ಮನೆ ಮಾಡಿ, ರಾಜಕೀಯ ಆರಂಭಿಸಿದ ಮಾಜಿ ಶಾಸಕ ಅನೀಲ್ ಲಾಡ್

ಬಳ್ಳಾರಿ: ಜಿಲ್ಲೆಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮಾಜಿ ಶಾಸಕ ಅನೀಲ್ ಲಾಡ್ ಹೊಸ ಮನೆಯನ್ನು ಖರೀದಿಸಿದ್ದು, ಮನೆಯ ಗೃಹಪ್ರವೇಶ ನೆರವೇರಿಸಿದ್ದಾರೆ.

2023 ರ ಚುನಾವಣೆಗಾಗಿ ಅಭ್ಯರ್ಥಿಗಳು ಕಸರತ್ತು ನಡೆಸಲು ಆರಂಭಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಅವರ ವಿರುದ್ಧ ತೀರಾ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಮಾಜಿ ಶಾಸಕ ಅನೀಲ್ ಲಾಡ್ ಬಳ್ಳಾರಿಯಲ್ಲಿ ಮನೆ ಮಾಡುವ ಮೂಲಕ ರಾಜಕೀಯ ಚಟುವಟಿಕೆಗೆ ಮತ್ತಷ್ಟು ಮೆರಗು ತಂದಿದ್ದಾರೆ.

ಬಳ್ಳಾರಿಯ ನಗರ ಕ್ಷೇತ್ರದ ನೇಲೆ ಕಣ್ಣು ಇಟ್ಟಿರುವ ಅನೀಲ್ ಲಾಡ್‍ರವರು ಮನೆ ಮಾಡಿದ್ದು ರಾಜಕೀಯ ರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರಿಸಲು ನಗರದ ಮಾಜಿ ಶಾಸಕ ಅನಿಲ್ ಲಾಡ್ ಮತ್ತೆ ನಗರದಲ್ಲಿ ಮನೆ ಮಾಡಿದ್ದಾರೆ.

ನಗರದ ಬಳ್ಳಾರಿ ಕ್ಲಬ್ ಹಿಂಭಾಗದ ವೀರನಗೌಡ ಕಾಲೋನಿ ಮನೆ ಸಂಖ್ಯೆ 17ರ ಮೊದಲ ಮಹಡಿಯಲ್ಲಿ ಪತ್ನಿ ಆರತಿ ಲಾಡ್ ಅವರೊಂದಿಗೆ ಗೃಹ ಪ್ರವೇಶದ ಹೋಮ ಪೂಜೆಗಳನ್ನು ನೆರವೇರಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ನಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ಇದ್ದು, ಎಲ್ಲರೂ ತಮ್ಮ ತಮ್ಮ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ:ನಾಳೆಯಿಂದ ಮಾಲ್ ಓಪನ್ – ಶುಚಿಗೊಳಿಸುತ್ತಿದ್ದಾರೆ ಸಿಬ್ಬಂದಿ

The post ಮನೆ ಮಾಡಿ, ರಾಜಕೀಯ ಆರಂಭಿಸಿದ ಮಾಜಿ ಶಾಸಕ ಅನೀಲ್ ಲಾಡ್ appeared first on Public TV.

Source: publictv.in

Source link