ಮರಳಿ ಮನಸ್ಸಾಗಿದೆ. ಇದು ಹೊಚ್ಚ ಹೊಸ ಸೀರಿಯಲ್‌. ಚಂದನ್‌ ಕುಮಾರ್ ಖಡಕ್ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ಬರ್ತಿರೋ ಧಾರವಾಹಿ. ಈ ಧಾರವಾಹಿ ಬಗ್ಗೆ ನಾವು ನಿಮಗೆ ತಿಳಿಸಿದ್ವಿ. ಮಾತು ಕೊಟ್ಟ ಮನಸುಗಳ ನಡುವೆ ಪ್ರೀತಿಯ ಸೇತುವೆ ಅನ್ನೋ ಟ್ಯಾಗ್‌ಲೈನ್ ಮೂಲಕ ಬರ್ತಿರೋ ಮರಳಿ ಮನಸ್ಸಾಗಿದೆ ಹೀರೋಯಿನ್‌ ಬಗ್ಗೆ ಹೇಳೋದನ್ನ ಮರೆತಿದ್ವಿ. ಈಗ ಹೇಳ್ತಿದ್ದೀವಿ ಕೇಳಿ.

ಈ ಪ್ರೋಮೋದಲ್ಲಿ ಇಷ್ಟವಿಲ್ಲದಿದ್ದರೂ ಕೊಟ್ಟ ಮಾತಿಗೆ ಬೆಲೆ ಕೊಟ್ಟು ಚಂದನ್​ ಹುಡುಗಿಯನ್ನು ಮದುವೆಯಾಗ್ತಾನೆ. ಆದ್ರೆ ಆ ಹುಡುಗಿಗು ಈ ಮದುವೆ ಇಷ್ಟವಿರುವುದಿಲ್ಲ. ಒಬ್ಬರನೊಬ್ಬರು ಇಷ್ಟಪಡದೆ ಮದುವೆಯಾಗಿ ಮುಂದೆ ಅವರು ಹೇಗೇ ಇರ್ತಾರೆ? ಏನೆಲ್ಲಾ ಕಷ್ಟಗಳು ಬರಬಹುದು ಎಂಬುವುದೆ ಈ ಧಾರವಾಹಿಯ ಮುಖ್ಯ ಕಥಾವಸ್ತು.

ಇದನ್ನೂ ಓದಿ: ಸದ್ಯದಲ್ಲೇ ತೆರೆ ಮೇಲೆ ಚಂದನ್ ಹೊಸ ಸೀರಿಯಲ್ –ಪ್ರೋಮೋ ಶೂಟ್​​​ಗೆ ನೂರು ಕಿ.ಮೀ ಓಡಿದ ನಟ

ಅಂದ್ಹಾಗೇ, ಚಂದನ್‌ ಜೊತೆ ನಟಿಸ್ತಿರೋದು ನಟಿ ದಿವ್ಯಾ ವಾಗುಕರ್​. ಈ ಧಾರವಾಹಿಯಲ್ಲಿ ಸ್ಪಂದನ ರೋಲ್​ಗೆ ಬಣ್ಣ ಹಚ್ಚಿದ್ದು.. ಎಸ್​ ಪಿ ವಿಕ್ರಾಂತ್​ ನಾಯಕ್​ ಪತ್ನಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ದಿವ್ಯಾಗೆ ತಮ್ಮನ್ನು ತಾವು ಪ್ರೂ ಮಾಡಿಕೊಳ್ಳೊದ್ದಕ್ಕೆ ಒಂದು ಒಳ್ಳೆಯ ಅವಕಾಶ ಅಂತಾ ಹೇಳಿದ್ರೆ ತಪ್ಪಾಗಲ್ಲ.
ಇನ್ನೂ ಈ ಮುಂಚೆ ದಿವ್ಯಾ ಗೀತಾ ಧಾರವಾಹಿಯಲ್ಲಿ ದಾಸವಾಳ ರೋಲ್​ ಮೂಲಕ ಜನರ ಮನಸ್ಸು ಗೆದ್ದಿದ್ರು. ದಿವ್ಯಾ ಅವರ ಪಾತ್ರ ಹಾಗೂ ವಿಭಿನ್ನ ಗೆಟಪ್​ ನೋಡೋರಿಗೆ ಇಷ್ಟವಾಗಿತ್ತು.

ಅದಕ್ಕೂ ಮುನ್ನಾ ಮಾಂಗಲ್ಯಂ​ ತಂತುನಾನೆನಾ ಸೀರಿಯಲ್​ನಲ್ಲಿ ಶ್ರಾವಣಿ ಪಾತ್ರದ ಮೂಲಕ ಜನ ಮನ ಗೆದ್ದಿದ್ದರು ದಿವ್ಯಾ ವಾಗುಕರ್​. ಈ ಧಾರವಾಹಿಯಲ್ಲಿ ಲೀಡ್​ ರೋಲ್​ನಲ್ಲಿ ಪ್ರೇಕ್ಷಕರನ್ನ ರಂಜಿಸಿದ್ರು. ಕೊರೊನಾದಿಂದ ಸೀರಿಯಲ್​ ಅರ್ಧಕ್ಕೆ ನಿಂತಿತ್ತು. ಬಳಿಕ ದಿವ್ಯಾ ಬೇರೆ ಯಾವ ಸೀರಿಯಲ್​ನಲ್ಲೂ ಕಾಣಿಸಿಕೊಂಡಿರಲಿಲ್ಲ.

ಈ ಮಧ್ಯೆ ಲೈಟ್​ ಆಗಿ ಲವ್​ ಆಗಿದೆ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್​ನಲ್ಲೂ ಕೂಡಾ ದಿವ್ಯಾ ಮಿಂಚಿದ್ದರು. ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೊಸ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗ್ತಾಯಿರುವ ದಿವ್ಯಾಗೆ ನಿಮ್ಮ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್.​

ಇದನ್ನೂ ಓದಿ: ‘ಕಾವ್ಯಾಂಜಲಿ’ ಧಾರವಾಹಿಗೆ ಹೊಸ ಟರ್ನಿಂಗ್.. ಟ್ವಿಸ್ಟ್ ಹೊತ್ತು ತಂದ ಮಂಡ್ಯ ರಮೇಶ್​

The post ‘ಮರಳಿ ಮನಸ್ಸಾಗಿದೆ’ ಎಂದ ದಿವ್ಯಾ ವಾಗುಕರ್ appeared first on News First Kannada.

Source: newsfirstlive.com

Source link