ಮನೆಯಲ್ಲಿದ್ದವರೆಲ್ಲ ಕೊರೊನಾದಿಂದ ಸೇಫ್ ಅಂತ ಅಂದುಕೊಂಡಿದ್ರೆ ಅದು ತಪ್ಪು. ಕಾರಣ ಎಲ್ಲೂ ಹೊರಗೆ ಹೋಗದೆ ಮನೆಯಲ್ಲೇ ಇದ್ದವರಿಗೂ ಕೊರೊನಾ ಬಂದಿದೆ. ಇದಕ್ಕೆ ಹಲವು ಕಾರಣಗಳಿದ್ದಾವೆ. ಹೀಗಾಗಿ ಮನೆಯಲ್ಲೂ ಮಾಸ್ಕ್ ಧರಿಸಲೇಬೇಕು ಅಂತ ಸ್ಟಡಿ ರಿಪೋರ್ಟ್ ಒಂದು ಹೇಳಿದೆ.

ಕೊರೊನಾ ಯಾರಿಗೋ ಬಂದಿದೆ, ನಮಗೆ ಬರಲ್ಲ ,ನಮ್ಮ ಮನೆಯಲ್ಲಿ ಎಲ್ಲರೂ ಸೇಫ್ ಅಂತ ಅಂದುಕೊಂಡಿದ್ರೆ ಕ್ಷಣ ಮಾತ್ರದಲ್ಲಿ ಸುಳ್ಳಾಗುವ ಸಾಧ್ಯತೆ ಇದೆ. ಅಷ್ಟರಮಟ್ಟಿಗೆ ಕೊರೊನಾ ವಿಪರೀತವಾಗಿ ಹರಡ್ತಾ ಇದೆ. ಇಂಡಿಯಾದಲ್ಲಿ 28 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಎಲ್ಲರೂ ಮನೆಯಿಂದ ಹೊರಗೆ ಹೋದವರಲ್ಲ, ಯಾರ ಜೊತೆಗೂ ಗುಂಪು ಗೂಡಿದವರಲ್ಲ. ಆದರೂ ಬಂದಿದೆ. ಯಾಕಂದ್ರೆ ಕೊರೊನಾ ಈಗ ತಾನೇ ಮನೆ ಬಾಗಿಲಿಗೆ ಹುಡುಕಿಕೊಂಡು ಬರ್ತಿದೆ ಅಂದುಕೊಳ್ಳುವಷ್ಟರ ಮಟ್ಟಿಗೆ ವ್ಯಾಪಕವಾಗ್ತಿದೆ.

ಚೀನಾದಿಂದ ಬಂದ ಈ ಸಣ್ಣ ವೈರಾಣು ಭಾರತದಲ್ಲಿ ಮನೆ ಮನೆ ಬಾಗಿಲ ಮುಂದೆ ಕಾದು ನಿಂತಿದೆ. ಮನೆ ಹೊರಗೆ ಬರುವ ಮುಂಚೆ ಮಾಸ್ಕ್ ಮರೆಯದಿರು ಎನ್ನುತ್ತಿದ್ದ ಹೇಳಿಕೆ ಈಗ ಬದಲಾಗಿದೆ. ಇನ್ಮುಂದೆ ಮನೆ ಹೊರಗೆ ಮಾತ್ರವಲ್ಲ, ಮನೆಯಲ್ಲಿ ಇದ್ದಾಗಲು ಮಾಸ್ಕ್ ಧರಿಸುವುದು ಅಗತ್ಯ. ಸೋಂಕಿತರು ಅಥವಾ ಸಂಪರ್ಕಿತರು ಎಲ್ಲಂದರಲ್ಲಿ ತಿರುಗಾಡಿ ವೈರಸ್ ಅನ್ನು ಹೊತ್ತು ಹಬ್ಬಿಸಿದ ತಪ್ಪಿಗೆ ನಾವು ಈ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಇನ್ನು ಕೋವಿಡ್ ಪರೀಕ್ಷೆ ಮಾಡಿಸದೆ ತಿರುಗಾಡುತ್ತಿರುವವರೂ ಇದ್ದಾರೆ. ಈ ಪರಿಸ್ಥಿತಿಯನ್ನು ನೋಡಿದರೆ ಮುಂದೆ ಆಗುವ ಅನಾಹುತ ನೆನೆದರೆ ಶಾಕ್ ಆಗುವುದಂತೂ ಖಂಡಿತ.

ಕೋವಿಡ್ -19 ಮುಖ್ಯವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಉಸಿರಾಟದ ಹನಿಗಳ ಮೂಲಕ ಹರಡುತ್ತಿದೆ. ಇದು ಸೋಂಕಿತರು ಕೆಮ್ಮಿದಾಗ, ಸೀನುವಾಗ, ಮಾತನಾಡುವಾಗ, ಕೂಗಿದಾಗ ಅಥವಾ ಹಾಡಿದಾಗ ಗಾಳಿಯಲ್ಲಿ ಸ್ಪ್ರೆಡ್ ಆಗುತ್ತಿದೆ. ಈ ಹನಿಗಳು ಸುತ್ತಮುತ್ತಲಿನ ಜನರ ಬಾಯಿಯಲ್ಲಿ ಅಥವಾ ಮೂಗುಗಳಲ್ಲಿ ಇಳಿಯಬಹುದು, ಅಥವಾ ಬೇರೆಯವರು ಇದನ್ನು ಉಸಿರಾಡಬಹುದು. ಭಾರತದಲ್ಲಿ ಹಲವರು ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ರೋಗಲಕ್ಷಣವಿಲ್ಲದ ಜನರು ಮನೆಯಲ್ಲಿ, ವೇಗವಾಗಿ, ಸೋಂಕನ್ನು ಹರಡುವುದನ್ನು ಕಂಟೀನ್ಯೂ ಮಾಡುತ್ತಿದ್ದಾರೆ. ಅದಕ್ಕಾಗಿ ಮನೆಯಲ್ಲಿ ಇದ್ದಾಗಲು ಕುಟುಂಬದವರಿಗೆ ಹರಡದಂತೆ ಮಾಸ್ಕ್ ಧರಿಸಬೇಕಾಗಿದೆ ಎನ್ನುತ್ತಿದ್ದಾರೆ ತಜ್ಞರು.

ಮೊದಲನೆ ಅಲೆ ಇದ್ದಾಗ ಇಲ್ಲದ ಶಿಫಾರಸು ಈಗೇಕೆ ?

ಇಂಡಿಯಾದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಈ ಸೋಂಕಿನಿಂದ ಮೃತರಾಗುತ್ತಿರುವುದನ್ನು ನೋಡುತ್ತಲೆ ಇದ್ದೆವೆ. ಮೊದಲ ವೇವ್ ನಲ್ಲಿ ಪರಿಸ್ಥಿತಿ ನಿಧಾನವಾಗಿ ಏರುತ್ತಿದ್ದ ಕಾರಣ ಎಚ್ಚರಿಕೆ ಇಂದ ಇರುವುದೊಂದೆ ಮುಖ್ಯವಾಗಿತ್ತು. ಜನ ಜಂಗುಳಿಯಲ್ಲಿ ಹರಡುವಿಕೆ ತೀವ್ರ ಪ್ರಮಾಣದಲ್ಲಿ ಕಾಣಿಸುತ್ತಿತ್ತು. ಅದಕ್ಕಾಗಿ ಲಾಕ್ ಡೌನ್, ಕರ್ಫ್ಯೂ ನಂತಹ ನಿಯಮಗಳು ಕಾರ್ಯಗತವಾಗಿತ್ತು. ಆ ಅಲೆ ಮುಗಿಯುವ ವೇಳೆಗೆ ಮಾಸ್ಕ್ ಧರಿಸುವುದನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಎರಡನೆ ಅಲೆಗೆ ಈ ಪರಿಸ್ಥಿತಿ ಎದುರಾಗಿದೆ. ಇದರಿಂದ ಕುಟುಂಬದ ಒಬ್ಬ ಸದಸ್ಯರಿಗೆ ಲಕ್ಷಣರಹಿತ ಸೋಂಕು ಇದ್ದರೂ ಸಹ, ಕುಟುಂದಲ್ಲಿನ ವೃದ್ಧರು ಮಕ್ಕಳನ್ನು ರಕ್ಷಿಸಬಹುದು.

ಆರೋಗ್ಯ ಮತ್ತು ಮಾನವ ಸೇವಾ ಇಲಾಖೆಯಿಂದ ಉಲ್ಲೇಖ

ಇದು ನಾರ್ತ್ ಕೆರೊಲಿನಾ ಆರೋಗ್ಯ ಮತ್ತು ಮಾನವ ಸೇವಾ ಇಲಾಖೆಯ ದತ್ತಾಂಶವನ್ನು ಉಲ್ಲೇಖಿಸಿ ಹೇಳಲಾದ ವರದಿ. ಇಬ್ಬರು ವ್ಯಕ್ತಿಗಳ ನಡುವೆ 6 ಅಡಿ ಅಂತರವಿದ್ದಾಗ ಮತ್ತು ಇಬ್ಬರೂ ಮಾಸ್ಕ್ ಅನ್ನು ಧರಿಸಿದಾಗ ಹರಡುವ ಅಪಾಯ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈ ರಿಪೋರ್ಟ್ ಪ್ರಕಾರ ಇಬ್ಬರೂ ಮಾಸ್ಕ್ ಧರಿಸಿದಾಗ ಶೇಕಡ 1.5 ರಷ್ಟು ಮಾತ್ರ ಹರಡುವ ಸಾಧ್ಯತೆ ಇದೆ. ಹಾಗೂ ಕೇವಲ ಸೋಂಕಿತ ವ್ಯಕ್ತಿ ಮಾಸ್ಕ ಧರಿಸಿ ಮತ್ತೊಬ್ಬರೂ ಮಾಸ್ಕ್ ಧರಿಸದಿದ್ದರೆ ಶೇಕಡ 5 ರಷ್ಟು ಹರಡುವ ಸಾಧ್ಯತೆ ಇರುತ್ತದೆ. ಮತ್ತು ಸೋಂಕಿತನು ಮಾಸ್ಕ್ ಧರಿಸದೆ, ಸಾಧರಣ ವ್ಯಕ್ತಿ ಮಾಸ್ಕ ಧರಿಸುವುದರಿಂದ ಶೇಕಡ 30 ರಷ್ಟು ಅಪಾಯವಿದೆ. ಇನ್ನೂ ಇಬ್ಬರೂ ಮಾಸ್ಕ್ ಧರಿಸದೆ ಇದ್ದಲ್ಲಿ ಶೇಕಡ 90 ರಷ್ಟು ಜನರು ಅಪಾಯಕ್ಕೊಳಗಾಗುತ್ತಾರೆ ಎಂದು ರಿಪೋರ್ಟ್ ಹೇಳುತ್ತಿದೆ.

ಅಮೆರಿಕದಲ್ಲೂ ಮನೆಯಲ್ಲಿ ಮಾಸ್ಕ ರೂಲ್ಸ್ ಜಾರಿಗೆ

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರೊಟೆಕ್ಷನ್ ಬಹುತೇಕ ಇದೇ ರೀತಿಯ ಶಿಫಾರಸು ಮಾಡಿದೆ. ಕನಿಷ್ಠ 6 ಅಡಿ ಅಂತರದಲ್ಲಿ ಉಳಿಯುವುದರ ಜೊತೆಗೆ ಮಾಸ್ಕ್ ಗಳನ್ನು ಮನೆಯಲ್ಲೂ ಧರಿಸಬೇಕೆಂದು ಅಮೆರಿಕ ರೂಲ್ಸ್ ಮಾಡಿದೆ.ಮನೆಯಲ್ಲಿ ಇರುವಾಗ ಮಾಸ್ಕ ಇರಲೆ ಬೇಕು ಹಾಗೂ ಮಕ್ಕಳನ್ನು ವೃದ್ಧರನ್ನು ಕಾಪಾಡಿಕೊಳ್ಳವುದಕ್ಕಾಗಿ ಗರಿಷ್ಠ ಎಚ್ಚರಿಕೆ ವಹಿಸಬೇಕು ಅಂತ ಸೂಚಿಸಿದೆ.

