ದಾವಣಗೆರೆ: ಜಿಲ್ಲೆಯ ಎಸ್​ಪಿ ರಿಷ್ಯಂತ್​​ ಮರಳು ಅಡ್ಡೆ ಮೇಲೆ ರೇಡ್ ಮಾಡೋಕೆ ಸೂಚನೆ ನೀಡಿದ ಕಾರಣ ಶಾಸಕ ರೇಣುಕಾಚಾರ್ಯ ಆವಾಜ್ ಹಾಕಿದ್ದಾರೆ.

ಎಸ್​ಪಿ ಸೂಚನೆ ಮೇರೆಗೆ ನಿನ್ನೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಮರಳು ಅಡ್ಡೆ ಮೇಲೆ ಪೊಲೀಸರು ರೇಡ್ ಮಾಡಿದ್ದರು. ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ಸಿಪಿಐ ದೇವರಾಜ್ ದಾಳಿ ನಡೆಸಿದ್ದರು. ಇಂದು ದೇವರಾಜ್​ಗೆ ಕರೆ ಮಾಡಿದ ಶಾಸಕ ರೇಣುಕಾಚಾರ್ಯ ಎಸ್​ಪಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಬಂದ ತಕ್ಷಣ ದೊಡ್ಡ ಹೀರೋ ಏನ್ರಿ? ಮಟ್ಕಾ ಆಡೋರನ್ನ ಜೂಜಾಡೋರನ್ನ ಹಿಡೀರಿ. ಇಲ್ಲಿ ಬಂದು ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ. ಮರಳು ಗಣಿಗಾರಿಕೆ ಮಾಡೋರು ಅತ್ಯಾಚಾರ, ಕೊಲೆ ಮಾಡಿದ್ದಾರಾ..? ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಅವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ತಾಖತ್ ಇದ್ರೆ ಸೀಜ್ ಮಾಡಿರೋ ಮರಳನ್ನ ತುಂಬಿ ನೋಡೋಣ ಎಂದು ರೇಣುಕಾಚಾರ್ಯ ಬಹಿರಂಗವಾಗಿಯೇ ಎಸ್​ಪಿಗೆ ಪ್ರಶ್ನೆ ಮಾಡಿದ್ದಾರೆ.

ಮೊನ್ನೆ ಹೊನ್ನಾಳಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಅವಾಜ್ ಹಾಕಿದ್ದ ರೇಣುಕಾಚಾರ್ಯ, ಇಂದು ಎಸ್​​ಪಿಗೆ ಆವಾಜ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

The post ಮರಳು ಗಣಿಗಾರಿಕೆ ಮಾಡೋರು ಅತ್ಯಾಚಾರ, ಕೊಲೆ ಮಾಡಿದ್ದಾರಾ..? SPಗೆ ರೇಣುಕಾಚಾರ್ಯ ಆವಾಜ್ appeared first on News First Kannada.

Source: newsfirstlive.com

Source link