ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ | Garuda purana these 3 habits can create trouble and negativity in any family

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

ಗರುಡ ಪುರಾಣದಲ್ಲಿ ಹೇಳುವಂತೆ ಮೂರು ದುರ್ಗುಣಗಳು, ಕೆಟ್ಟ ಚಟಗಳು ಅಥವಾ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ನಗುನಗುತಿರುವ ಸಂಸಾರದಲ್ಲಿ ಕ್ಲೇಷ ಮನೆ ಮಾಡಿಬಿಡುತ್ತದೆ. ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಯಾಗುತ್ತದೆ. ಪರಸ್ಪರ ಜಗಳಗಳು ಕಾಣಿಸಿಕೊಳ್ಳುತ್ತವೆ. ಅಂತಹ ದುರ್ಗುಣಗಳನ್ನು ಶೀಘ್ರವಾಗಿ ಬಿಟ್ಟುಬಿಡಬೇಕು. ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ. ಅಂತಹ ಕೆಟ್ಟ ಚಟಗಳು ಯಾವುವು ಎಂಬುದನ್ನು ಗರುಡ ಪುರಾಣದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಮನೆಯೆಂದ ಮೇಲೆ ಪರಿವಾರದ ಸದಸ್ಯರ ಮಧ್ಯೆ ಪರಸ್ಪರ ಮನಗಳಲ್ಲಿ ಸಹಮತ, ಅಸಮ್ಮತಿ ಕಾಣಿಸಿಕೊಳ್ಳುವುದು ಸಾಮಾನ್ಯ. ಪಿರಿಪಿರಿಗಳು ಆಗಾಗ ಕಾಣಿಸತೊಡಗುತ್ತವೆ. ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡದಾಗಿ ಬಾಧಕವಾಗಿಬಿಡುತ್ತದೆ. ಮಾತು ಮಾತಿನಲ್ಲೇ ಜಗಳಗಳು ಶುರುವಾಗಿಬಿಡುತ್ತವೆ. ಹಾಗಾದರೆ ನಿಶ್ಚಿತವಾಗಿ ಕೆಲವು ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ಹಿಂದೂ ಧರ್ಮದ ಮಹಾಪುರಾಣವಾದ ಗರುಡ ಪುರಾಣದಲ್ಲಿ ಇಂತಹುದೇ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅವುಗಳನ್ನು ಗೌರವಿಸಿ, ನಮ್ಮ ದುರ್ಗುಣಗಳನ್ನು ಸರಿಪಡಿಸಿಕೊಳ್ಳುವುದರಲ್ಲೇ ನಮ್ಮ ಸಂಸಾರದ ಹಿತ ಅಡಗಿದೆ ಎಂಬುದು ಸತ್ಯವಾದ ಮಾತು.

1. ರಾತ್ರಿ ವೇಳೆ ಅಡುಗೆ ಮನೆ ಪಾತ್ರೆ ತೊಳೆಯದಿರುವುದು
ರಾತ್ರಿ ವೇಳೆ ಅಡುಗೆ ಪಾತ್ರೆ, ಊಟ ಮಾಡಿದ ತಟ್ಟೆ ಲೋಟಗಳನ್ನು ಅಡುಗೆ ಮನೆಯ ಸಿಂಕ್​ನಲ್ಲಿಯೇ ಬಿಟ್ಟುಬಿಡುವುದು ಈಗಿನ ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಹುತೇಕ ಮನೆಗಳಲ್ಲಿ ಇಂತಹುದನ್ನು ಕಾಣಬಹುದು. ಆದರೆ ಗರುಡ ಪುರಾಣದ ಪ್ರಕಾರ ಈ ಅಭ್ಯಾಸಗಳು ಒಳ್ಳೆಯದಲ್ಲ. ಇದರಿಂದ ಮನೆಯವ ಮಧ್ಯೆ ಜಗಳಗಳು ಕಾಣಿಸುತ್ತವೆ. ಕ್ಲೇಷ ತುಂಬಿಕೊಳ್ಳುತ್ತದೆ. ಹಾಗಾಗಿ ಇದರಿಂದ ಹೊರಬರಲು ರಾತ್ರಿ ವೇಳೆಯೇ ಪಾತ್ರೆಗಳನ್ನು ತೊಳೆದು, ಶುಚಿಗೊಳಿಸುವುದು ಒಳ್ಳೆಯದು.

2. ಮನೆಯನ್ನು ಸ್ವಚ್ಛವಾಗಿಡಬೇಕು
ಈಗಿನ ಕಾಲದಲ್ಲಿ ಜನರಿಗೆ ಹೆಚ್ಚು ಸಮಯವೇ ಸಿಗುತ್ತಿಲ್ಲ. ಸದಾ ಹರಿಬರಿನಲ್ಲಿರುತ್ತಾರೆ, ಏನೋ ಧಾವಂತದಲ್ಲಿರುತ್ತಾರೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸಿ, ಒಪ್ಪ ಓರಣವಾಗಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಗುರುಡ ಪುರಾಣದಲ್ಲಿ ಇಂತಹ ದುರ್ಗುಣಗಳನ್ನು ಬಿಟ್ಟುಬಿಡಬೇಕು ಎಂದು ತಿಳಿಯಹೇಳಲಾಗಿದೆ. ಹಾಗಾಗಿ, ನಿಯಮಿತ ರೂಪದಲ್ಲಿ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳದಿದ್ದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ.

ಅಂತಹ ಮನೆಗಳಲ್ಲಿ ರೋಗರುಜಿನಗಳು ಬರುತ್ತವೆ. ಹಣ ನೀರಿನಂತೆ ಖರ್ಚಾಗುತ್ತಾ ಇರುತ್ತದೆ. ಹಣ ಉಳಿತಾಯ ಮಾಡಲು ಆಗುವುದಿಲ್ಲ. ಹಣದ ಸಮಸ್ಯೆ ಹೆಚ್ಚಾಗಿ ಮನೆಯವರ ಮಧ್ಯೆ ಮನಸ್ತಾಪಗಳು ಉದ್ಭವಿಸುತ್ತವೆ. ಇಡೀ ಮನೆಯಲ್ಲಿ ಮಮಕಾರ ಕಾಣೆಯಾಗಿ, ನಕಾರಾತ್ಮಕತೆ ತಾಂಡವವಾಡುತ್ತದೆ. ಆದ್ದರಿಂದ ದಿನಾ ಬೆಳಗ್ಗೆಯೇ ಎದ್ದು ಮನೆಯನ್ನು ಸ್ವಚ್ಛಗೊಳಿಸಿ, ದೇವರ ಧ್ಯಾನ ಮಾಡಿ ಶಾಂತಿ ಕಾಪಾಡಬೇಕು.

3. ಮನೆಯಲ್ಲಿ ಮುರಿದ ಸಾಮಾನುಗಳು ಇಡಬಾರದು
ಗರುಡ ಪುರಾಣದ ಪ್ರಕಾರ ಮನೆಯಲ್ಲಿ ಮುರಿದ ಸಾಮಾನುಗಳು ಇರಬಾರದು. ಇದರಿಂದ ಮನೆಯಲ್ಲಿರುವವ ಮನಸುಗಳೂ ಮುರಿದುಬೀಳುತ್ತದೆ. ನಕಾರಾತ್ಮಕತೆ ಹೆಚ್ಚುತ್ತದೆ. ಮನೆಯಲ್ಲಿ, ಮಹಡಿಯಲ್ಲಿ ಕಬ್ಬಿಣದ ಮುರಿದ ಸಾಮಾನುಗಳನ್ನು ಬಿಸಾಡಬಾರದು. ಮುರಿದ ಫರ್ನೀಚರ್​​ ಮನೆಯಲ್ಲಿ ಇರಬಾರದು. ಮುರಿದ ವಸ್ತುಗಳನ್ನು ತಕ್ಷಣ ಮನೆಯಿಂದ ಹೊರಗೆ ಬಿಸಾಡಿ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

TV9 Kannada

Leave a comment

Your email address will not be published. Required fields are marked *