‘ಬದುಕಿನ ಗುರಿ ಮುಟ್ಟಲು ಪರಿಶ್ರಮ ಅತೀ ಮುಖ್ಯ’ ಅನ್ನೋದನ್ನ ಈ 7 ವರ್ಷದ ಬಾಲಕಿಯೊಬ್ಬಳ ಸ್ಫೂರ್ತಿದಾಯಕ ವಿಡಿಯೋ ಪುನರುಚ್ಛರಿಸಿದೆ. ಐಎಎಸ್​ ಅಧಿಕಾರಿ ಎಂ.ವಿ ರಾವ್ ಟ್ವಿಟರ್​​ನಲ್ಲಿ ಶೇರ್ ಮಾಡಿರುವ ವಿಡಿಯೋ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​​ ಆಗುತ್ತಿದೆ. ಜೊತೆಗೆ ಬಾಲಕಿಗೆ ಎಲ್ಲರೂ ಶಹಬ್ಬಾಶ್​​ಗಿರಿ ನೀಡುತ್ತಿದ್ದಾರೆ.

ವಿಡಿಯೋದಲ್ಲಿ ಬಾಲಕಿ ಮನೆಯ ಪಿಲ್ಲರ್​ ಏರಲು ಹಲವು ಬಾರಿ ಪ್ರಯತ್ನ ಮಾಡುತ್ತಾಳೆ. ಮೊದಲ ಪ್ರಯತ್ನದಲ್ಲಿ ಸಾಧ್ಯವಾಗಲ್ಲ. ಆದರೆ ಪದೇ ಪದೇ ಮೇಲೆ ಹತ್ತಲು ಪ್ರಯತ್ನ ಮಾಡುವ ಈ ಬಾಲಕಿ, ಕೊನೆಯಲ್ಲಿ ಪಿಲ್ಲರ್​ನ ತುದಿಯವರೆಗೂ ಹತ್ತಿ ಇಳಿಯುತ್ತಾಳೆ. ಬಳಿಕ ಆಕೆ ತಾನು ಗೆದ್ದೆ ಅಂತಾ ಜೋಶ್​ ಅಲ್ಲಿ ಜೋರಾಗಿ ಕೂಗುತ್ತಾಳೆ.

ವಿಡಿಯೋ ಶೇರ್​ ಮಾಡಿರುವ ಐಎಎಸ್​ ಅಧಿಕಾರಿ ಡಾ.ಎಂ.ವಿ.ರಾವ್.. ‘ಈ ಮಗು ನನ್ನ ಗುರು’ ಎಂದು ಬರೆದುಕೊಂಡಿದ್ದಾರೆ.

The post ಮರಳಿ ಯತ್ನವ ಮಾಡು.. ಈ ಬಾಲಕಿಯೇ ಎಲ್ಲರಿಗೂ ಸ್ಫೂರ್ತಿ appeared first on News First Kannada.

Source: newsfirstlive.com

Source link