ಕಲಬುರಗಿ: ಜಿಲ್ಲೆಯ ಹಲವೆಡೆ ರಾತ್ರಿ ಮಳೆ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ನಡೆದಿದೆ.

ನೀಲಮ್ಮ ತಳವಾರ ಮೃತ ಬಾಲಕಿಯಾಗಿದ್ದು, ಎಂದಿನಂತೆ ಮನೆಯಲ್ಲಿ ತಮ್ಮ ಪೋಷಕರ ಜೊತೆ ಬಾಲಕಿ ಮಲಗಿದ್ದಳು. ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಭಾರೀ ಮಳೆ ಮತ್ತು ಗಾಳಿ ಹಿನ್ನೆಲೆ ಮನೆ ಗೋಡೆ ಬಾಲಕಿ ಮೇಲೆ ಕುಸಿದಿದ್ದು, ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ.

ಅದೃಷ್ಠವಶಾತ್ ಬಾಲಕಿಯ ಪೋಷಕರು ಪಾರಾಗಿದ್ದಾರೆ. ಈ ಕುರಿತು ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಮನೆ ಗೋಡೆ ಬಿದ್ದು 7 ವರ್ಷದ ಬಾಲಕಿ ಸಾವು appeared first on Public TV.

Source: publictv.in

Source link