ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವು, ಲೈಂಗಿಕ ಕಿರುಕುಳ ಆರೋಪ ಬೆನ್ನಲ್ಲೇ ಶಿಕ್ಷಕ ಎಸ್ಕೇಪ್ | Karnataka Police Crime News Accident Death Theft Crime News details here


ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವು, ಲೈಂಗಿಕ ಕಿರುಕುಳ ಆರೋಪ ಬೆನ್ನಲ್ಲೇ ಶಿಕ್ಷಕ ಎಸ್ಕೇಪ್

ಸಾಂಕೇತಿಕ ಚಿತ್ರ

ಕೋಲಾರ: ಪೊಲೀಸರ ಸೋಗಿನಲ್ಲಿ ಬಂದು ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕಕುಂತೂರು ಬಳಿ ನಡೆದಿದೆ. ಕಾರಿನಲ್ಲಿ ಬಂದಿದ್ದ 6 ಜನರಿಂದ ದುಷ್ಕೃತ್ಯ ಎಸಗಲಾಗಿದೆ. ಕಟ್ಟಿಗೇನಹಳ್ಳಿಯ ಶಬ್ಬೀರ್ ಬೇಗ್​ನನ್ನ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ 2 ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಆಂಧ್ರ ಪೊಲೀಸರು ಎಂದು ಹೇಳಿ ಹಣ, ಕಾರು ದರೋಡೆ ಮಾಡಿದ್ದಾರೆ. ಪಿಸ್ತೂಲ್ ತೋರಿಸಿ ಬೆದರಿಸಿ ದರೋಡೆ ಮಾಡಲಾಗಿದೆ. 1,700 ನಗದು, ಮೊಬೈಲ್​​, ಕಾರು ದೋಚಿದ್ದಾರೆ. ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶಿವಮೊಗ್ಗ: ಕಡಿದ ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವು
ಕಡಿದ ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ಗ್ರಾಮದಲ್ಲಿ ನಡೆದಿದೆ. 5 ವರ್ಷದ ವರ್ಷಿಣಿ ಸಾವನ್ನಪ್ಪಿರುವ ದುರ್ದೈವಿ. MPM ಸ್ವಾಮ್ಯದ ಮರಗಳ ಕಡಿಯಲು ಬಳ್ಳಾರಿಯಿಂದ ಜಿಲ್ಲೆಗೆ ಬಡ ಕುಟುಂಬಗಳು ಬಂದಿದ್ದವು. ಈ ವೇಳೆ, ಘಟನೆ ಸಂಭವಿಸಿದೆ. ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ ಪೋಷಕರ ಆಕ್ರೋಶ ಕೇಳಿಬಂದಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾರ್ಮಾಡಿ: ಘಾಟ್​ನಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಶವ ಹೊರಕ್ಕೆ
ಚಾರ್ಮಾಡಿ ಘಾಟ್​ನಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಶವ ಹೊರಕ್ಕೆ ತೆಗೆಯಲಾಗಿದೆ. ಮುಖಕ್ಕೆ ಗುಂಡಿಟ್ಟು ಹತ್ಯೆ ಮಾಡಿ ಆರೋಪಿಗಳು ಶವ ಹೂತಿಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದರುತಳ ಸಮೀಪ ನಾಗರಾಜ್​ ಆಚಾರ್​ ಶವ ಹೂತಿಟ್ಟಿದ್ರು. ಐದು ದಿನಗಳ ಹಿಂದೆ ನಾಗೇಶ್ ಆಚಾರ್ ಕಣ್ಮರೆಯಾಗಿದ್ದರು. ಕೃಷ್ಣೇಗೌಡ ಎಂಬಾತ ನಾಗೇಶ್ ಮನೆಗೆ ಬಂದು ಜೀಪ್​​​ನಲ್ಲಿ ಕರೆದೊಯ್ದಿದ್ದ. ಕೊಲೆ ಮಾಡಿ ಮಣ್ಣಿನಡಿ ಶವ ಹೂತು ನಾಟಕವಾಡಿದ್ದ. ಇದೀಗ, ಪ್ರಮುಖ ಆರೋಪಿ ಕೃಷ್ಣೇಗೌಡ ಸೇರಿದಂತೆ ಮತ್ತಿಬ್ಬರ ಬಂಧನ ಮಾಡಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಶವ ಹೊರತೆಗೆಯಲಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೈಸೂರು: ಲಾಡ್ಜ್​​ನಲ್ಲಿ ಇಬ್ಬರು ಆತ್ಮಹತ್ಯೆ
ಮೈಸೂರಿನ ಮಂಡಿಮೊಹಲ್ಲಾದ ಲಾಡ್ಜ್​​ನಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಂಭವಿಸಿದೆ. ನಿನ್ನೆ ವಸತಿಗೃಹಕ್ಕೆ ಬಂದಿದ್ದ ಯುವಕ, ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಹಾಗೂ ಬೆಳಗ್ಗೆ ಹೊರಗೆ ಬಾರದ್ದಕ್ಕೆ ಪರಿಶೀಲನೆ ಮಾಡಲಾಗಿದೆ. ಈ ವೇಳೆ, ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಲಷ್ಕರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿದ ಲಷ್ಕರ್ ಠಾಣೆ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದೆ.

