‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ | Sreelekha Mitra makes reels of Manike Mage Hithe bengali version watch viral video here


‘ಮನಿಕೆ ಮಗೆ ಹಿತೆ’ ರೀಲ್ಸ್ ಮಾಡುವಂತೆ ದುಂಬಾಲು ಬಿದ್ದ ಅಭಿಮಾನಿಗಳ ಆಸೆ ನೆರವೇರಿಸಿದ ನಟಿ; ವಿಡಿಯೋ ನೋಡಿ

ನಟಿ ಶ್ರೀಲೇಖಾ ಮಿತ್ರ

‘ಮನಿಕೆ ಮಗೆ ಹಿತೆ’ ಹಾಡು ಅಂತರ್ಜಾಲದಲ್ಲಿ ಬಹುದೊಡ್ಡ ಹವಾ ಸೃಷ್ಟಿಸಿದ್ದು, ಖ್ಯಾತ ತಾರೆಯರಿಂದ ಹಿಡಿದು ಪ್ರತಿಯೊಬ್ಬರೂ ಆ ಹಾಡಿಗೆ ರೀಲ್ಸ್ ತಯಾರಿಸಿ ಹರಿಬಿಡುತ್ತಿದ್ದಾರೆ. ಶ್ರೀಲಂಕಾ ಮೂಲದ ಯೋಹಾನಿ ದಿಲೋಕಾ ಡಿ ಸಿಲ್ವಾ ಈ ಹಾಡಿನ ಕವರ್ ಸಾಂಗ್ ರಚಿಸಿ, ಯುಟ್ಯೂಬ್​ಗೆ ಅಪ್​ಲೋಡ್ ಮಾಡಿದಾಗ, ಅದು ಇಷ್ಟು ದೊಡ್ಡ ಜನಪ್ರಿಯತೆ ಪಡೆಯಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲವೇನೋ! ಅದೇನೇ ಇದ್ದರೂ ಸೆಲೆಬ್ರಿಟಿಗಳು ಆ ಹಾಡಿಗೆ ತಮ್ಮ ವರ್ಷನ್ ಸೇರಿಸಿ, ಅಪ್ ಲೋಡ್ ಮಾಡಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ. ಒಂದು ವೇಳೆ ಸೆಲೆಬ್ರಿಟಿಗಳು ತಾವಾಗಿಯೇ ಮನಿಕೆ ಮಗೆ ಹಿತೆಗೆ ಸ್ಟೆಪ್ ಹಾಕದಿದ್ದರೆ, ಅಭಿಮಾನಿಗಳು ಗೋಗರೆದು, ವಿಡಿಯೋ ಹರಿಬಿಡುವಂತೆ ಕೋರಿಕೊಳ್ಳುವುದೂ ಇದೆ. ಖ್ಯಾತ ಬೆಂಗಾಳಿ ನಟಿ ಶ್ರೀಲೇಖಾ ಮಿತ್ರ ಈ ಸಾಲಿಗೆ ತಾಜಾ ಉದಾಹರಣೆ.

ಬೆಂಗಾಳಿ ನಟಿಯಾಗಿರುವ  ಶ್ರೀಲೇಖಾ ಮಿತ್ರ, ಮನಿಕೆ ಮಗೆ ಹಿತೆ ಹಾಡಿನ ಬಂಗಾಳಿ ಅವತರಣಿಕೆಗೆ ಹೆಜ್ಜೆ ಹಾಕಿದ್ದಾರೆ. ಮೂಲ ಸಿಂಹಳೀ ಭಾಷೆಯ ಹಾಡಿನ ಬದಲಾಗಿ, ಬಂಗಾಳಿ ಜಾನಪದ ಸೊಗಡನ್ನು ಹೊಂದಿರುವ ಅವತರಣಿಕೆಗೆ ಹೆಜ್ಜೆ ಹಾಕಿರುವುದು ಮೆಚ್ಚುಗೆಗೆ ಪಾತ್ರವಾಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶ್ರೀಲೇಖಾ, ‘ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ’ ಎಂದು ಬರೆದಿದ್ದಾರೆ. ಅವರು ಹಾಗೆ ಬರೆಯಲೂ ಕಾರಣವಿದೆ.

ಇತ್ತೀಚೆಗಷ್ಟೇ ಶ್ರೀಲೇಖಾ ತಮ್ಮ ಸ್ಟೋರಿಯಲ್ಲಿ ‘ಮನಿಕೆ ಮಗೆ ಹಿತೆ’ಯ ಕುರಿತಾಗಿ ಬರೆದುಕೊಂಡಿದ್ದರು. ಅದರ ನಂತರ ಅಭಿಮಾನಿಗಳು ಅವರಿಗೆ ‘ಮನಿಕೆ ಮಗೆ ಹಿತೆ’ಗೆ ರೀಲ್ಸ್ ಮಾಡುವಂತೆ ನಟಿಗೆ ದುಂಬಾಲು ಬಿದ್ದಿದ್ದಾರೆ. ಆಗ ವಿಡಿಯೋ ಮಾಡಿ ಅಪ್​ಲೋಡ್ ಮಾಡುವುದಾಗಿ ಮಾತು ನೀಡಿದ್ದ ಶ್ರೀಲೇಖಾ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಶ್ರೀಲೇಖಾ ಹಂಚಿಕೊಂಡ ವಿಡಿಯೊ ಇಲ್ಲಿದೆ:

‘ಮನಿಕೆ ಮಗೆ ಹಿತೆ’ಯ ಮೂಲ ಬಂಗಾಳಿ ಅವತರಣಿಕೆ ಇಲ್ಲಿದೆ:

ಬೆಂಗಾಳಿ ನಟಿಯಾಗಿರುವ ಶ್ರೀಲೇಖಾ ಹಲವು ಖ್ಯಾತ ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಸ್ವೆಟರ್, ಭೂಟರ್ ಭಬಿಷ್ಯೋತ್, ಒನ್ಸ್ ಅಪಾನ್ ಎ ಟೈಮ್ ಇನ್ ಕೋಲ್ಕತ್ತಾ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಘಟಂ ತಾಳವಾದ್ಯದ ಜೊತೆ ಮನಿಕೆ ಮಗೆ ಹಿತೆ ಹಾಡು; ವೈರಲ್ ಆಯ್ತು ವಿಡಿಯೊ

Photos: ಶಿವಣ್ಣನ ಜತೆ ವಿಶಾಲ್​ ಮಾತುಕತೆ; ಪುನೀತ್​ ಫೋಟೋಗೆ ಹಾರ ಹಾಕಿ ನಮಿಸಿದ ತಮಿಳು ನಟ

TV9 Kannada


Leave a Reply

Your email address will not be published. Required fields are marked *