ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಚಿಂದಿ ಆಯೋ ಆಟೋದಲ್ಲಿ ಬಂದು ಚಿನ್ನಾಭರಣ ಕದ್ದು ಪಾರಿಯಾಗಿದ್ದ ಆರೋಪಿಗಳು ಅರೆಸ್ಟ್ | Bagalgunte police arrest two accused in gold theft case bengaluru


ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಚಿಂದಿ ಆಯೋ ಆಟೋದಲ್ಲಿ ಬಂದು ಚಿನ್ನಾಭರಣ ಕದ್ದು ಪಾರಿಯಾಗಿದ್ದ ಆರೋಪಿಗಳು ಅರೆಸ್ಟ್

ಮಹಮ್ಮದ್ ಮತ್ತು ಸಮೀರ್

ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಚಿಂದಿಗ್ಯಾಂಗ್ ನ ಇಬ್ಬರು ಮಾತ್ರ ಸಿಕ್ಕಿದ್ದಾರೆ. ಆರೋಪಿಗಳ ಬಳಿ ಇದ್ದ 450 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ರಾಡ್, ಆಟೋ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ನೆಲಮಂಗಲ: ಚಿಂದಿ ಐಟಂ ಕಲೆಕ್ಟ್ ಮಾಡೋ ಆಟೋದಲ್ಲಿ ಬಂದು ಸ್ಕೆಚ್ ಹಾಕಿ ದರೋಡೆ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಚಿನ್ನ ಕದ್ದ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಚಿಂದಿಗ್ಯಾಂಗ್ ನ ಇಬ್ಬರು ಮಾತ್ರ ಸಿಕ್ಕಿದ್ದಾರೆ. ಆರೋಪಿಗಳ ಬಳಿ ಇದ್ದ 450 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ರಾಡ್, ಆಟೋ ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದು ಆರೋಪಿಗಳನ್ನ ಜೈಲಿಗಟ್ಟಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರತಿಷ್ಟಿತ ಸಿದ್ದೇಶ್ವರ ಬಡಾವಣೆಯಲ್ಲಿ ಏಪ್ರಿಲ್ 9ರಂದು ಈ ಬಡಾವಣೆಯಲ್ಲಿ ವಾಸವಿದ್ದ ಖಾಸಗಿ ಕಂಪನಿಯ ಡೈರೆಕ್ಟರ್ ವಿಶ್ವನಾಥ್ ಅನ್ನೋರು ಕೆಲಸದ ನಿಮಿತ್ತ ಫ್ಯಾಮಿಲಿ ಸಮೇತ ದೆಹಲಿಗೆ ತೆರಳಿದ್ರು, ಇವ್ರು ದೆಹಲಿಗೆ ಹೋಗುತ್ತಿದ್ದಂತೆ ಆಕ್ಟೀವ್ ಆಗಿದ್ದ ಗ್ಯಾಂಗ್ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಅರ್ಧ ಕೆಜಿಯಷ್ಟು ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ರು. ಡೈರೆಕ್ಟರ್ ವಿಶ್ವನಾಥ್ ಬೆಂಗಳೂರಿಗೆ ವಾಪಸ್ ಬಂದ ಮೇಲೆ ಘಟನೆ ಬೆಳಕಿಗೆ ಬಂದಿದ್ದು, ದರೋಡೆ ಮಾಡಿದ್ದ ಗ್ಯಾಂಗ್ ಒಂದು ಸಣ್ಣ ಸುಳಿವನ್ನು ಸಹ ಬಿಡದಂತೆ ಸಖತ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಆರೋಪಿಗಳಾದ 25 ವರ್ಷದ ಸಮೀರ್ ಏರೋನ್ ಹಾಗೂ 22 ವರ್ಷದ ಮಹಮದ್‌ನನ್ನ ಬಂಧಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *