Categories
Cinema

ಮನುಷ್ಯ ಗುರುತಿನ ಸುತ್ತ ‘ಡಿಎನ್‌ಎ’

“ಡಿಎನ್‌ಎ ’- ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಸೆಟ್ಟೇರಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಪ್ರಮೋಶನಲ್‌ ಸಾಂಗ್‌ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.

ಯೋಗರಾಜ್‌ ಭಟ್‌ ಬರೆದಿರುವ ಪ್ರಮೋಶನಲ್‌ ಸಾಂಗ್‌ ಅನ್ನು ನೀನಾಸಂ ಸತೀಶ್‌ ಹಾಡಿದ್ದಾರೆ. ಮನುಷ್ಯನ ಪಯಣದ ಸುತ್ತ ಈ ಹಾಡನ್ನು ಬರೆಯಲಾಗಿದೆ. ಈ ಚಿತ್ರವನ್ನು ಪ್ರಕಾಶ್‌ ರಾಜ್‌ ಮೆಹು ನಿರ್ದೇಶಿಸಿದ್ದಾರೆ. ಮೈಲಾರಿ ಎಂ ಈ ಚಿತ್ರದ ನಿರ್ಮಾಪಕರು.

ಚಿತ್ರದ ಬಗ್ಗೆ ಮಾತನಾಡುವ ಪ್ರಕಾಶ್‌ ರಾಜ್‌ ಮೆಹು, “ನಾನು ಕಳೆದ 25 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ. ಆದರೆ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಕಲಾತ್ಮಕವೂ ಆಗದೇ, ಪೂರ್ಣ ಕಮರ್ಷಿಯಲ್‌ ಚಿತ್ರವೂ ಆಗದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್‌ಎ ಮಾಡಿದ್ದೇನೆ. ಇದೊಂದು ಗುರುತಿನ ಕಣದ ಸಿನಿಮಾ’ ಎಂದರು.

ಚಿತ್ರದಲ್ಲಿ ಅಚ್ಯುತ್‌ ಕುಮಾ ರ್‌ ಪ್ರಮುಖ ಪಾತ್ರ ಮಾಡಿ ದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.

ನಾಯಕಿ ಎಸ್ತರ್‌ ನರೋನ್ಹಾ ಕೂಡಾ ಒಳ್ಳೆಯ ಕಥೆ, ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿ ಕೊಂಡರು.  ಉಳಿದಂತೆ ರೋಜರ್‌ ನಾರಾಯಣ್‌, ಮಾಸ್ಟರ್‌ ಕೃಷ್ಣ ಚೈತನ್ಯ ನಟಿಸಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದು ಎನ್ನುವುದು ನಿರ್ಮಾಪಕ ಮೈಲಾರಿ ಮಾತು. ಚಿತ್ರಕ್ಕೆ ಚೇತನ್‌ ಸಂಗೀತವಿದೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್‌ ಚಿತ್ರ ತಂಡಕ್ಕೆ ಶುಭ ಕೋರಿದರು.

ಸಿನೆಮಾ – Udayavani – ಉದಯವಾಣಿ
Read More

Leave a Reply