ಬೆಳಗಾವಿ: ಜೀವಂತವಿರುವ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೋರ್ವ ಸೈಕಲ್​​ ಏರಿ ಬಂದ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಹಾವು ಈ ವ್ಯಕ್ತಿಯ ಮನೆಗೆ ಬಂದಿತ್ತು ಎನ್ನಲಾಗಿದೆ. ಈ ವೇಳೆ ಹಾವನ್ನು ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಡಲು ಹೊರಟಿದ್ದಾರೆ.

ವ್ಯಕ್ತಿ ಕೊರಳಿಗೆ ಹಾವು ಸುತ್ತಿಕೊಂಡು ಸೈಕಲ್​​ ಮೇಲೆ ತನ್ನ ಹೊಲದತ್ತ ಹೋಗುತ್ತಿರೋ ದೃಶ್ಯ ನೋಡಿ ಸ್ಥಳೀಯರು ಹುಬ್ಬೇರಿಸಿದ್ದಾರೆ. ಗ್ರಾಮದ ಯುವಕರು ಈ ದೃಶ್ಯವನ್ನು ನೋಡಿ ಮೊಬೈಲ್​​ನಲ್ಲಿ ಫೋಟೋ ಹಾಗೂ ವಿಡಿಯೋ ಸೆರೆಹಿಡಿದ ಸೋಷಿಯಲ್​​ ಮೀಡಿಯಾಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಇವರ ಧೈರ್ಯಕ್ಕೆ ಜನರಿಂದ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು, ಈ ವ್ಯಕ್ತಿ ತನ್ನ ಪ್ರಾಣವನ್ನು ಲೆಕ್ಕಿಸದೇ ಧೈರ್ಯದಿಂದಲೇ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ. ಬೇರೆ ಯಾರಾದರೂ ಇದೇ ಸ್ಥಳದಲ್ಲಿ ಇದ್ದಿದ್ದರೆ ಒಂದೋ ಓಡಿ ಹೋಗುತ್ತಿದ್ದರು, ಅಥವಾ ಹಾವಿನ ಪ್ರಾಣ ತೆಗೆಯುತ್ತಿದ್ದರು. ಆದರೀಗ, ಈ ವ್ಯಕ್ತಿ ಮಾಡಿರುವುದು ಮಾತ್ರ ಅಭಿನಂದಾರ್ಹ ಕಾರ್ಯ ಅಂತ ಜನರು ಶ್ಲಾಘಿಸಿದ್ದಾರೆ.

The post ಮನೆಗೆ ಬಂದ ಹಾವನ್ನ ಕೊರಳಿಗೆ ಸುತ್ತಿಕೊಂಡು ಹೊರಟ ವ್ಯಕ್ತಿ appeared first on News First Kannada.

Source: newsfirstlive.com

Source link