ಬೆಂಗಳೂರು: ಮನೆ ಮನೆಗೆ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಬಿಬಿಎಂಪಿ ಆಯುಕ್ತ ಗೌರವ್ಗುಪ್ತಾ ಚಾಲನೆ ನೀಡಿದ್ರು.
ಕೇರ್ಇಂಡಿಯಾ ಸಹಯೋಗದಲ್ಲಿ 80 ಲಸಿಕಾ ದ್ವಿಚಕ್ರ ವಾಹನಗಳು ಹಾಗೂ 16 ನಾಲ್ಕು ಚಕ್ರದ ವಾಹನಗಳು ಸೇವೆ ನೀಡಲಿದ್ದು, ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲು ಹೋಗುವ ಆರೋಗ್ಯ ಸಿಬ್ಬಂದಿಗಳ ಜೊತೆ ಕಾರ್ಯ ನಿರ್ವಹಿಸಲಿವೆ.
ಸದ್ಯ ಬೆಂಗಳೂರಿನಲ್ಲಿ ಈವರೆಗೆ 1 ಕೋಟಿ 36 ಲಕ್ಷದ 99 ಸಾವಿರದ 18 ಡೋಸ್ ಲಸಿಕೆ ನೀಡಲಾಗಿದ್ದು, ಶೇಕಡಾ 88 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕಾಕರಣ ಹೆಚ್ಚಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿರುವ ಮಾಹಿತಿ ಪಡೆಯಲಾಗುತ್ತಿದೆ.
ಬಿಬಿಎಂಪಿಯು ಕೇರ್ ಇಂಡಿಯಾ ಸಹಯೋಗದಲ್ಲಿ 80 ದ್ವಿಚಕ್ರ ವಾಹನ ಹಾಗೂ 16 ಕಾರು “ಲಸಿಕೆ ವಾಹನ”ಗಳಿಗೆ ಇಂದು ಚಾಲನೆ ನೀಡಲಾಯಿತು. ನಗರದಲ್ಲಿ ಕಡಿಮೆ ಲಸಿಕೆಯಾಗಿರುವ ಪ್ರದೇಶಕ್ಕೆ ತೆರಳಿ ಲಸಿಕೆ ನೀಡುವುದು ಇದರ ಉದ್ದೇಶವಾಗಿದೆ.
ವಿಶೇಷ ಆಯುಕ್ತರು ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. pic.twitter.com/PFDIhYZAYu
— Gaurav Gupta (@BBMPCOMM) November 24, 2021