ಅಷ್ಟೆ ಅಲ್ಲದೆ ಬೀಜಿಂಗ್‌ನಲ್ಲಿನ ಚೀನೀ ಕುಟುಂಬಗಳ ಅಧ್ಯಯನವು ಹಾಗೂ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಮಾಸ್ಕ್ ಧರಿಸುವುದು ಅಗತ್ಯ ಎನ್ನುವುದನ್ನು ಸ್ಪಷ್ಟ ಪಡಿಸಿದೆ. ಮನೆ ಒಳಗೆ ಮಾಸ್ಕ್ ಹಾಕಿಕೊಳ್ಳುವುದು ಶೇಕಡಾ 79 ರಷ್ಟು ಪರಿಣಾಮಕಾರಿ ಎನ್ನುವುದು ಸೂಚಿಸಿದ್ದಾರೆ. ಇದರಿಂದ ವಿಶ್ವದಾದ್ಯಂತ ಮನೆಯಲ್ಲಿ ಮಾಸ್ಕ್ ಧರಿಸುವ ಯೋಜನೆ ಎಲ್ಲಡೆ ಜಾರಿಗೆ ಬರಬೇಕು ಎಂದು ತಜ್ಞರು ಸಲಹೆ ಸೂಚಿಸುತ್ತಿದ್ದಾರೆ.

ತಜ್ಞರು ಸೂಚಿಸುತ್ತಿರುವ ಈ ನಿರ್ಧಾರ ಪ್ರಯೋಜನಕಾರಿ ಎನ್ನುವುದು ವಿಶ್ವದ ಎಲ್ಲಡೆ ಮಾತಾಗಿದೆ. ವೇಗವಾಗಿ ಹರಡುತ್ತಿರುವ ಸೋಂಕನ್ನು ತಡೆಯುವುದು ಇನ್ನಷ್ಟು ಕ್ರಮಗಳು ಬರಬಹುದು. ಸೋಂಕು ಮತ್ತಷ್ಟು ಹೆಚ್ಚಳವಾದರೆ ಸರಕಾರದ ನಡೆ ಮತ್ತಷ್ಟು ಕಠಿಣವಾಗಬಹುದು. ಆದರೆ ಎಲ್ಲರಲ್ಲೂ ಈ ಜಗತ್ತಿನಿಂದ ವೈರಾಣುವನ್ನು ಹೊರ ಹಾಕುವ ಏಕ ಮನೋಭಾವ ಒಂದೆ ಇರಬೇಕಷ್ಟೆ. ನಮ್ಮ ಮನೆಯವರನ್ನು ರಕ್ಷಣೆ ಮಾಡಿಕೊಳ್ಳಲು ಮನೆಯಲ್ಲಿ ಮಾಸ್ಕ್ ಹಾಕಿ ಎನ್ನುವ ಹೇಳಿಕೆಗಳು ಕೇಳಿ ಬರುತ್ತಿದೆ. ಒಂದು ಕುಟುಂಬ ಸುರಕ್ಷತವಾಗಿದ್ದರೆ ಎಷ್ಟೊ ಜನರನ್ನು ಸೋಂಕಿನಿಂದ ತಡೆಯ ಬಹುದಾಗಿದೆ.

ಹೊರಗೆ ಹೋದ ಕುಟುಂಬದವರು ಬಂದು ನಿಮ್ಮ ಬಳಿ ಮಾತನಾಡೋದ್ರಿಂದ, ಆಕಸ್ಮಿಕವಾಗಿ ನಿಮ್ಮ ಮನೆಗೆ ಬಂದವರಿಂದ, ನಿಮ್ಮ ವಸ್ತುಗಳನ್ನು ತಲುಪಿಸಲು ಬರುವವರಿಂದ ,ಹೊರಗೆ ಆಟವಾಡಲು ಹೋಗಿ ಬಂದ ಮಕ್ಕಳಿಂದ ಸೋಂಕು ಮನೆಯೊಳಗೆ ಇದ್ದವರಿಗೂ ಹರಡಬಹುದು. ಹೀಗಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಅಂತರ ಕಾಯ್ದುಕೊಂಡರೆ ಯಾವುದೇ ಅಪಾಯ ಇರಲ್ಲ.

The post ಮನೆಯಲ್ಲಿದ್ದವರೆಲ್ಲ ನಾವು ಕೊರೊನಾದಿಂದ ಸೇಫ್ ಅಂದ್ಕೊಂಡಿದ್ದೀರಾ..? ತಜ್ಞರು ಹೇಳೋದನ್ನ ಕೇಳಿ​ appeared first on News First Kannada.

Source: newsfirstlive.com

Source link