ಮನುಷ್ಯರಂತೆ ಹಲ್ಲುಗಳಿರುವ ಮೀನು ಕಂಡು ಗಾಬರಿಯಾದ ಮೀನುಗಾರರು -ಏನಿದು ಅಚ್ಚರಿ..?


ಕೊಪ್ಪಳ: ಮನುಷ್ಯನ ಮುಖದಂತಿರುವ ವಿಶೇಷ ಮೀನು ಒಂದು ಜಿಲ್ಲೆಯ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿದೆ. ವಿಚಿತ್ರ ಮೀನನ್ನ ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದಾರೆ.

ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಈ ಮೀನು ಪತ್ತೆಯಾಗಿದೆ. ಮೀನಿನ ಬಾಯಿಯಲ್ಲಿ ಮನುಷ್ಯರಿಗೆ ಇರುವಂತೆ ಹಲ್ಲುಗಳು ಕಂಡು ಬಂದಿವೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಸಿಕ್ಕಿದೆ.

ಈ ರೀತಿಯ ಮೀನನ್ನ ನಾವು ಇದೇ ಮೊದಲ ಬಾರಿಗೆ ನೋಡಿದ್ದೇವೆ. ಈ ಹಿಂದೆ ಎಲ್ಲಿಯೂ ನಮಗೆ ಸಿಕ್ಕಿರಲಿಲ್ಲ. ಗಾಳಕ್ಕೆ ಸಿಕ್ಕಿರುವ ಮೀನನ್ನ ನೋಡಿ ನನಗೆ ಆಶ್ಚರ್ಯ ಆಯಿತು. ನಂತರ ಅದನ್ನ ಮನೆಗೆ ತರಲು ಮನಸ್ಸು ಆಗಲಿಲ್ಲ. ಹೀಗಾಗಿ ಮತ್ತೆ ನದಿಗೆ ಬಿಟ್ಟಿರುವುದಾಗಿ ಮೀನುಗಾರ ರಫಿ ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *