ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಇದರಿಂದ ಮನೆಯಲ್ಲೇ ಸಾವನ್ನಪ್ಪುತ್ತಿರುವವರ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗ್ತಾನೆ ಇದೆ. ಮನೆಯಿಂದ ಆಸ್ಪತ್ರೆಗೆ ಬರುವ ಮುನ್ನವೇ ಸೋಂಕಿತರು ಮೃತಪಡುತ್ತಿದ್ದಾರೆ.

ನಿನ್ನೆ ರಾಜ್ಯದಲ್ಲಿ 548 ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ 72 ಮಂದಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಕಳೆದ‌ ಒಂದು ವಾರದಲ್ಲಿ ಮನೆಯಲ್ಲೇ ಮರಣ ಹೊಂದಿದವರ ಸಂಖ್ಯೆ ‌ಆತಂಕ ಹುಟ್ಟಿಸುತ್ತೆ. ಒಂದು ವಾರದಲ್ಲಿ 348 ಸಾವು ಸಂಭವಿಸಿದೆ, ಇದರಲ್ಲಿ 285 ಮಂದಿ ಮನೆಯಲ್ಲೇ ಮೃತಪಟ್ಟಿದ್ದಾರೆ. ಕಳೆದ ಏಳು ದಿನದಲ್ಲಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಮೃತಪಟ್ಟವರ ಸಂಖ್ಯೆ 63. ಆಕ್ಸಿಜನ್ ಸ್ಯಾಚುರೇಶನ್ ಕಡಿಮೆ ಆಗೋಕೆ ಶುರುವಾಗಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾಯ್ತಿದ್ದಾರೆ.

ಕಳೆದ ಏಳು ದಿನಗಳ ಅಂಕಿ ಅಂಶ ಇಲ್ಲಿದೆ:
ಮೇ 14: ಮನೆಯಲ್ಲಿ ಸಾವನ್ನಪ್ಪಿದವರು- 08, ಮಾರ್ಗಮಧ್ಯೆ ಸಾವು- 07
ಮೇ 15: ಮನೆಯಲ್ಲಿ ಸಾವನ್ನಪ್ಪಿದವರು- 08, ಮಾರ್ಗಮಧ್ಯೆ ಸಾವು- 06
ಮೇ 16: ಮನೆಯಲ್ಲಿ ಸಾವನ್ನಪ್ಪಿದವರು-12, ಮಾರ್ಗಮಧ್ಯೆ ಸಾವು- 11
ಮೇ 17: ಮನೆಯಲ್ಲಿ ಸಾವನ್ನಪ್ಪಿದವರು- 59, ಮಾರ್ಗಮಧ್ಯೆ ಸಾವು- 20
ಮೇ 18: ಮನೆಯಲ್ಲಿ ಸಾವನ್ನಪ್ಪಿದವರು- 85, ಮಾರ್ಗಮಧ್ಯೆ ಸಾವು- 07
ಮೇ 19: ಮನೆಯಲ್ಲಿ ಸಾವನ್ನಪ್ಪಿದವರು- 45 , ಮಾರ್ಗಮಧ್ಯೆ ಸಾವು- 08
ಮೇ 20: ಮನೆಯಲ್ಲಿ ಸಾವನ್ನಪ್ಪಿದವರು-68 , ಮಾರ್ಗಮಧ್ಯೆ ಸಾವು- 04
ಒಟ್ಟು: ಮನೆಯಲ್ಲಿ ಸಾವನ್ನಪ್ಪಿದವರು- 285, ಮಾರ್ಗಮಧ್ಯೆ ಸಾವು- 63

ಆರಂಭದಲ್ಲಿ ಎಚ್ಚರ ವಹಿಸದ ಪರಿಣಾಮ ಸಾವುಗಳು ಹೆಚ್ಚಾಗ್ತಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ಜನರು ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಟೆಸ್ಟ್ ಮಾಡಿಸಿ ಚಿಕಿತ್ಸೆ ‌ಆರಂಭಿಸಬೇಕು. ಇಲ್ಲದೇ ಹೋದ್ರೆ ಸೋಂಕು ಗಂಭೀರ ಸ್ವರೂಪ ಪಡೆದುಕೊಳ್ಳತ್ತೆ.

The post ಮನೆಯಲ್ಲೇ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿರುವ ಸಂಖ್ಯೆ ಏರಿಕೆ appeared first on News First Kannada.

Source: newsfirstlive.com

Source link