ಮನ್ಸೂರ್ ಅಲಿಖಾನ್ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು ಸಿದ್ದರಾಮಯ್ಯ | Question of Mansoor Ali from RS poll fray does not arise says Siddaramaiah ARBಸಿದ್ದರಾಮಯ್ಯ ಮಾತಾಡುತ್ತಿರುವ ವರಸೆ ನೋಡಿದರೆ ಅವರು ಈಗಾಗಲೇ ಕೆಲ ಜೆಡಿ(ಎಸ್) ಶಾಸಕರೊಂದಿಗೆ ಮಾತುಕತೆ ನಡೆಸಿರುವಂತಿದೆ. ಯಾಕೆಂದರೆ ಶುಕ್ರವಾರದ ಸುದ್ದಿಗೋಷ್ಟಿಯಲ್ಲಿ ಅವರು ಬಹಳ ಆತ್ಮವಿಶ್ವಾಸದಿಂದ ಮಾತಾಡಿದರು.

TV9kannada Web Team


| Edited By: Arun Belly

Jun 03, 2022 | 4:55 PM
Bengaluru: ಕರ್ನಾಟಕದಿಂದ ರಾಜ್ಯಸಭೆಗೆ (Rajya Sabha) ಆಯ್ಕೆಯಾಗಲಿರುವ ನಾಲ್ಕನೇ ಸದಸ್ಯ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚುತ್ತಿದೆ ಮಾರಾಯ್ರೇ. ನಾಮಪತ್ರ ಹಿಂತೆಗೆದುಕೊಳ್ಳಲು ಶುಕ್ರವಾರ ಕೊನೆಯ ದಿನವಾಗಿದ್ದು ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ (Mansoor Ali Khan) ಅವರನ್ನು ಕಣದಿಂದ ಹಿಂದೆ ಸರಿಸುವುದಿಲ್ಲ ಎಂದು ಹೇಳುತ್ತಿದೆ. ಶುಕ್ರವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪಕ್ಷದ ಹಿರಿಯ ಧುರೀಣ ಸಿದ್ದರಾಮಯ್ಯ (Siddaramaiah) ಈ ಅಂಶವನ್ನು ಸ್ಪಷ್ಟಪಡಿಸಿದರು. ಹೈಕಮಾಂಡ್ ನಿಂದ ಅದೇಶ ಬಂದ ನಂತರವೇ ಮನ್ಸೂರ್ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ, ಹಾಗಾಗಿ ಅವರನ್ನು ಕಣದಿಂದ ಹಿಂದೆ ಸರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಏತನ್ಮಧ್ಯೆ, ಜೆಡಿ(ಎಸ್) ಪಕ್ಷದ ಕುಪೇಂದ್ರ ರೆಡ್ಡಿಗೆ ಬೆಂಬಲ ಸೂಚಿಸುವಂತೆ ಅದರ ನಾಯಕರು ಕಾಂಗ್ರೆಸ್ ಪಕ್ಷದ ದುಂಬಾಲು ಬಿದ್ದಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕುಪೇಂದ್ರ ಅವರ ಪರ ವೋಟು ಮಾಡಲು ಅವರ ಆಪ್ತ ಸ್ನೇಹಿತ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ತಯಾರಿದ್ದಾರೆ ಮತ್ತು ಹೈ ಕಮಾಂಡ್ ಗೆ ಮನವರಿಕೆ ಮಾಡಿಸಲು ಖುದ್ದು ಖರ್ಗೆ ದೆಹಲಿಗೆ ಹೋಗಿದ್ದಾರೆ.

ಸಿದ್ದರಾಮಯ್ಯ ಮಾತಾಡುತ್ತಿರುವ ವರಸೆ ನೋಡಿದರೆ ಅವರು ಈಗಾಗಲೇ ಕೆಲ ಜೆಡಿ(ಎಸ್) ಶಾಸಕರೊಂದಿಗೆ ಮಾತುಕತೆ ನಡೆಸಿರುವಂತಿದೆ. ಯಾಕೆಂದರೆ ಶುಕ್ರವಾರದ ಸುದ್ದಿಗೋಷ್ಟಿಯಲ್ಲಿ ಅವರು ಬಹಳ ಆತ್ಮವಿಶ್ವಾಸದಿಂದ ಮಾತಾಡಿದರು. ಹೆಲ್ತ್ ಚೆಕಪ್ ಗಾಗಿ ಸಿಂಗಪೂರ್ ಗೆ ಹೋಗಿರುವ ಜೆಡಿ(ಎಸ್) ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಅವರು ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಮೂರೂ ಪಕ್ಷಗಳು ತಮ್ಮ ತಮ್ಮ ಶಾಸಕರು ಆಮಿಷಕ್ಕೊಳಗಾಗದಂತಿರಲು ಅವರನ್ನು ಚುನಾವಣೆ ನಡೆಯುವ ದಿನದವರೆಗೆ ರೆಸಾರ್ಟ್​ಗಳಿಗೆ ಕರೆದೊಯ್ಯಬಹುದು. ಒಬ್ಬ ಅಭ್ಯರ್ಥಿಯ ಆಯ್ಕೆಗೆ ಬೇರೆ ಬೇರೆ ಕುತೂಹಲಕಾರಿ ಸಂಗತಿಗಳು ವಾರಾಂತದಲ್ಲಿ ನಡೆಯುವುದಂತೂ ನಿಶ್ಚಿತ ಮಾರಾಯ್ರೇ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *