ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಲು ವಿದ್ಯುತ್ ಕಚೇರಿಗೆ ತೆರಳುವ ರೈತ | Karnataka farmer visits electricity office daily to grind masalas


ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಲು ವಿದ್ಯುತ್ ಕಚೇರಿಗೆ ತೆರಳುವ ರೈತ

ಸಾಂಧರ್ಬಿಕ ಚಿತ್ರ

ಶಿವಮೊಗ್ಗ ಜಿಲ್ಲೆಯ ಮಂಗೋಟೆ ಗ್ರಾಮದ ರೈತರೊಬ್ಬರು ತಮ್ಮ ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಲು ಮತ್ತು ಫೋನ್ ಚಾರ್ಜ ಮಾಡಿಕೊಳ್ಳಲು ಪ್ರತಿದಿನ ವಿದ್ಯುತ್ ಕಚೇರಿಗೆ ತೆರೆಳುತ್ತಾರೆ.

ಶಿವಮೊಗ್ಗ (Shivamogga) ಜಿಲ್ಲೆಯ ಮಂಗೋಟೆ ಗ್ರಾಮದ ರೈತರೊಬ್ಬರು ತಮ್ಮ ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಲು ಮತ್ತು ಫೋನ್ ಚಾರ್ಜ ಮಾಡಿಕೊಳ್ಳಲು ಪ್ರತಿದಿನ ವಿದ್ಯುತ್ ಕಚೇರಿಗೆ ತೆರೆಳುತ್ತಾರೆ. ರೈತ ಎಂ ಹನುಮಂತಪ್ಪ ಅವರು ತಮ್ಮ ಮನೆಯ  ಸಮೀಪದಲ್ಲಿರುವ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಮೆಸ್ಕಾಂ) (MESCOM) ಕಚೇರಿಗೆ  ಅಡುಗೆಮನೆಯಲ್ಲಿ ಬಳಸಲಾಗುವ ಮಸಾಲೆಗಳನ್ನು ರುಬ್ಬಿಕೊಳ್ಳಲು ಮತ್ತು ಫೋನ್ ಚಾರ್ಜ ಮಾಡಲು ಕಚೇರಿಗೆ ಸುಮಾರು ಕಳೆದ 10 ತಿಂಗಳಿದ ಹೋಗುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ.

ಹನುಮಂತಪ್ಪ ಅವರ ಮನೆಯಲ್ಲಿ ದಿನದ 3-4 ಗಂಟೆ ಮಾತ್ರ ವಿದ್ಯುತ್ ಇರುತ್ತದೆ. ಇದಿರಂದ ಅವರು ಕತ್ತಲೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಆದರೆ ನೆರೆಹೊರೆಯವರಿಗೆ ವಿದ್ಯುತ್ ಚೆನ್ನಾಗಿ ಪೂರೈಕೆ ಆಗುತ್ತದೆ ಆದರೆ ಹನುಮಂತಪ್ಪ ಅವರಿಗೆ ಆಗುವುದಿಲ್ಲ.ರೈತ ಹನುಮಂತಪ್ಪ ತನ್ನ ಮನೆಗೆ ಸರಿಯಾದ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಮತ್ತು ಹಲವಾರು ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಇದನ್ನು ಓದಿ: ಒಂದೇ ಕಾಲಿನಲ್ಲಿ 2 ಕಿ.ಮೀ ನಡೆದು ಶಾಲೆಗೆ ಹೋಗುವ ವಿಕಲಚೇತನ ಬಾಲಕ; ವಿಡಿಯೋ ಇಲ್ಲಿದೆ

