ಹಾವೇರಿ: ಮನೆಯಲ್ಲಿ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಸಾಮಾನ್ಯ. ಆದ್ರೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದಲ್ಲಿ ಹಸುವಿಗೆ ಸೀಮಂತ ಕಾರ್ಯ ಮಾಡಿ ಸಂಭ್ರಮಿಸಿದ್ದಾರೆ.

ಗ್ರಾಮದ ರೈತ ನವೀನ ಹುಣಸೀಹಳ್ಳಿ ಎಂಬುವರ ಮನೆಯಲ್ಲಿ ಚೊಚ್ಚಲ ಗರ್ಭಿಣಿ ಹಸುವಿಗೆ ಸೀಮಂತ ಕಾರ್ಯ ಮಾಡಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಅಲ್ಲದೆ ಮನೆಯಲ್ಲಿ ತರಹೇವಾರಿ ತಿನಿಸು ರೊಟ್ಟಿ, ಎಳ್ಳು ರೊಟ್ಟಿ, ಕಡಬು, ಹೋಳಿಗೆ ಸೇರಿದಂತೆ ವಿವಿಧ ಬಗೆಯ ತಿನಿಸನ್ನ ಹಸುವಿಗೆ ತಿನ್ನಿಸಿ ರೈತ ಸೀಮಂತವನ್ನ ಅದ್ಧೂರಿಯಾಗಿ ಮಾಡಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಮನೆಯಲ್ಲೇ ಜನಿಸಿದ್ದ ಹಸುವನ್ನ ಮನೆಯ ಮಗಳಂತೆ ಸಾಕಿ ಬೆಳೆಸಿದ್ದಾರೆ. ಈಗ ಹಸು ಏಳು ತಿಂಗಳ ಚೊಚ್ಚಲ ಗರ್ಭಿಣಿ ಆಗಿದ್ದರಿಂದ ಕುಟುಂಬದ ಸದಸ್ಯರು ಹಸುವಿನ ಮೈ ಮೇಲೆ ಹೊಸ ಸೀರೆ ಹಾಕಿ ಹಸುವಿಗೆ ಪೂಜೆ ಸಲ್ಲಿದ್ದಾರೆ.

The post ಮನೆಯ ಮಗಳಂತೆ ಸಾಕಿದ ಹಸುವಿಗೆ ಸೀಮಂತ ಕಾರ್ಯ.. ಜೊತೆಗೆ ಹೋಳಿಗೆ ಊಟ appeared first on News First Kannada.

Source: newsfirstlive.com

Source link