ಅಚ್ಚರಿ ಏನಿಸಿದರೂ ನೀವು ಓದುತ್ತಿರುವುದು ಸತ್ಯ. ಪಿ.ಮಮತಾ ಬ್ಯಾನರ್ಜಿ ಜೂನ್​ 13ರ ಭಾನುವಾರ ಎ.ಎಂ.ಸೋಷಿಯಲಿಸಂ ನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂತಹದೊಂದು ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕ್ಷಣ ಕಾಲ ಇದನ್ನು ನೋಡಿದವರು ಇದು ತಮಾಷೆಗಾಗಿ ಮಾಡಿರೋ ಆಮಂತ್ರಣ ಪತ್ರಿಕೆಯಂತೆ ತೋರಿದರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿಯ ಕುಟುಂಬಸ್ಥರು ಮಾತ್ರ ಇದು ನಿಜ ಎಂದು ಹೇಳುತ್ತಿದ್ದಾರೆ.

ಇಂತಹದೊಂದು ವಿಶೇಷ ಮದುವೆ ನಡೆಯುತ್ತಿರುವುದು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ. ವರ ಸೋಷಿಯಲಿಸಂ ಅವರ ತಂದೆ ಲೆನಿನ್ ಮೋಹನ್ ಸೇಲಂ ಜಿಲ್ಲೆಯ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಇವರು ಸ್ಥಳೀಯವಾಗಿ ಮೋಹನ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಅವರಿಗೆ ಸಾಕಷ್ಟು ಮೊಬೈಲ್​ ಕರೆಗಳು ಬರುತ್ತಿವೆ.

ಅಂದಹಾಗೇ, ಸ್ಥಳೀಯ ಮಾಧ್ಯಮವೊಂದಕ್ಕೆ ಮಾತನಾಡುತ್ತಾ ಮದುವೆ ಆಮಂತ್ರಣ ಪತ್ರಿಕೆಯ ಹಿಂದಿನ ಕುತೂಹಲ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಮೋಹನ್ ತಮ್ಮ ಮಕ್ಕಳಿಗೆ ಸಿದ್ಧಾಂತಗಳ ಹೆಸರನ್ನು ಇಡಲು ಬಯಸಿದ್ದರು. ಇದರಂತೆ ತಮ್ಮ ಮಕ್ಕಳಿಗೆ ಸೋಷಿಯಲಿಸಂ ಎಂದು ಹೆಸರಿಟ್ಟಿದ್ದರು. ಇನ್ನು ವಧು ಹೆಸರಿನ ಬರುವುದಾದರೆ, ಅವರ ಅಜ್ಜ ಕಾಂಗ್ರೆಸ್​​ ಪಕ್ಷದ ಬೆಂಬಲಿಗರಾಗಿದ್ದು, ಮಮತಾ ಬ್ಯಾನರ್ಜಿ ಅವರ ಕ್ರಮಗಳಿಂದ ಸ್ಫೂರ್ತಿ ಪಡೆದು ಮೊಮ್ಮಗಳಿಗೆ ಅವರ ಹೆಸರನ್ನೇ ಇಟ್ಟಿದ್ದರು. ಇವರ ಮದುವೆ ಕಾರ್ಯಕ್ರಮ ಕೋವಿಡ್​ ಕಾರಣದಿಂದ ಕುಟುಂಬಸ್ಥರು ಹಾಗೂ ಆಪ್ತರಿಗೆ ಸಮ್ಮುಖದಲ್ಲಿ ಮಾತ್ರ ನಡೆಸಲು ನಿರ್ಧರಿಸಿದ್ದೇವು. ಇದರಂತೆ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡದೇ, ಸಾಮಾಜಿಕ ಜಾಲತಾಣದ ಮೂಲಕ ಎಲ್ಲ ಆಪ್ತರಿಗೂ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಮೋಹನ್​ ಅವರು ತಮ್ಮ ಇನ್ನಿಬ್ಬರು ಮಕ್ಕಳಿಗೂ ಸಿದ್ಧಾತಗಳ ಹೆಸರನ್ನೇ ನಾಮಕರಣ ಮಾಡಿದ್ದು, ಕಮ್ಯುನಿಸಂ ಹಾಗೂ ಲೆನಿನಿಸಂ ಎಂದು ಹೆಸರಿಟ್ಟಿದ್ದಾರೆ. ಈ ಪರಂಪರೆ ಮುಂದಿನ ತಲೆಮರಿಗೂ ಮುಂದುವರಿಸಿಕೊಂಡು ಬಂದಿರುವ ಮೋಹನ್​ ಅವರು ತಮ್ಮ ಕಮ್ಯುನಿಸಂ ಮಗನಿಗೆ ಮಾರ್ಕ್ಸಿಸಂ ಎಂದು ನಾಮಕರಣ ಮಾಡಿದ್ದಾರೆ.

The post ಮಮತಾ ಬ್ಯಾನರ್ಜಿ ಜೊತೆಗೆ ಸೋಷಿಯಲಿಸಂ ಮದುವೆ- ಏನಿದು ಇನ್ವಿಟೇಶನ್ ಕಾರ್ಡ್ ಸೀಕ್ರೆಟ್? appeared first on News First Kannada.

Source: newsfirstlive.com

Source link