ರಾಣೆಬೆನ್ನೂರು: ಲೈಂಗಿಕ ಕಿರುಕುಳ ಆಪಾದನೆ ಬೆನ್ನಲ್ಲೇ ಶಿಕ್ಷಕ ಎಸ್ಕೇಪ್
ಲೈಂಗಿಕ ಕಿರುಕುಳ ಆಪಾದನೆ ಹಿನ್ನೆಲೆ ಶಾಲಾ ಶಿಕ್ಷಕ ಎಸ್ಕೇಪ್ ಆದ ಘಟನೆ ರಾಣೆಬೆನ್ನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆನ್​​ಲೈನ್ ಕ್ಲಾಸ್ ನೆಪದಲ್ಲಿ ಬಾಲಕಿ ನಂಬರ್ ಪಡೆದಿದ್ದ ಶಿಕ್ಷಕ, ಬಾಲಕಿ ಜತೆ ಚಾಟ್ ಮಾಡುತ್ತಾ ಅಶ್ಲೀಲ ಪದಗಳ ಬಳಕೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಯತ್ನ ಎಂದು ಪೋಷಕರ ಆರೋಪ ಕೇಳಿಬಂದಿದೆ. ಖಾಸಗಿ ಶಾಲೆಯ ಕನ್ನಡ ಶಿಕ್ಷಕ ಮಲ್ಲಪ್ಪ ತಳವಾರ ಈಗ ನಾಪತ್ತೆ ಆಗಿದ್ದಾನೆ. ಪೋಷಕರ ಆಕ್ರೋಶ, ಆರೋಪದ ಬೆನ್ನಲ್ಲೇ ಆರೋಪಿ ಶಿಕ್ಷಕ ನಾಪತ್ತೆ ಆಗಿದ್ದಾನೆ. ಆರೋಪಿ ವಿರುದ್ಧ ಕ್ರಮಕ್ಕೆ ಶಿಕ್ಷಣ ಇಲಾಖೆಗೆ ಮನವಿಯ ಭರವಸೆ ನೀಡಲಾಗಿದೆ. ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರಿಂದ ಭರವಸೆ ನೀಡಿದೆ.

