‘ಮರಕ್ಕರ್’ ಪೋಸ್ಟರ್​ ಔಟ್​​.. ‘ಮಹಾನಟಿ’ ಹೊಸ ಅವತಾರಕ್ಕೆ ಏನಂದ್ರು ಫ್ಯಾನ್ಸ್?


ಕೀರ್ತಿ ಸುರೇಶ್​ ಟಾಲಿವುಡ್​, ಕಾಲಿವುಡ್​, ಮಾಲಿವುಡ್​ನಲ್ಲಿ ಮಿಂಚುತ್ತಿರುವ ಪ್ರತಿಭೆ. ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿ ಸೈ ಎನಿಸಿ ಕೊಂಡಿದ್ದಾರೆ ಕೀರ್ತಿ ಸುರೇಶ್​. ಸದ್ಯ ಕೀರ್ತಿ ​ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಅದೇನಂದ್ರೆ ಕೀರ್ತಿ ಸುರೇಶ್​ ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​ ಜೊತೆ ‘ಮರಕ್ಕರ್’​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಪ್ರಿಯದರ್ಶನ್​ ಆ್ಯಕ್ಷನ್​ ಕಟ್​ ಹೇಳಿದ್ದು, ಐತಿಹಾಸಿಕ ಸಿನಿಮಾ ಅಗಿದೆ. ಮರಕ್ಕರ್​ ಸಿನಿಮಾದಲ್ಲಿ ಮೋಹನ್​ ಲಾಲ್​, ಕೀರ್ತಿ ಸುರೇಶ್, ಅರ್ಜುನ್​ ಸರ್ಜಾ, ಸುನೀಲ್​ ಶೆಟ್ಟಿ, ಸುಹಾಸಿನಿ ಹೀಗೆ ಸ್ಟಾರ್​ ನಟರ ದಂಡೇ ಇದೆ. ಹೀಗಾಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳೇ ಇದೆ.

ಸದ್ಯ ಸಿನಿಮಾದಲ್ಲಿ ಕೀರ್ತಿ ಸುರೇಶ್​ ಮೇಕ್​ ಓವರ್​ ಬಗ್ಗೆ ಚರ್ಚೆ ಶುರುವಾಗಿದೆ. ಚಿತ್ರ ತಂಡ ಬಿಟ್ಟಿರುವ ಸಾಕಷ್ಟು ಕೀರ್ತಿ ಸುರೇಶ್​ರ ಫೋಟೋಗಳು ಭಾರತದ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ಅವರ ಚಿತ್ರಗಳನ್ನು ಹೋಲುತ್ತಿವೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಈ​ ಸಿನಿಮಾದಲ್ಲಿ ಕೀರ್ತಿ ‘ಆರ್ಚಾ’ ಕ್ಯಾರೆಕ್ಟರ್​ ಮಾಡುತ್ತಿದ್ದು, ಆರ್ಚಾ ಕ್ಯಾರೆಕ್ಟರ್​ ನ ಪೋಸ್ಟರ್​ಗಳನ್ನು ರಿಲೀಸ್​ ಮಾಡಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚು ಮಾಡಿದೆ ಸಿನಿಮಾ ತಂಡ. ಅಂದಹಾಗೆ ಆದಷ್ಟು ಬೇಗೆ ಚಿತ್ರಮಂದಿರಗಳಿಗೆ ಲಗ್ಗೆ ಇಡೋ ತಯಾರಿಯಲ್ಲಿದೆ ಮರಕ್ಕರ್​ ಚಿತ್ರತಂಡ.

News First Live Kannada


Leave a Reply

Your email address will not be published. Required fields are marked *