
ಆರೋಪಿಗಳಿಂದ ವಶ ಪಡಿಸಿಕೊಂಡ ಬೈಕ್ಗಳು
ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ದೀನ್ ಖಾನ್ ಬಂಧಿತ ಆರೋಪಿಗಳು.
ಬೆಂಗಳೂರು: ನಗರದ ಭಾರತೀನಗರ ಪೊಲೀಸರ ಕಾರ್ಯಾಚರಣೆಯಿಂದ ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ ಮಾಡಲಾಗಿದೆ. ಆಂಧ್ರಪ್ರದೇಶ ಮೂಲದ ಲಕ್ಷ್ಮೀಪತಿ ಬಂಧಿತ ಆರೋಪಿ. ಆಡುಗೋಡಿ, ಭಾರತೀನಗರ ಸುತ್ತಮುತ್ತ ಬೈಕ್ ಕದಿದ್ದ ಆರೋಪಿ, ಈ ಬಗ್ಗೆ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಬಂಧನದಿಂದ 4 ಲಕ್ಷ ಮೌಲ್ಯದ 10 ಬೈಕ್ ಗಳು ವಶ ಪಡಿಸಿಕೊಳ್ಳಲಾಗಿದೆ. ಅದೇ ರೀತಿಯಾಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಯುಸೂಫ್ ಮತ್ತು ಫರ್ದೀನ್ ಖಾನ್ ಬಂಧಿತ ಆರೋಪಿಗಳು. ಸುಬ್ರಹ್ಮಣ್ಯಪುರ, ಚಂದ್ರಾಲೇಔಟ್, ಬಂಡೆಪಾಳ್ಯ, ಬ್ಯಾಟರಾಯನಪುರ ಸೇರಿ ನಗರದ ಹಲವೆಡೆ ಕಳ್ಳತನ ಮಾಡಿದ್ದರು. ಆರುವರೆ ಲಕ್ಷ ಮೌಲ್ಯದ ಎಂಟು ಬೈಕ್ಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.