ಬಾಗಲಕೋಟೆ: ಸೆಲ್ಫಿ ತೆಗೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವಕ ಸಾವು
ಸೆಲ್ಫಿ ತೆಗೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವಕ ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿ ನಡೆದಿದೆ. ನದಿಗೆ ಬಿದ್ದು ಯುವಕ ಸಾವನ್ನಪ್ಪಿದ್ದಾರೆ. ವಿಜಯಪುರದ ತಜಮಿಲ್ ಮೈನುದ್ದೀನ್ ಬಹದ್ದೂರ್ (20) ಸಾವನ್ನಪ್ಪಿರುವ ಯುವಕ. ಸಂಬಂಧಿಕರ ಮನೆಗೆ ದೇವರ ಕಾರ್ಯಕ್ಕೆ ಬಂದಿದ್ದ ಯುವಕ, ನೀರುಪಾಲಾಗಿದ್ದಾರೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ನೈಸ್​ ರೋಡ್​ ಬಳಿ ಅಪಘಾತದಲ್ಲಿ ಇಬ್ಬರು ದುರ್ಮರಣ
ನೈಸ್​ ರೋಡ್​ ಬಳಿ ಅಪಘಾತದಲ್ಲಿ ಇಬ್ಬರು ದುರ್ಮರಣವನ್ನಪ್ಪಿದ ಘಟನೆ ಬೆಂಗಳೂರಿನ ಹೊಸಕೆರೆ ಬಳಿಯ ನೈಸ್​ ರೋಡ್​ ಜಂಕ್ಷನ್​ನಲ್ಲಿ ನಡೆದಿದೆ. ರಸ್ತೆಯಲ್ಲಿ ರಾಗಿ ಕಣ ಮಾಡುತ್ತಿದ್ದವರಿಗೆ ಕಾರು ಡಿಕ್ಕಿ ಆಗಿದೆ. ಅಪಘಾತದಲ್ಲಿ ಬಿಂದು(29), ಹೊನ್ನಮ್ಮ(68) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬಳಿಕ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ನೆಲಮಂಗಲ: ಗುಂಡೇನಹಳ್ಳಿ ಬಳಿ ಕಾರು-ಕ್ಯಾಂಟರ್ ನಡುವೆ ಅಪಘಾತ
ಗುಂಡೇನಹಳ್ಳಿ ಬಳಿ ಕಾರು-ಕ್ಯಾಂಟರ್ ನಡುವೆ ಅಪಘಾತವಾಗಿದೆ. ಬಳಿಕ, ಕಾರು ಚಾಲಕನಿಂದ ಕ್ಯಾಂಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ರಾಷ್ಟ್ರೀಯ ಹೆದ್ದಾರಿ-4ರ ಗುಂಡೇನಹಳ್ಳಿ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಘಟನೆ ನಡೆದಿದೆ. ಕ್ಯಾಂಟರ್ ಚಾಲಕ ನರಸಪ್ಪಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ನಡೆಸಿದ್ದ ಕಾರು ಚಾಲಕ ರಂಗಸ್ವಾಮಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ದಾಬಸ್​​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗದಗ: ಈರುಳ್ಳಿ ತುಂಬಿದ್ದ ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವು
ಈರುಳ್ಳಿ ತುಂಬಿದ್ದ ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ ದುರ್ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೆರ ನಾಗನೂರು ಗ್ರಾಮದ ಬಳಿ ಸಂಭವಿಸಿದೆ. ಲಕ್ಷ್ಮವ್ವ ಛಲವಾದಿ (46), ಯಮುನಮ್ಮ (51) ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೂಲಿ ಕೆಲಸ ಮುಗಿಸಿ ಹೊಲದಿಂದ ವಾಪಸಾಗುವಾಗ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೋಲಾರ: ವರ್ತಕನನ್ನ ಬೆದರಿಸಿ ಲಂಚ ಪಡೆದಿದ್ದ ಕಾನ್ಸ್​​ಟೇಬಲ್​ ಸೆರೆ
ವರ್ತಕನನ್ನ ಬೆದರಿಸಿ ಲಂಚ ಪಡೆದಿದ್ದ ಕಾನ್ಸ್​​ಟೇಬಲ್​ ಸೆರೆ ಆದ ಘಟನೆ ಕೋಲಾರ ಗಲ್‌ಪೇಟೆಯಲ್ಲಿ ನಡೆದಿದೆ. ಪೊಲೀಸರಿಂದ ಪ್ರವೀಣ್ ಬಂಧನ ಮಾಡಲಾಗಿದೆ. ಪ್ರವೀಣ್, ಜಿಲ್ಲಾ ಸಶಸ್ತ್ರ ಮೀಸಲು‌ ಪಡೆಯ ಕಾನ್ಸ್​ಟೇಬಲ್​ ಆಗಿದ್ದು, ಹೋಟೆಲ್ ಮಾಲೀಕ ವೇಣುಗೋಪಾಲ್​ ಬಳಿ ಲಂಚ ಕೇಳಿದ್ದ. ನಾಯಿಗೆ ತರಬೇತಿ ನೀಡುವ ನೆಪದಲ್ಲಿ ಲಂಚ ಪಡೆದಿದ್ದ. ಬೆದರಿಕೆ ಹಾಕಿ 50 ಸಾವಿರ ರೂಪಾಯಿ ಲಂಚ ಪಡೆದಿದ್ದ ಎಂದು ತಿಳಿದುಬಂದಿದೆ. ಗಲ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೆಲಮಂಗಲ: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ದಾಳಿ; ಓರ್ವನ ಬಂಧನ

ಇದನ್ನೂ ಓದಿ: ಗುಬ್ಬಿ: ಪ್ರೀತಿಸಿ ಮದುವೆಯಾದಗಿದ್ದ ಪತ್ನಿಯನ್ನೆ ಕೊಲೆ ಮಾಡಿದವನಿಗೆ ಜೀವಾವಧಿ ಶಿಕ್ಷೆ

TV9 Kannada


Leave a Reply

Your email address will not be published. Required fields are marked *