ಒಂದು ದಿನ, ಹನುಮಂತಪ್ಪ ಅವರು ಮೆಸ್ಕಾಂ ಹಿರಿಯ ಅಧಿಕಾರಿಗೆ ಕರೆ ಮಾಡಿ, ಮನೆಯಲ್ಲಿ ಕರೇಟ್​ ಇಲ್ಲ ಇದರಿದ ಮನೆಯಲ್ಲಿ ಮಸಾಲೆ ರುಬ್ಬಿಕೊಳ್ಳಲು ಅಗುವುದಿಲ್ಲ ಮತ್ತು ಅಡುಗೆ ಮಾಡಿಕೊಳ್ಳಲು ಆಗುವುದಿಲ್ಲ. ಮತ್ತು ಫೋನ್​​ಗಳನ್ನು ಹೇಗೆ ಚಾರ್ಜ್ ಮಾಡುಡುವುದು ಎಂದು ಕೇಳಿದರು. “ಇದು ಮೂಲಭೂತ ಅವಶ್ಯಕತೆಯಾಗಿದೆ, ಇವುಗಳಿಗಾಗಿ ನಾನು ಪ್ರತಿದಿನ ನನ್ನ ನೆರೆಹೊರೆಯವರ ಮನೆಗೆ ಹೋಗಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. ‘ಹಾಗಾದರೆ ಮೆಸ್ಕಾಂ ಕಚೇರಿಗೆ ಹೋಗಿ ಮಸಾಲಾ ರುಬ್ಬಿಕೊಳ್ಳಿ’ ಎಂದು ಅಧಿಕಾರಿ ಸಿಟ್ಟಿನಿಂದ ಹೇಳಿದರು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಹನುಮಂತಪ್ಪ ಪ್ರತಿದಿನ ಮೆಸ್ಕಾಂ ಕಚೇರಿಗೆ ಹೋಗಿ ಮಸಾಲೆ ರುಬ್ಬಿಕೊಳ್ಳುವುದು ಮತ್ತು ಮೊಬೈಲ್ ಚಾರ್ಜ ಇಡಲು ಪ್ರಾರಂಭಿಸಿದರು. ಇದನ್ನು ತಿಳಿದ ಮೆಸ್ಕಾಂ ಕಿರಿಯ ಎಂಜಿನಿಯರ್ ವಿಶ್ವನಾಥ್ ಭಾರೀ ಮಳೆಯಿಂದಾಗಿ ಐಪಿ ಸೆಟ್ ಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ. ಹನುಮಂತಪ್ಪ ಅವರು ಮಲ್ಲಾಪುರ ವಿತರಣಾ ಕೇಂದ್ರದಿಂದ ವಿದ್ಯುತ್ ಲೈನ್ ಎಳೆದು ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ. ಅವರ ಮನೆಗೆ ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಅಧಿಕಾರಿ ತಿಳಿಸಿದರು.

ಇದನ್ನು ಓದಿ: ನಾನೇ ಪಾರ್ವತಿ, ಶಿವನನ್ನು ಮದುವೆಯಾಗುತ್ತೇನೆ; ಭಾರತ-ಚೀನಾ ಗಡಿಯಲ್ಲಿ ಮಹಿಳೆಯ ಹೈಡ್ರಾಮಾ

ಹನುಮಂತಪ್ಪ ಅವರು ಮೆಸ್ಕಾಂ ಕಚೇರಿಗೆ ತೆರಳಿದ ಘಟನೆ ಬೆಳಕಿಗೆ ಬಂದ ನಂತರ ಅವರ ವಿಡಿಯೋ ಮತ್ತು ಫೋಟೋಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ರೈತರು ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಸುಮಾರು 10 ಕಿರಿಯ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಮೆಸ್ಕಾಂ ಕಚೇರಿಗೆ ಮಸಾಲೆ ರುಬ್ಬಲು ಬರುವುದು ನಿಂತಿದ್ದರೂ ಹನುಮಂತಪ್ಪ ಅವರ ಮನೆಗೆ ಇನ್ನೂ ವಿದ್ಯುತ್‌ ಪೂರೈಕೆಯಾಗಿಲ್ಲ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *