ಕಿಸಿಕೊಂಡು ಟೈಪ್ ಮಾಡುವ ಮೂಲಕ ತಮ್ಮದೇ ದಾಖಲೆಯನ್ನ ಮುರಿದಿದ್ದಾರೆ. 2019 ರಲ್ಲಿ 29.53 ಸೆಕೆಂಡ್​ಗಳಲ್ಲಿ ಒಂದೇ ಬೆರಳಿನಲ್ಲಿ ಎಲ್ಲಾ ಆಲ್ಫಬೆಟ್​ಗಳನ್ನೂ ಟೈಪ್ ಮಾಡುವ ಮೂಲಕ ಮತ್ತೊಂದು ದಾಖಲೆಯನ್ನೂ ಮುರಿದಿದ್ದಾರೆ.

ತಮ್ಮ ಗುರಿಯ ಬಗ್ಗೆ ಹೇಳಿಕೊಂಡಿರುವ ಚೌಧರಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮಾಡಿರುವ 19 ದಾಖಲೆಗಳಿಗಿಂತಲೂ ಹೆಚ್ಚು ದಾಖಲೆಗಳನ್ನು ಮುರಿಯುವುದೇ ನನ್ನ ಗುರಿ ಎಂದಿದ್ದಾರೆ.

The post ಮನಸ್ಸಿದ್ದರೆ ಮಾರ್ಗ; ಕೀ ಬೋರ್ಡ್ ಕುಟ್ಟುತ್ತಲೇ ಇವರು ಮಾಡಿದ ದಾಖಲೆಗಳು ನಿಮಗೂ ಸ್ಫೂರ್ತಿ appeared first on News First Kannada.

Source: newsfirstlive.com

Source link