‘ಮನೆಯಲ್ಲಿ ಗಂಡ್ಸು ಅಂತಾ ಹೆತ್ತಿದ್ದಾರೆ, ಗಂಡಸಿನ ರೀತಿಯಲ್ಲೇ ಹೊಡೆದಾಡ್ತೀನಿ’

‘ಮನೆಯಲ್ಲಿ ಗಂಡ್ಸು ಅಂತಾ ಹೆತ್ತಿದ್ದಾರೆ, ಗಂಡಸಿನ ರೀತಿಯಲ್ಲೇ ಹೊಡೆದಾಡ್ತೀನಿ’

ಬೆಂಗಳೂರು: ಅವರು ಬಳಸುವ ಭಾಷೆ ಬಗ್ಗೆ ನಂಗೆ ಗೊತ್ತಿಲ್ಲ. ನಾನು ಹೇಳೋದು ಇಷ್ಟೇ.. ಪ್ರಕರಣವನ್ನ ಕಾನೂನು ತೀರ್ಮಾನ ಮಾಡಬೇಕು ಅಂತಾ ನಿರ್ಮಾಪಕ ಉಮಾಪತಿ ಮತ್ತೆ ಪುನರುಚ್ಚರಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಅವರು (ದರ್ಶನ್ ಸ್ನೇಹಿತರು) ಯಾರು ಅನ್ನೋದು ನನಗೆ ಬೇಕಾಗಿಲ್ಲ. ಇವರು ಏನ್ ಪ್ಲಾನ್ ಮಾಡ್ಕೊಂಡಿದ್ದರೋ ಹಾಗೇ ಮಾಡಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ. ನನಗೆ ನನ್ನ ತಾಯಿ ದೊಡ್ಡವರು. ನನ್ನ ಮನೆಯಲ್ಲಿ ನನ್ನ ಮಗ ಎಂದು ಹೆತ್ತಿದ್ದಾರೆ, ಮಗನ ಥರಾನೇ ಇದ್ದೇನೆ.

ತಪ್ಪು ಮಾಡಿದವನಿಗೆ ಇನ್ನೊಬ್ಬರ ಸಹಾಯ ಬೇಕಾಗುತ್ತದೆ. ಆದರೆ ನಾನೊಬ್ಬನೇ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ಕಾರಣ ನನ್ನದೇನೂ ತಪ್ಪಿಲ್ಲ. ಆ ಧೈರ್ಯ ನನಗಿದೆ. ಯಾವುದೇ ಊಹಾಪೂಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನಂಗಿಲ್ಲ. ಒಬ್ಬ ವ್ಯಕ್ತಿಯನ್ನ ನಾವು ಎದುರಿಸಿ ಕೂರಿಸಬಹುದು. ಆದರೆ ಆತನ ತಲೆಯಲ್ಲಿ ಏನು ಓಡುತ್ತಿರುತ್ತೆ ಅದನ್ನ ಯಾರೂ ತಡೆಯೋಕೆ ಆಗಲ್ಲ.

ಯಾರಿಂದಲೂ ಏನೂ ಆಗಬೇಕಿಲ್ಲ. ಒಂದಿಷ್ಟು ಪಾಠ ಕಲಿತೆ. ಯಾರಿಗೂ ಒಳ್ಳೆಯದನ್ನ ಮಾಡಬೇಕಾಗಿಲ್ಲ. ನನ್ನ ಕೆಲಸ ಮಾತ್ರ ಮಾಡಿಕೊಂಡು ಇದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಇನ್ನೊಬ್ಬರ ಸ್ಟೇಟ್​ಮೆಂಟ್​ಗೆ ನಾನು ಹೊಣೆ ಅಲ್ಲ. ನನ್ನ ಮನೆಯಲ್ಲಿ ಗಂಡ್ಸು ಅಂತಾ ಹೆತ್ತಿದ್ದಾರೆ, ಗಂಡಸು ರೀತಿಯಲ್ಲೇ ಹೊಡೆದಾಡುತ್ತೀನಿ ಎಂದರು.

The post ‘ಮನೆಯಲ್ಲಿ ಗಂಡ್ಸು ಅಂತಾ ಹೆತ್ತಿದ್ದಾರೆ, ಗಂಡಸಿನ ರೀತಿಯಲ್ಲೇ ಹೊಡೆದಾಡ್ತೀನಿ’ appeared first on News First Kannada.

Source: newsfirstlive.com

Source link